ನೂತನ ವಿಜಯನಗರ ಜಿಲ್ಲೆಗೂ ೩೭೧ ಜೆ ಸೌಲಭ್ಯ:ಸರ್ಕಾರ ಆದೇಶ

posted in: ರಾಜ್ಯ | 0

ನೂತನ ವಿಜಯನಗರ ಜಿಲ್ಲೆಗೆ ಸಂವಿಧಾನದ 371 ಜೆ ವಿಧಿ ಅಡಿ ಎಲ್ಲ ಸವಲತ್ತು ಸಿಗುವಂತೆ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ.
ಇದರಿಂದಾಗಿ ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ 371 ಜೆ ವಿಧಿ ಅಡಿ ಸಿಗುವ ಸವಲತ್ತುಗಳು ನೂತನ ವಿಜಯನಗರ ಜಿಲ್ಲೆಗೂ ಸಿಗಲಿದೆ. ವಿಧಿಯಲ್ಲಿ ಹಲವು ತಿದ್ದುಪಡಿಗಳನ್ನೂ ರಾಜ್ಯ ಸರಕಾರ ಮಾಡಿದೆ. ಪ್ಯಾರಾ 2 (ಇ)ನಲ್ಲಿ ‘ಮತ್ತು ಕೊಪ್ಪಳ ಜಿಲ್ಲೆ’ ಎಂದಿದ್ದಲ್ಲಿ, ಕೊಪ್ಪಳ ಮತ್ತು ವಿಜಯನಗರ ಎಂದು ಬದಲಾವಣೆ ಮಾಡಲಾಗಿದೆ. ಪ್ಯಾರಾ 3 (ಡಿ)ನಲ್ಲಿ ‘ಮತ್ತು ರಾಯಚೂರು ಜಿಲ್ಲೆಗಳು’ ಎಂದಿದ್ದಲ್ಲಿ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳು ಎಂದು ತಿದ್ದುಪಡಿ ಮಾಡಲಾಗಿದೆ. ಪ್ಯಾರಾ 17 (ಬಿ)ನಲ್ಲಿ ‘ಮತ್ತು ರಾಯಚೂರು ಜಿಲ್ಲೆ’ ಎಂದಿದ್ದಲ್ಲಿ ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳು ಎಂದು ರಾಜ್ಯ ಸರಕಾರ ತಿದ್ದುಪಡಿ ಮಾಡಿದೆ.
ಈ ಮೂಲಕ ನೂತನ ವಿಜಯನಗರ ಜಿಲ್ಲೆಗೂ 371 ಜೆ ಸವಲತ್ತು ದೊರಕುವಂತೆ ಸರಕಾರವು ಕ್ರಮ ವಹಿಸಿದೆ. ಇದರೊಂದಿಗೆ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಜತೆ ವಿಜಯನಗರ ಜಿಲ್ಲೆ ಏಳನೆಯ ಜಿಲ್ಲೆ ಆಗಿ ಸೇರ್ಪಡೆ ಆಗಿದೆ. ಶಿಕ್ಷಣ, ಔದ್ಯೋಗಿಕ ಜೊತೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಗುವ ಎಲ್ಲ ಸವಲತ್ತು ವಿಜಯನಗರ ಜಿಲ್ಲೆಯ ಜನರಿಗೆ ಲಭ್ಯ ಆಗಲಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಫೆಬ್ರವರಿ ಕೊನೆಯೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ ಸಾಧ್ಯತೆ: ಬಿ.ಕೆ ಹರಿಪ್ರಸಾದ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement