ಪುದುಚೆರಿ ಮಾಜಿ ಸಿಎಂ ನಾರಾಯಣಸ್ವಾಮಿ ಕಾಂಗ್ರೆಸ್‌ ಮುಖಂಡರ ಚಪ್ಪಲಿ ಎತ್ತೋದ್ರಲ್ಲಿ ಪರಿಣಿತ: ಮೋದಿ ಟೀಕೆ

  1. ಪುದುಚೆರಿಯ ಹಿಂದಿನ ಮುಖ್ಯಮಂತ್ರಿ ನಾರಾಯಣಸ್ವಾಮಿ ಪಕ್ಷದ ಮುಖಂಡ ಚಪ್ಪಲಿಗಳನ್ನು ಎತ್ತುವಲ್ಲಿ ಪರಿಣಿತರಾಗಿದ್ದರೇ ಹೊರತು ಪುದುಚೆರಿಯ ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಪರಿಣಿತರಾಗಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
    ಪುದುಚೇರಿಯಲ್ಲಿ ಮಾತನಾಡಿದ ವರು,  ನಡೆಯುವ ಚುನಾವಣೆಯಲ್ಲಿ ಜನರು ಎನ್‌ಡಿಎ ಪರ ಮತಚಲಾಯಿಸಿದರೆ ಇಲ್ಲಿನ ಜನರನ್ನೇ ಹೈಕಮಾಂಡ್‌ ಎಂದು ಪರಿಗಣಿಸಲಾಗುವುದು. ರಾಜ್ಯದ ಜನರು ಕಾಂಗ್ರೆಸ್‌ ದುರಾಡಳಿತದಿಂದ ಮುಕ್ತರಾಗಿದ್ದಾರೆ. ಪುದುಚೇರಿಯಲ್ಲಿ ಬದಲಾವಣೆಯ ಗಾಳಿ ಗೋಚರಿಸುತ್ತದೆ ಎಂದರು.
    ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾತನಾಡಿದ್ದನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅನುವಾದ ಮಾಡಿದ ಹಿಂದಿನ ಸಿಎಂ ನಾರಾಯಣಸ್ವಾಮಿ ಕ್ರಮವನ್ನು ಖಂಡಿಸಿದ ಪ್ರಧಾನಿ, ಅಸಹಾಯಕ ಮಹಿಳೆ ಚಂಡಮಾರುತದ ಸಂದರ್ಭದಲ್ಲಿ ಮುಖ್ಯಮಂತ್ರಿಯ ನಿರ್ಲಕ್ಷ್ಯದ ಬಗ್ಗೆ ಅಳಲು ತೋಡಿಕೊಂಡರೆ ನಾರಾಯಣಸ್ವಾಮಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಎದುರು ತಮ್ಮ ಖೊಟ್ಟಿ ಸಾಧನೆ ಬಿಂಬಿಸಿಕೊಂಡರು ಎಂದರು.
    ರಾಹುಲ್ ಗಾಂಧಿಯವರ ಇತ್ತೀಚಿನ ದೇಶದ ‘ಉತ್ತರ-ದಕ್ಷಿಣ’ ವಿಭಜನೆ ಕುರಿತು ಮಾತನಾಡಿ, ನಮ್ಮ ವಸಾಹತುಶಾಹಿ ಆಡಳಿತಗಾರರು ವಿಭಜನೆ ಮತ್ತು ಆಡಳಿತದ ನೀತಿಯನ್ನು ಹೊಂದಿದ್ದಾರೆ ಎಂದು ಆರೋಪ ಮಾಡಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/
ಓದಿರಿ :-   ಟಿವಿಯಲ್ಲಿ ಇಡೀ ರಾಷ್ಟ್ರದ ಕ್ಷಮೆ ಕೇಳಬೇಕು, ದೇಶದಲ್ಲಿ ಏನಾಗಿದೆ ಅದಕ್ಕೆ ಏಕಾಂಗಿಯಾಗಿ ನೀವೇ ಜವಾಬ್ದಾರರು: ಪ್ರವಾದಿ ಹೇಳಿಕೆ ಬಗ್ಗೆ ನೂಪುರ್ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್‌

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ