ಅಹ್ಮದಾಬಾದ ಕ್ರೀಡಾಂಗಣಕ್ಕಿಟ್ಟ ಮೋದಿ ಹೆಸರು ತೆಗೆಯಲು ‌ಸ್ವಾಮಿ ಆಗ್ರಹ

ಅಹ್ಮದಾಬಾದ್‌ ಕ್ರೀಡಾಂಗಣಕ್ಕಿಡಲಾದ ತಮ್ಮ ಹೆಸರನ್ನು ತೆಗೆದುಹಾಕಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಆಗ್ರಹಿಸಿದ್ದಾರೆ.
ಕ್ರೀಡಾಂಗಣಕ್ಕೆ ತಮ್ಮ ಹೆಸರಿಡುವಂತೆ ಹೇಳುವ ರಾಷ್ಟ್ರದ ನಾಯಕರು ಯಾರಾದರೂ ಇದ್ದಾರೆಯೇ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ನನ್ನ ಪ್ರಕಾರ ತಮ್ಮ ಹೆಸರಿಡುವಂತೆ ಸೂಚಿಸುವವರು ಸದ್ದಾಂ ಹುಸೇನ್ ಮತ್ತು ಗಡಾಫಿ ಇಬ್ಬರು ಮಾತ್ರ ಎಂದು ಅಭಿಪ್ರಾಯಪಟ್ಟರು.
ನೆಹರೂ, ಮಾವೋ ಅಥವಾ ಇದಿ ಅಮೀನ್ ಈ ರೀತಿ ಮಾಡಿದ್ದಾರಾ? ಮಾಡಿದ್ದರೆ ಅವರ ಹೆಸರನ್ನು ತೆಗೆದುಹಾಕಬೇಕು. ಅಹ್ಮದಾಬಾದ್‌ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಹೆಸರು ತೆಗೆದು ಮತ್ತೆ ಸರ್ದಾರ್ ಪಟೇಲ್ ಕ್ರೀಡಾಂಗಣ ಎಂದು ನಾಮಕರಣ ಮಾಡಬೇಕು. ಗುಜರಾತ್‌ ರಾಜ್ಯದ ಹಲವರು ಸರ್ದಾರ್‌ ಪಟೇಲ್‌ ಅವರ ಹೆಸರನ್ನು ತೆಗೆದುಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿಯವರನ್ನು ಕೇಳದೇ ಕ್ರೀಡಾಂಗಣಕ್ಕೆ ಹೆಸರಿಡಲಾಗಿತ್ತು. ಅದನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಹೇಳುವ ಮೂಲಕ ಗುಜರಾತ ಸರಕಾರ ಮುಜುಗರ ತಪ್ಪಿಸಿಕೊಳ್ಳಬಹುದು ಎಂದು ಸ್ವಾಮಿ ಸಲಹೆ ನೀಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement