ಕೊರೊನಾ ಪ್ರಕರಣ: ಭಾರತ ವಿಶ್ವದಲ್ಲಿ ನಂ.೨, ಆದರೆ ಕೊವಿಡ್‌ ವೈಜ್ಞಾನಿಕ ಅಧ್ಯಯನದ ಪಾಲು ಶೇ.೬.೭ ಮಾತ್ರ

ಭಾರತವು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ. ಹೆಚ್ಚಿನ ಪ್ರಮಾಣದ ಸೋಂಕುಗಳ ಹೊರತಾಗಿಯೂ, ಕೋವಿಡ್ -19 ಕುರಿತ ಜಾಗತಿಕ ವೈಜ್ಞಾನಿಕ ಸಂಶೋಧನೆಯಲ್ಲಿ ಭಾರತದ ಪಾಲು ಕೇವಲ 6.7 ಶೇಕಡಾ ಮಾತ್ರ ಎಂದು ಹೊಸ ಅಧ್ಯಯನದಿಂದ ತಿಳಿದುಬಂದಿದೆ.
2020 ರ ಅಕ್ಟೋಬರ್ 5 ರ ವರೆಗೆ ಒಟ್ಟು 87,515 ಸಂಶೋಧನಾತ್ಮಕ ಅಧ್ಯಯನದ ಪ್ರಕಟಣೆಗಳನ್ನು ಮಾಡಲಾಗಿದ್ದು, ಅದರಲ್ಲಿ ಅಮೆರಿಕದ ಪಾಲು ಶೇಕಡಾ 32.5 ರಷ್ಟು (17,129 ಲೇಖನಗಳು) ಎಂದು ಸೈಂಟೊಮೆಟ್ರಿಕ್ಸ್ ಜರ್ನಲ್‌ನಲ್ಲಿ ಈ ತಿಂಗಳ ಆರಂಭದಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ.
ಅಮರಿಕದ ನಂತರ ನಂತರ ಚೀನಾ ಮತ್ತು ಇಟಲಿ, ಭಾರತ ಮತ್ತು ಬ್ರಿಟನ್‌ ಮೊದಲ ಐದು ಸ್ಥಾನಗಳನ್ನು ಪಡೆದಿವೆ.
ಚೀನಾದ ಜೆಜಿಯಾಂಗ್ ವಿಶ್ವವಿದ್ಯಾಲಯದ ಸಂಶೋಧಕರ ಸಹಯೋಗದೊಂದಿಗೆ ಅಮೆರಿಕದ ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಜಾನ್ ಗ್ಲೆನ್ ಕಾಲೇಜ್ ಆಫ್ ಪಬ್ಲಿಕ್ ಅಫೇರ್ಸ್ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ.
ಹೆಚ್ಚು ಪೀಡಿತ ರಾಷ್ಟ್ರಗಳು ಹೆಚ್ಚಿನ ಸಂಖ್ಯೆಯ ಕೊರೊನಾ ವೈರಸ್ ಕುರಿತ ಸಂಶೋಧನಾತ್ಮಕ ಅಧ್ಯಯನವನ್ನು ಪ್ರಕಟಿಸುತ್ತವೆ. ಅದರ ಔಟ್‌ಪುಟ್ ಸೋಂಕಿನ ದರಕ್ಕೆ ಹೆಚ್ಚು ನಿಕಟವಾಗಿರುತ್ತದೆ ಗಿ ಎಂದು ಅಧ್ಯಯನವು ತಿಳಿಸಿದೆ. , ಭಾರತದಂತಹ ದೇಶಗಳು ಕೊವಿಡ್‌ ಸಾಂಕ್ರಮಿಕ ರೋಗದ ಆರಂಭದ ಹತ್ತಕ್ಕಿಂತ ಹೆಚ್ಚಾಗಿ ನಂತರದ ಹಂತದಲ್ಲಿ ಹೆಚ್ಚಿನ ಪ್ರಮಾಣದ ಪ್ರಕಟಣೆಗಳನ್ನು ದಾಖಲಿಸಿವೆ.
ಅಧ್ಯಯನದ ಪ್ರಕಾರ, ಕೋವಿಡ್ ಪ್ರಕಟಣೆಗಳ ಸಂಖ್ಯೆಯಲ್ಲಿ ದೊಡ್ಡ “ಉತ್ಕರ್ಷ” ಕಂಡುಬಂದಿದೆ. ಇದು ಪ್ರಕಟಣೆಗಳನ್ನು ಮೂರು ಅವಧಿಗಳಲ್ಲಿ ವಿಂಗಡಿಸಿದೆ: ಅವಧಿ 1 : 1 ಜನವರಿ 1 ರಿಂದ 2020 ಏಪ್ರಿಲ್ 8 ರ ವರೆಗೆ (4,875 ಲೇಖನಗಳು); ಅವಧಿ 2: 9 ಏಪ್ರಿಲ್ ನಿಂದ ಜುಲೈ 12 ರ ವರೆಗೆ (39,138); ಮತ್ತು ಅವಧಿ 3: 13 ಜುಲೈನಿಂದ ಅಕ್ಟೋಬರ್ 5 ರ ವರೆಗೆ (43,502).

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

ಭಾರತ, ಅಮೆರಿಕ, ರಷ್ಯಾ ಚೀನಾ,ಫ್ರಾನ್ಸ್, ಬ್ರೆಜಿಲ್, ಬ್ರಿಟನ್‌, ಸ್ಪೇನ್, ಬೆಲ್ಜಿಯಂ ಮತ್ತು ಪೋಲೆಂಡ್ ಹೀಗೆ ಸಂಶೋಧನಾ ಅವಧಿಯಲ್ಲಿ ಹೆಚ್ಚು ಪರಿಣಾಮ ಬೀರಿದ 10 ದೇಶಗಳಲ್ಲಿ ಒಂಭತ್ತರ ಮೇಲೆ ದತ್ತಾಂಶವನ್ನು ಕೇಂದ್ರೀಕರಿಸಲಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement