ಪಕೋಡಾ ಮಾರುತ್ತಿರುವ ಚಿನ್ನ ವಿಜೇತ ಬಿಲ್ಲುಗಾರ್ತಿ ಮಮತಾ ಟುಡ್ಡು..!

ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಜಯಿಸಿರುವ ಬಿಲ್ಲುಗಾರ್ತಿ ಮಮತಾ ಟುಡ್ಡು ತೀವ್ರ ಬಡತನದ ಕಾರಣದಿಂದಾಗಿ ಧನಬಾದ್‌ ದಾಮೋದರಪುರ ಗ್ರಾಮದಲ್ಲಿ ಪಕೋಡಾ ಮಾರಾಟ ಮಾಡುತ್ತಿದ್ದಾಳೆ.

2010 ಮತ್ತು 2014 ರಲ್ಲಿ ಜೂನಿಯರ್ ಮತ್ತು ಸಬ್ ಜೂನಿಯರ್ ಮಟ್ಟದಲ್ಲಿ ಚಿನ್ನದ ಪದಕ ಗೆದ್ದ ರಾಷ್ಟ್ರಮಟ್ಟದ ಬಿಲ್ಲುಗಾರ್ತಿ ೨೩ರ ಹರೆಯದ ಮಮತಾ, ಪಕೋಡಾ, ಶೇಂಗಾ ಮಾರಾಟ ಮಾರುತ್ತಿದ್ದಾಳೆ. ನಿವೃತ್ತ ಬಿಸಿಸಿಎಲ್ ಉದ್ಯೋಗಿಯ ಮಗಳು ಮಮತಾ, 2018 ರಿಂದ ರಾಂಚಿಯಲ್ಲಿ ಬಿಲ್ಲುಗಾರಿಕೆಗಾಗಿ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ತರಬೇತಿ ಪಡೆಯುತ್ತಿದ್ದಳು. ಲಾಕ್‌ಡೌನ್‌ನಿಂದಾಗಿ ಅಕಾಡೆಮಿ ಮುಚ್ಚಿದ ನಂತರ ಅವಳು ತನ್ನ ದಾಮೋದರ್ಪುರ್ ನಿವಾಸಕ್ಕೆ ಮರಳಿದಳು. ಆದರೆ ಆರ್ಥಿಕ ಅಡಚಣೆಯಿಂದಾಗಿ ಮರಳಿ ಹೋಗಲು ಸಾಧ್ಯವಾಗದೇ ದಿನಸಿ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾಳೆ.

ಏಳು ಸಹೋದರ ಸಹೋದರಿಯರಲ್ಲಿ ನಾನು ಹಿರಿಯಳು. ನನ್ನ ತಂದೆಯ ಪಿಂಚಣಿ ಇನ್ನೂ ಸಿಗದಿದ್ದರಿಂದ ನನ್ನ ಕಿರಿಯ ಸಹೋದರರೆಲ್ಲರೂ ತಮ್ಮ ವಿದ್ಯಾಭ್ಯಾಸವನ್ನು ತ್ಯಜಿಸಬೇಕಾಯಿತು. ಆದ್ದರಿಂದ, ನಮ್ಮ ಕುಟುಂಬವು ರಸ್ತೆ ಬದಿಯ ಗೂಡಂಗಡಿಯಿಂದ ಬರುವ ಆದಾಯವನ್ನು ಸಂಪೂರ್ಣವಾಗಿ ಅವಲಂಬಿಸಿದೆ. ಅಲ್ಲಿ ನಾವು ಹುರಿದ ಮತ್ತು ಮೊಳಕೆಯೊಡೆದ ಕಾಳುಗಳು, ಪಕೋಡಾ ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡುತ್ತೇವೆ ಎಂದು ಟುಡ್ಡು ಹೇಳಿದರು.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

ನಾನು ಹಿರಿಯ ಮಟ್ಟದಲ್ಲಿ ಆಡುತ್ತಿದ್ದೇನೆ ಆದರೆ ಜೀವನ ನಿರ್ವಹಣೆಗೆ ಸರ್ಕಾರದ ಬೆಂಬಲ ಬೇಕು ಎಂದು ಮಮತಾ ಹೇಳುತ್ತಾಳೆ.

ಕುಟುಂಬದ ಆದಾಯವನ್ನು ಹೆಚ್ಚಿಸಲು ಮಮತಾ ತನ್ನ ಹಳ್ಳಿಯಲ್ಲಿ ಶೇಂಗಾ ಮತ್ತು ಪಕೋಡಾ ಮಾರಾಟ ಮಾಡುತ್ತಿದ್ದಾಳೆ ಎಂದು ತರಬೇತುದಾರ ಶಂಶಾದ್ ಹೇಳಿದರು.

ಯಾವುದೇ ಹಣಕಾಸಿನ ನೆರವಿಗಾಗಿ ಮಮತಾ ಆಗಲಿ ಅಥವಾ ಅವಳ ತಂದೆಯಿಂದ ಯಾವುದೇ ಅರ್ಜಿ ಬಂದಿಲ್ಲ. ಆದರೂ ಅವಳನ್ನು ಭೇಟಿ ಮಾಡಿ ಧನ ಸಹಾಯ ಮಾಡಲು ಪ್ರಯತ್ನಿಸುತ್ತೇವೆ ಎಂದು ಧನ್ಬಾದ್ ಬಿಲ್ಲುಗಾರಿಕೆ ಸಂಘದ ಜಿಲ್ಲಾ ಕಾರ್ಯದರ್ಶಿ ಜುಬೈರ್ ಆಲಂ ಅಭಿಪ್ರಾಯಪಟ್ಟಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement