ಹೊಸಪೇಟೆ: ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಸಾವು, ಹಲವರು ಅಸ್ವಸ್ಥ

posted in: ರಾಜ್ಯ | 0

ಹೊಸಪೇಟೆ (ವಿಜಯನಗರ): ನಗರದಲ್ಲಿ ಕಲುಷಿತ ನೀರಿನ ಸೇವನೆಯಿಂದ ಮಹಿಳೆಯೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನಗರದ ರಾಣಿಪೇಟೆಯ 12ನೇ ಕ್ರಾಸ್‌ ನಿವಾಸಿ ಲಕ್ಷ್ಮಿದೇವಿ (50) ಮೃತ ಮಹಿಳೆಯಾಗಿದ್ದಾರೆ. 40 ಕ್ಕೂ ಹೆಚ್ಚು ಜನರು ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ. ಬಡಾವಣೆಯಲ್ಲಿ ಆರೋಗ್ಯ ಇಲಾಖೆಯವರು ಬೀಡು ಬಿಟ್ಟಿದ್ದು, ಜನರಿಗೆ ವಾಂತಿ, ಭೇದಿ ಪ್ರಕರಣಗಳು ನಿಲ್ಲುವ ಲಕ್ಷಣಗಳು … Continued

ಮೊಬೈಲ್ ಕೊಡಿಸಲಿಲ್ಲವೆಂದು ಸಾವಿನ ಹಾದಿ ಹಿಡಿದ ವಿದ್ಯಾರ್ಥಿ

posted in: ರಾಜ್ಯ | 0

ವಿಜಯನಗರ: ಮೊಬೈಲ್ ಕೊಡಿಸಿಲ್ಲ ಎಂದು ಮುನಿಸಿಕೊಂಡು ಮನೆ ಬಿಟ್ಟು ಹೋಗಿದ್ದ ವಿದ್ಯಾರ್ಥಿಯೊಬ್ಬ ಶವವಾಗಿ ಪತ್ತೆಯಾದ ಘಟನೆ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ತೊಲಹಳ್ಳಿ ಎಂಬ ಊರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಬಡತನದ ಕಾರಣಕ್ಕೆ ಪೋಷಕರಿಗೆ ಮೊಬೈಲ್ ಕೊಡಿಸಲಾಗಿರಲಿಲ್ಲ. ಮಗನನ್ನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ವಿಜಯನಗರದ ಕೊಟ್ಟೂರಿನ ಸನ್ನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ … Continued

ನೂತನ ವಿಜಯನಗರ ಜಿಲ್ಲೆಗೂ ೩೭೧ ಜೆ ಸೌಲಭ್ಯ:ಸರ್ಕಾರ ಆದೇಶ

posted in: ರಾಜ್ಯ | 0

ನೂತನ ವಿಜಯನಗರ ಜಿಲ್ಲೆಗೆ ಸಂವಿಧಾನದ 371 ಜೆ ವಿಧಿ ಅಡಿ ಎಲ್ಲ ಸವಲತ್ತು ಸಿಗುವಂತೆ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ. ಇದರಿಂದಾಗಿ ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ 371 ಜೆ ವಿಧಿ ಅಡಿ ಸಿಗುವ ಸವಲತ್ತುಗಳು ನೂತನ ವಿಜಯನಗರ ಜಿಲ್ಲೆಗೂ ಸಿಗಲಿದೆ. ವಿಧಿಯಲ್ಲಿ ಹಲವು ತಿದ್ದುಪಡಿಗಳನ್ನೂ ರಾಜ್ಯ ಸರಕಾರ ಮಾಡಿದೆ. ಪ್ಯಾರಾ 2 (ಇ)ನಲ್ಲಿ ‘ಮತ್ತು … Continued