ಪಿಎಸ್‌ಎಲ್‌ವಿಸಿ-೫೧ ಉಪಗ್ರಹ ಯಶಸ್ವಿ ಉಡಾವಣೆ: ಇಸ್ರೊ ಮತ್ತೊಂದು ಸಾಧನೆ

ಅಮೆಜೋನಿಯಾ-1 ಮತ್ತು ಇತರ 18 ಉಪಗ್ರಹಗಳನ್ನು ಹೊತ್ತ ಪಿಎಸ್ ಎಲ್ ವಿ-ಸಿ51 ಉಡಾವಣಾ ವಾಹಕವನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೊ ಸಂಸ್ಥೆ ಭಾನುವಾರ ಯಶಸ್ವಿಯಾಗಿ ಉಡಾಯಿಸಿದೆ.
ಬ್ರೆಜಿಲ್ ವಿನ್ಯಾಸಗೊಳಿಸಿ ಸಂಯೋಜಿಸಿರುವ ಮೊಟ್ಟಮೊದಲ ಉಪಗ್ರಹ ಇದಾಗಿದೆ. ಇದನ್ನು ಯಶಸ್ವಿಯಾಗಿ ಉಡಾಯಿಸಿರುವುದು ತೀವ್ರ ಸಂತಸ ಉಂಟುಮಾಡುತ್ತಿದೆ. ಉಪಗ್ರಹ ಉತ್ತಮ ಸ್ಥಿತಿಯಲ್ಲಿದ್ದು ಇದಕ್ಕಾಗಿ ನಾನು ಬ್ರೆಜಿಲ್‌ನ ವಿಜ್ಞಾನಿಗಳ ತಂಡವನ್ನು ಅಭಿನಂದಿಸುತ್ತೇನೆ ಎಂದು ಇಸ್ರೊ ಮುಖ್ಯಸ್ಥ ಕೆ. ಶಿವನ್ ಹೇಳಿದ್ದಾರೆ.
ಅಮೆಜೋನಿಯಾ-1 ಯಶಸ್ವಿಯಾಗಿ ಪಿಎಸ್ ಎಲ್ ವಿಸಿ51ನಿಂದ ನಾಲ್ಕನೇ ಹಂತದಲ್ಲಿ ಬೇರ್ಪಟ್ಟು ಕಕ್ಷೆಗೆ ಸೇರ್ಪಡೆಯಾಗಿದೆ. ಇದರೊಂದಿಗೆ ಇತರ ಉಪಗ್ರಹಗಳು ಕೂಡ ವಾಹಕದಿಂದ ಬೇರ್ಪಟ್ಟು ಕಕ್ಷೆಗೆ ಸೇರ್ಪಡೆಯಾಗುತ್ತಿದೆ ಎಂದು ಇಸ್ರೊ ಪ್ರಕಟನೆ ತಿಳಿಸಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

2.7 / 5. ಒಟ್ಟು ವೋಟುಗಳು 3

ಓದಿರಿ :-   ಅಲಿಗಢ ಕಾಲೇಜಿನ ತಿರಂಗಾ ಸಮಾವೇಶದಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ: ವಿದ್ಯಾರ್ಥಿಗಳು, ಪ್ರಾಂಶುಪಾಲರ ವಿರುದ್ಧ ಪ್ರಕರಣ

ನಿಮ್ಮ ಕಾಮೆಂಟ್ ಬರೆಯಿರಿ

advertisement