ಉತ್ತರ ನೈಜೀರಿಯಾದಲ್ಲಿ ೩೧೭ ಬಾಲಕಿಯರ ಸಾಮೂಹಿಕ ಅಪಹರಣ

ಉತ್ತರ ನೈಜಿರಿಯಾದ ಬೋರ್ಡಿಂಗ್‌ ಶಾಲೆಯಿಂದ ಶನಿವಾರ ಒಂದೇ ಬಾರಿಗೆ ೩೧೭ ಬಾಲಕಿಯರ ಸಾಮೂಹಿಕ ಅಪಹರಣ ನಡೆದಿದೆ.
ಪಶ್ಚಿಮ ಆಫ್ರಿಕಾದ ಜಂಗೆಬೆ ಟೌನ್‌ ಸರಕಾರಿ ಬಾಲಕಿಯರ ಮಾಧ್ಯಮಿಕ ಶಾಲೆಯ ಮೇಲೆ ಬಂದೂಕುದಾರಿಗಳು ದಾಳಿ ನಡೆಸಿ ವಿದ್ಯಾರ್ಥಿನಿಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಹಾಗೂ ಮಿಲಿಟರಿ ಜಂಟಿ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿನಿಯರ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಜಾಮ್‌ಪಾರ್‌ ಪೊಲೀಸರ ವಕ್ತಾರ ಮೊಹಮ್ಮದ್‌ ಶೇಹು ತಿಳಿಸಿದ್ದಾರೆ.
ತಮ್ಮ ಮಗಳನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಈ ಶಾಲೆಯಲ್ಲಿ 10 ರಿಂದ 13 ವರ್ಷದ ಮಕ್ಕಳು ಓದುತ್ತಿದ್ದರು ಎಂದು ವಿದ್ಯಾರ್ಥಿನಿಯೊಬ್ಬಳ ಪೋಷಕರಾದ ನಸೀರು ಅಬ್ದುಲ್ಲಾಹಿ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. ಶಾಲೆಯ ಬಳಿ ಸೈನಿಕರ ಪಡೆಯಿದ್ದರೂ ಸಹ ಮಕ್ಕಳನ್ನು ರಕ್ಷಿಸಲು ಅವರಿಂದ ಸಾಧ್ಯವಾಗಲಿಲ್ಲ ಎಂಬುದು ನಿರಾಶಾದಾಯಕವಾಗಿದೆ. ಈ ಹಂತದಲ್ಲಿ ನಾವು ದೇವರ ಮೊರೆ ಹೋಗಿದ್ದೇವೆ. ಬಂದೂಕುಧಾರಿಗಳು ಸಮೀಪದ ಮಿಲಿಟರಿ ಕ್ಯಾಂಪ್ ಮತ್ತು ಚೆಕ್ ಪಾಯಿಂಟ್ ಮೇಲೆ ದಾಳಿ ನಡೆಸಿದ್ದರಿಂದ ಸೈನಿಕರು ಮಧ್ಯ ಪ್ರವೇಶಿಸುವಲ್ಲಿ ತಡವಾಗಿದೆ.
ಬಂದೂಕುಧಾರಿ ಉಗ್ರರು ಶಾಲೆಯಲ್ಲಿ ಹಲವು ಗಂಟೆಗಳ ಕಾಲ ಉಳಿದಿದ್ದರು ಎಂದು ಸ್ಥಳೀಯ ನಿವಾಸಿ ಮೂಸಾ ಮುಸ್ತಾಫಾ ಹೇಳಿದ್ದಾರೆ. ಹಣಕ್ಕಾಗಿ ಇಲ್ಲವೇ ಜೈಲಿನಲ್ಲಿರುವ ತಮ್ಮ ಗುಂಪಿನ ಸದಸ್ಯರನ್ನು ಬಿಡುಗಡೆ ಮಾಡಲು ಅಪಹರಣ ಮಾಡಿರುವ ಸಾಧ್ಯತೆಯಿದೆ. ನೈಜೀರಿಯ ಅಧ್ಯಕ್ಷ ಮುಹಮ್ಮದು ಬುಹಾರಿ ಮಾತನಾಡಿ, ಸರ್ಕಾರದ ಪ್ರಥಮ ಆದ್ಯತೆ ಎಲ್ಲ ಶಾಲೆಯ ಒತ್ತೆಯಾಳುಗಳನ್ನು ಸುರಕ್ಷಿತವಾಗಿ, ಜೀವಂತವಾಗಿ, ಯಾವುದೇ ಹಾನಿಗೊಳಗಾಗದ ರೀತಿಯಲ್ಲಿ ಹಿಂದಿರುಗಿಸುವಂತೆ ನೋಡಿಕೊಳ್ಳುವುದಾಗಿದೆ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆ ಖಂಡನೆ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಅವರು ಅಪಹರಣ ಘಟನೆಯನ್ನು ತೀವ್ರವಾಗಿ ಖಂಡಿಸಿ, ಶಾಲೆಗಳ ಮೇಲಿನ ದಾಳಿಯು ಮಾನವ ಹಕ್ಕುಗಳು ಮತ್ತು ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಇದೇ ರೀತಿ ಡಿಸೆಂಬರ್ 2020ರಲ್ಲಿ ಕಟ್ಸಿನಾ ರಾಜ್ಯದ ಕಂಕಾರಾದ ಸರ್ಕಾರಿ ವಿಜ್ಞಾನ ಕಿರಿಯ ಮಾಧ್ಯಮಿಕ ಶಾಲೆ 344 ವಿದ್ಯಾರ್ಥಿಗಳನ್ನು ಅಪಹರಿಸಿ, ನಂತರ ಬಿಡುಗಡೆ ಮಾಡಲಾಗಿತ್ತು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಅಮೆರಿಕದ ಅಣ್ವಸ್ತ್ರ ತಾಣದ ಮೇಲೆ ಚೀನಾದ 'ಪತ್ತೇದಾರಿ' ಬಲೂನು ಹಾರಾಟ : ಪೆಂಟಗನ್

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement