ದೆಹಲಿಗೂ ತಲುಪಲಿದೆಯೇ ಕಾಂಗ್ರೆಸ್‌ ಬಣ ರಾಜಕೀಯದ ಜಗಳ..?

ಬೆಂಗಳೂರು:  ಮೈಸೂರು ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜತೆ ಕಾಂಗ್ರೆಸ್ ಕೊನೆಕ್ಷಣದಲ್ಲಿ ಮಾಡಿಕೊಂಡ ಮೈತ್ರಿ ಕಾಂಗ್ರೆಸ್‌ನಲ್ಲಿ ಆಂತರಿಕ ಜಗಳಕ್ಕೆ ಕಾರಣವಾಗಿದೆ.

ಶುಕ್ರವಾರ ಶಾಸಕ ತನ್ವೀರ್‌ ಸೇಠ್‌ ಸಿದ್ದರಾಮಯ್ಯ ವಿರುದ್ಧ ಅಸಮಾದಾನ ವ್ಯಕ್ತಪಡಿಸಿದ ಬೆನ್ನಲ್ಲೇ ಏಕಪಕ್ಷೀಯವಾಗಿ ಮೈತ್ರಿ ನಿರ್ಧಾರ ತೆಗೆದುಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೈಕಮಾಂಡ್‌ಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರ ಪುತ್ರನ ವಿವಾಹದಲ್ಲಿ ಪಾಲ್ಗೊಳ್ಳಲು ಶನಿವಾರ  ಬೆಳಿಗ್ಗೆ ದೆಹಲಿಗೆ ಪ್ರಯಾನ ಬೆಳೆಸಿರುವ ಸಿದ್ಧರಾಮಯ್ಯ ಅಲ್ಲಿ ವರಿಷ್ಠ ನಾಯಕರನ್ನು ಭೇಟಿ ಮಾಡಿ ಡಿ.ಕೆ. ಶಿವಕುಮಾರ್ ವಿರುದ್ಧ ದೂರು ದೂರು ನೀಡುವ ಸಾಧ್ಯಗಳಿವೆ ಎಂಬ ಮಾತುಗಳು ಕಾಂಗ್ರೆಸ್‌ ಒಳವಲಯದಲ್ಲಿ ಕೇಳಿಬರುತ್ತಿದೆ.
ಜೆಡಿಎಸ್ ಜತೆಗಿನ ಮೈತ್ರಿ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿದ್ಧರಾಮಯ್ಯನವರ ಗಮನಕ್ಕೆ ತಾರದೆ ತಾವೇ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದು,   ಸಿದ್ಧರಾಮಯ್ಯ ಹಾಗೂ ಅವರ ಆಪ್ತರನ್ನು ಕೆರಳಿಸಿತ್ತು. ಈ ಬಗ್ಗೆ ಸಿದ್ದರಾಮಯ್ಯ ಕೆಲವು ಆಪ್ತ ನಾಯಕರು  ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಇದು ಈಗ  ಆಂತರಿಕ ಕಲಹಕ್ಕೂ ಕಾರಣವಾಗಿದೆ.
ತವರು ಜಿಲ್ಲೆ ಮೈಸೂರಿನಲ್ಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಮುಜುಗರಕ್ಕೊಳಗಾದ ಸಿದ್ದರಾಮಯ್ಯ ಈ ಬೆಳವಣಿಗೆಯಿಂದ ತೀವ್ರ ಅಸಮಾಧಾನಗೊಂಡಿದ್ದಾರೆ.
ಸಿದ್ದರಾಮಯ್ಯ ಹಾಗೂ ದೇವೇಗೌಡರ ಕುಟುಂಬದ ನಡುವೆ ಟೀಕೆ-ಪ್ರತಿಟೀಕೆ ತಾರಕ್ಕೇರಿದ ಈ ಸಂರ್ಭದಲ್ಲಿ ವಿಧಾನ ಪರಿಷತ್‌ ಸಭಾಪತಿ ವಿಷಯದಲ್ಲಿ ನಡೆದ ವಿದ್ಯಮಾನದ ನಂತರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಹಾವು ಮುಂಗುಸಿಯಾಗಿರುವಾಗ ಈ ಬೆಳವಣಿಗೆ ಒಮ್ಮೆಲೇ ಯಾಕಾಯಿತು ಎಂಬುದು ಸಿದ್ದರಾಮಯ್ಯ ಆಪ್ತ ನಾಯಕರ ಪ್ರಶ್ನೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

ಈಗಾಗಲೇ ಕೆಪಿಸಿಸಿ ಅಧ್ಯಕ್ಷರ   ನಿರ್ಧಾರಕ್ಕೆ ಮಾಜಿ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ಧರಾಮಯ್ಯ ಅವರನ್ನು ಕೇಳದೆ ಮೈತ್ರಿ ಮಾಡಿಕೊಂಡ ಬಗ್ಗೆ  ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ನೇರವಾಗಿ ಶಿವಕುಮಾರ ಅವರನ್ನೇ   ಪ್ರಶ್ನಿಸಿದ್ದಾರೆ. ಜೆಡಿಎಸ್‌ಗೆ ಮೈಸೂರು ಮೇಯರ್ ಸ್ಥಾನ ಬಿಟ್ಟುಕೊಟ್ಟ ಬಗ್ಗೆ ಸ್ಪಷ್ಟನೆ ನೀಡಿದ್ದ ಶಿವಕುಮಾರ್, ಇದು ನನ್ನ ನಿರ್ಧಾರವಲ್ಲ ಶಾಸಕ ತನ್ವೀರ್ ಸೇಠ್ ಮಾಡಿದ್ದು. ಸ್ಥಳೀಯ ರಾಜಕಾರಣಕ್ಕೆ ಹೈಕಮಾಂಡ್ ಇಲ್ಲ. ಹೀಗಾಗಿ ಮುಂದುರವರಿಯಲು ಹೇಳಲಾಗಿತ್ತು ಎಂದು ಸಮಜಾಯಿಷಿ ನೀಡಿದ್ದರೂ   ಶಾಸಕ ತನ್ವೀರ್ ಸೇಠ್ ಅವರಿಗೆ ನೋಟಿಸ್ ಜಾರಿ ಮಾಡುವಂತೆಯೂ ಕೆಲ ನಾಯಕರು ಒತ್ತಾಯಿಸಿದ್ದರು.ಈ ಮಧ್ಯೆ ಶನಿವಾರ ಶಾಸಕ ತನ್ವೀರ್‌ ಸೇಠ್‌ ಈ ಬೆಳವಣಿಗೆಗಳಿಂದ ತೀವ್ರ ಅಸಮಾಧಾನಗೊಂಡಿದ್ದು, ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದರು. ಅದರ ನಂತರ ಕಾಂಗ್ರೆಸ್‌ನಲ್ಲಿ ಈ ಮಾತುಕೇಳಿಬಂದಿದೆ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಗುಂಪು ಕಲಹ ಜೋರಾಗಿದ್ದ ಕರ್ನಾಟಕದಲ್ಲಿ ಈಗ ಮೈಸೂರು ಮೇಯರ್‌ ಆಯ್ಕೆ ಚುನಾವಣೆ ವಿದ್ಯಮಾನವೂ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ತಿಳಿದುಕೊಂಡಿದ್ದಕ್ಕಿಂತ ಜೋರಾಗಿಯೇ ಇದೆ ಎಂಬುದು ಬೀದಿಗೆ ಬರುವಂತಾಗಿದ್ದಂತೂ ಹೌದು .

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

 

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement