ಲಾಹೋರ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಸರಕಾರದ ಶಾಸಕರೊಬ್ಬರು ಹಿಂದೂ ಸಮುದಾಯಕ್ಕೆ ಅಗೌರವ ತೋರುವ ಟ್ವೀಟ್ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ.
ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಶಾಸಕ ಅಮೀರ್ ಲಿಯಾಕತ್ ಹುಸೇನ್ ಅವರು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ವಿರೋಧ ಪಕ್ಷದ ನಾಯಕಿ ಮರಿಯಮ್ ನವಾಜ್ ಅವರನ್ನು ಅಪಹಾಸ್ಯ ಮಾಡಲು ಹಿಂದೂ ದೇವತೆಯ ಚಿತ್ರವನ್ನು ಟ್ವೀಟ್ ಮಾಡಿದಾಗ ವಿವಾದ ಉಂಟಾಗಿತ್ತು.
ಜನಪ್ರಿಯ ಟಿವಿ ಹೋಸ್ಟ್ ಮತ್ತು ಸುವಾರ್ತಾಬೋಧಕ ಮತ್ತು ಧಾರ್ಮಿಕ ವಿದ್ವಾಂಸನಾಗಿ ಪ್ರಸಿದ್ಧರಾದ ಹುಸೇನ್, ಟ್ವೀಟ್ ಮಾಡಿದ್ದನ್ನು ಹಲವು ಹಿಂದೂ ಸಂಘಟನೆಗಳ ಮುಖಂಡರು ಖಂಡಿಸಿದ್ದರು.
ವ್ಯಾಪಕ ಟೀಕೆಯ ನಂತರ ಹುಸೇನ್ ತಮ್ಮ ಟ್ವೀಟನ್ನು ಅಳಿಸಿದರಲ್ಲದೇ ಕ್ಷಮೆ ಕೋರಿದ್ದಾರೆ. ನನ್ನ ಟ್ವೀಟ್‌ನಿಂದ ಹಿಂದೂ ಸಮುದಾಯದ ಭಾವನೆಗಳಿಗೆ ಘಾಸಿಯಾಗಿದೆ. ನಾನು ಎಲ್ಲ ನಂಬಿಕೆಗಳನ್ನು ಗೌರವಿಸುತ್ತೇನೆ. ಇದನ್ನು ನನ್ನ ಧರ್ಮವು ನನಗೆ ಕಲಿಸಿದೆ ಎಂದು ಹೇಳಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/advertisement
ನಿಮ್ಮ ಕಾಮೆಂಟ್ ಬರೆಯಿರಿ