ಮೈಸೂರು ಮೇಯರ್‌ ಆಯ್ಕೆ ಗೊಂದಲಕ್ಕೆ ಸಿದ್ದರಾಮಯ್ಯನವರೇ ಕಾರಣ: ಸಾ.ರಾ.ಮಹೇಶ ತೀವ್ರ ವಾಗ್ದಾಳಿ

ಮೈಸೂರು: ಮೈಸೂರು ಮೇಯರ್‌ ಆಯ್ಕೆ ಗೊಂದಲಕ್ಕೆ ಸಿದ್ಧರಾಮಯ್ಯ ಅವರೇ ನೇರ ಕಾರಣ ಎಂದು ಜೆಡಿಎಸ್‌ ಮುಖಂಡ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟರು.
ಸಿದ್ದರಾಮಯ್ಯ ಜೆಡಿಎಸ್‍ ಟೀಕಿಸಿದ್ದರಿಂದ ಇಂದು ನಮಗೆ ಮೇಯರ್ ಸ್ಥಾನ ಲಭಿಸಿದೆ. ನಾವಾಗಿ ಮೇಯರ್ ಸ್ಥಾನ ಬಯಸಿರಲಿಲ್ಲ. ಜೆಡಿಎಸ್‍ಅನ್ನು ಹಗುರವಾಗಿ ಕಂಡಿದ್ದರಿಂದ ನಾವು ನಮ್ಮ ಪಕ್ಷದ ಅಭ್ಯರ್ಥಿ ಹಾಕಿ ಸ್ವತಂತ್ರವಾಗಿ ನಿಲ್ಲಿಸಿ ಜಯ ಗಳಿಸಿದ್ದೇವೆ. ಕಾಂಗ್ರೆಸ್‍ನಿಂದ ಜಯ ಗಳಿಸಿಲ್ಲ. ಅವರ ಬೆಂಬಲವನ್ನೂ ನಾವು ಬಯಸಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಅಂತಿಮ ಗಳಿಗೆಯಲ್ಲಿ ತನ್ವೀರ್ ಸೇಠ್ ಅವರು ಮೇಯರ್ ಸ್ಥಾನ ನಮಗೆ ಬಿಟ್ಟುಕೊಡಲು ತಿಳಿಸಿದ್ದರು. ಆದರೆ, ನಾವು ಅದಕ್ಕೆ ಬೆಂಬಲಿಸಲಿಲ್ಲ. ಕಳೆದ 20 ವರ್ಷಗಳ ಅವಧಿಯಲ್ಲಿ ನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಹಾಗಾಗಿ ಈ ಬಾರಿ ಅವರಿಗೆ ಅಧಿಕಾರ ನೀಡುವುದು ಬೇಡ. ನಾವೇ ಮೇಯರ್ ಸ್ಥಾನ ಬಿಟ್ಟುಕೊಡುತ್ತೇವೆ. ನಮಗೆ ಉಪಮೇಯರ್ ಸ್ಥಾನ ಬಿಟ್ಟುಕೊಡುವಂತೆ ತನ್ವೀರ್ ಸೇಠ್ ಅವರು ಹೇಳಿದ್ದರು. ಆಗಲೂ ನಾವು ಒಪ್ಪಿರಲಿಲ್ಲ. ಸ್ಥಳೀಯ ಮುಖಂಡರಿಗೆ ಈ ವಿಚಾರ ಬಿಟ್ಟಿದ್ದೆವು ಎಂದರ
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‍ನವರು ನಮ್ಮ ಮೇಯರ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ ಪರ ಮತ ಚಲಾಯಿಸಿದ್ದರಿಂದ ಅವರಿಗೆ ಉಪಮೇಯರ್ ಸ್ಥಾನ ಬಿಟ್ಟುಕೊಟ್ಟೆವು.ನಮ್ಮ ಲೆಕ್ಕಾಚಾರವೇ ಬೇರೆಯಾಗಿತ್ತು. ನಾವು ಮೂವರು ಸ್ವತಂತ್ರ ಅಭ್ಯರ್ಥಿಗಳ ಬೆಂಬಲದಿಂದ ಜೆಡಿಎಸ್ ಮೇಯರ್ ಗೆಲ್ಲಿಸಲು ಲೆಕ್ಕಾಚಾರ ಹಾಕಿದ್ದೆವು. ಚುನಾವಣೆಗೆ ಕೆಲ ಸಮಯ ಮುನ್ನ ಜಿ.ಟಿ.ದೇವೇಗೌಡ ಮತ್ತು ಸಂದೇಶ್ ನಾಗರಾಜ್ ಅವರು ಚುನಾವಣೆಗೆ ಭಾಗವಹಿಸುವುದಿಲ್ಲ ಎಂಬ ಮಾಹಿತಿ ತನ್ವೀರ್ ಸೇಠ್ ಅವರೇ ನೀಡಿ ಅವರು ಬರದಿದ್ದರೂ ಪರವಾಗಿಲ್ಲ, ನಾವೇ ನಿಮಗೆ ಬೆಂಬಲಿಸುತ್ತೇವೆ ಎಂದಿದ್ದರು. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ದೂರವಾಣಿ ಕರೆ ಮಾಡಿ ನಾನು ಅಧ್ಯಕ್ಷರಾದ ಸಂದರ್ಭದಲ್ಲಿ ಮೇಯರ್ ಸ್ಥಾನ ಸಿಗದಿದ್ದರೆ ಅಷ್ಟು ಸರಿಕಾಣುವುದಿಲ್ಲ. ಹಾಗಾಗಿ ಇದೊಂದು ಬಾರಿ ಮೇಯರ್ ಸ್ಥಾನ ಬಿಟ್ಟುಕೊಡಿ ಎಂದಿದ್ದರು. ಇದನ್ನು ಬಿಟ್ಟು ಬೇರೆ ಏನೂ ಮಾತನಾಡಿರಲಿಲ್ಲ.ಅಂತಿಮವಾಗಿ ಚುನಾವಣೆ ವೇಳೆಯಲ್ಲಿ ತನ್ವೀರ್ ಸೇಠ್ ನಿರ್ಧಾರ ಕೈಗೊಂಡು ಮೇಯರ್‌ಗೆ ಬೆಂಬಲಿಸಿದ್ದಾರೆ. ನಾವು ಮುಂದಿನ ವರ್ಷ ಕಾಂಗ್ರೆಸ್‍ನವರಿಗೆ ಬಿಟ್ಟುಕೊಡುತ್ತೇವೆ. ಮುಂದಿನ ಎಲ್ಲ ಚುನಾವಣೆಯಲ್ಲೂ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ. ಇದರಲ್ಲಿ ಕುಮಾರಸ್ವಾಮಿ ಅವರ ಯಾವುದೇ ಪಾತ್ರವಿಲ್ಲ ಎಂದು ಸಾ.ರಾ.ಮಹೇಶ್ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನೂತನ ಮೇಯರ್ ರುಕ್ಮಿಣಿ ಅವರು ತಮ್ಮ ಮೇಲಿನ ಸದಸ್ಯತ್ವ ವಿವಾದ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement