ಇಂಥ ಪಿಚ್‌ಗಳಲ್ಲಿ ಬೌಲಿಂಗ್‌ ಮಾಡಿದ್ದರೆ ಕುಂಬ್ಳೆ-ಹರಭಜನ್‌ ೧೦೦೦, ೮೦೦ವಿಕೆಟ್‌ ಪಡೆಯುತ್ತಿದ್ದರು: ಚರ್ಚೆಗೆ ಗ್ರಾಸವಾದ ಯುವರಾಜ್‌ ಟ್ವೀಟ್‌

ಭಾರತ- ಇಂಗ್ಲೆಂಡ್ ಕ್ರಿಕೆಟ್‌ ಸರಣಿಯಲ್ಲಿ ಪಿಚ್‌ಗಳ ಸುತ್ತ ಚರ್ಚೆಯು ಸಾಯುವಂತೆ ಕಾಣುತ್ತಿಲ್ಲ. ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಕೆಲವು ಮಾಜಿ ಇಂಗ್ಲೆಂಡ್ ಕ್ರಿಕೆಟಿಗರು ಚೆನ್ನೈ ಪಿಚ್ ಮೇಲೆ ಟೀಕೆ-ಟಪ್ಪಣಿ ಮಾಡಿದ ನಂತರ ಈಗ ಭಾರತ ತಂಡದ ನಿವೃತ್ತ ಆಟಗಾರ ಯುವರಾಜ್ ಸಿಂಗ್ ಅವರಂತಹ ಕೆಲವು ಪ್ರಸಿದ್ಧ ಮಾಜಿ ಕ್ರಿಕೆಟಿಗರು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕಾಗಿ ಪಿಚ್ನ ಬಗ್ಗೆ ಟೀಕಿಸಿದ್ದಾರೆ. ಇಲ್ಲಿ ನಡೆದ ಹಗಲು ರಾತ್ರಿಯ ಪಿಂಕ್‌ ಟೆಸ್ಟ್‌ ಎರಡು ದಿನಗಳಲ್ಲಿ ಕೊನೆಗೊಂಡಿದ್ದು, ಭಾರತ 10 ವಿಕೆಟ್‌ಗಳಿಂದ ಜಯಗಳಿಸಿದೆ.
ಭಾರತದ ಸ್ಪಿನ್ನರ್‌ಗಳಾದ ಅಕ್ಸರ್‌ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಅವರು ತಮ್ಮ ನಡುವೆಯೇ 18 ವಿಕೆಟ್‌ಗಳನ್ನು ಹಂಚಿಕೊಂಡರು. ಇಂಗ್ಲೆಂಡ್ಗೆ ಎರಡೂ ಇನ್ನಿಂಗ್ಸ್‌ಗಳನ್ನು ಒಟ್ಟುಗೂಡಿಸಿ 200 ರನ್ ಗಳಿಸಲು ಸಾಧ್ಯವಾಗದೇ ಹೋಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 112 ರನ್‌ಗಳಿಗೆ ಆಲೌಟ್‌ ಆದ ಇಂಗ್ಲೆಂಡ್‌ , 2 ನೇ ದಿನದ ಒಂದು ಸೆಷನ್‌ನಲ್ಲಿ ಕೇವಲ 81 ರನ್‌ಗಳಿಗೆ ಆಲೌಟ್ ಆಯಿತು – ಇದು ಭಾರತದ ವಿರುದ್ಧ ಇಂಗ್ಲಂಡಿನ ಅತ್ಯಂತ ಕಡಿಮೆ ಟೆಸ್ಟ್ ಸ್ಕೋರ್.
ಹಗಲು-ರಾತ್ರಿ ಟೆಸ್ಟ್‌ನಲ್ಲಿ 10 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್  ಎಂಬ ಹೆಗ್ಗಳಿಕೆಗೆ ಅಕ್ಸರ್‌  ಪಟೇಲ್ ಪಾತ್ರರಾದರೆ, ೭ ವಿಕೆಟ್‌ ಪಡೆದ ಅಶ್ವಿನ್‌  ವೇಗವಾಗಿ 400 ಟೆಸ್ಟ್ ವಿಕೆಟ್‌ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ  ಪಾತ್ರರಾದರು.
ಭಾರತಕ್ಕಾಗಿ ಆಡುವಾಗ ಹರ್ಭಜನ್ ಸಿಂಗ್ ಮತ್ತು ಅನಿಲ್ ಕುಂಬ್ಳೆ ಇದೇ ರೀತಿಯ ಪಿಚ್‌ಗಳನ್ನು ಹೊಂದಿದ್ದರೆ, ಅವರು ಕ್ರಮವಾಗಿ 800 ಮತ್ತು 1000 ಟೆಸ್ಟ್ ವಿಕೆಟ್‌ಗಳನ್ನು ಗಳಿಸಬಹುದಿತ್ತು ಎಂದು ಯುವರಾಜ್ ಹೇಳಿರುವುದು ಈಗ ಕ್ರಿಕೆಟ್‌ ಫ್ಯಾನ್‌ಗಳ ಚರ್ಚೆಗೆ ಗ್ರಾಸವಾಗಿದೆ.
ಎರಡು ದಿನಗಳಲ್ಲಿ ಮುಗಿದಿದೆ ಅದು ಟೆಸ್ಟ್ ಕ್ರಿಕೆಟ್‌ಗೆ ಒಳ್ಳೆಯದಾಗಿದೆಯೆ ಎಂದು ಖಚಿತವಾಗಿಲ್ಲ! ಅನಿಲ ಕುಂಬ್ಳೆ ಮತ್ತು ಹರಭಜನ್‌ ಸಿಂಗ್‌ ಅವರು ಈ ರೀತಿಯ ವಿಕೆಟ್‌ಗಳಲ್ಲಿ ಬೌಲ್‌ ಮಾಡಿದರೆ ಅವರು ಸಾವಿರ ಮತ್ತು 800 ವಿಕೆಟ್‌ ಪಡೆಯುತ್ತಿದ್ದರು ಎಂದು ಯುವರಾಜ್‌ ಸಿಂಗ್‌ ಟ್ವೀಟ್ ಮಾಡಿದ್ದಾರೆ.
ಆದರೆ ಇದೇ ಸಂರ್ಭದಲ್ಲಿ ಅಕ್ಸರ್, ಅಶ್ವಿನ್ ಮತ್ತು ಇಶಾಂತ್ ಅವರನ್ನು ಅಭಿನಂದಿಸಲು ಮರೆಯಲಿಲ್ಲ.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement