ಪೆನ್ – ಎಮರ್ಜನ್ಸಿ ಲೈಟಲ್ಲಿ ಚಿನ್ನ ಸಾಗಾಟ ಮಾಡಿದ್ರೂ ಸಿಕ್ಕಿಬಿದ್ದರು

ಮಂಗಳೂರು: ಪೆನ್ ಹಾಗೂ ಎಮರ್ಜನ್ಸಿ ಲೈಟಿನ ಬ್ಯಾಟರಿಯಲ್ಲಿ ಚಿನ್ನ ಅಡಗಿಸಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಾಸರಗೋಡಿನ ಅಬ್ದುಲ್ ರಶೀದ್ ಹಾಗೂ ಅಬ್ದುಲ್ ನಿಸಾದ್ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ದುಬೈನಿಂದ ಮಂಗಳೂರಿಗೆ ಬಂದಿದ್ದರು. ಆರೋಪಿ ಅಬ್ದುಲ್ ರಶೀದ್ ಪೌಡರ್ ರೂಪದ ಚಿನ್ನವನ್ನು ಮೂರು ಉಂಡೆಗಳಾಗಿಸಿ ತಂದಿದ್ದ. ಅಬ್ದುಲ್ ನಿಸಾದ್ ಪೆನ್ ಮತ್ತು ಎಮರ್ಜೆನ್ಸಿ ಲೈಟಿನ ಬ್ಯಾಟರಿಯಲ್ಲಿ ಚಿನ್ನವನ್ನು ಅಡಗಿಸಿಟ್ಟಿದ್ದ. ಆದರೂ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಅಧಿಕಾರಿಗಳು ತಪಾಸಣೆ ವೇಳೆ ಇಬ್ಬರೂ ಸಿಕ್ಕಿಬಿದ್ದಿದ್ದು, 1 ಕೆ.ಜಿ ಚಿನ್ನ ವಶಕ್ಕೆ ಪಡೆದಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಹಗರಣ: ಬಿಜೆಪಿ ಮಾಜಿ ಶಾಸಕ ಡಿ.ಎಸ್. ವೀರಯ್ಯ ಬಂಧನ

ನಿಮ್ಮ ಕಾಮೆಂಟ್ ಬರೆಯಿರಿ

advertisement