ನವದೆಹಲಿ: ಯುವತಿಯನ್ನು ಹಲವು ಬಾರಿ ಬಲಾತ್ಕಾರ ಮಾಡಿದ ಆರೋಪ ಎದುರಿಸುತ್ತಿರುವ ಸರಕಾರಿ ಉದ್ಯೋಗಿಯಾಗಿರುವ ಆರೋಪಿಗೆ ಸರ್ವೋಚ್ಚ ನ್ಯಾಯಾಲಯವು ಬಾಧಿತ ಹುಡುಗಿಯನ್ನು ಮದುವೆಯಾಗುತ್ತೀಯಾ? ಎಂದು ಪ್ರಶ್ನಿಸಿದೆ.
ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ನ್ಯಾಯಪೀಠ ಆರೋಪಿಗೆ “ನೀನು ಸರಕಾರಿ ಉದ್ಯೋಗಿಯಾಗಿ ಯುವತಿಯನ್ನು ಬಲತ್ಕಾರ ಮಾಡುವ ಮುಂಚೆ ವಿಚಾರ ಮಾಡಬೇಕಿತ್ತು. ಅವಳನ್ನು ಮದುವೆಯಾಗುವಂತೆ ನಾವು ನಿನಗೆ ಒತ್ತಾಯ ಮಾಡುವುದಿಲ್ಲ. ನಿನಗೆ ಅವಳನ್ನು ಮದುವೆಯಾಗಲು ಇಷ್ಟವಿದೆಯಾ? ನಂತರ ನೀವು ನನ್ನ ಮೇಲೆ ಒತ್ತಡ ಹೇರಿದಿರಿ ಎಂದು ಹೇಳಬೇಡʼ ಎಂದು ನ್ಯಾಯಪೀಠ ಕೇಳಿತು. ಈ ಕುರಿತು ಸಲಹೆ ಪಡೆದುಕೊಳ್ಳಲು ಕಾಲಾವಕಾಶ ಬೇಕೆಂದು ಆರೋಪಿ ಪರ ವಕೀಲರು ಮನವಿ ಮಾಡಿದರು.
ಮಹಾರಾಷ್ಟ್ರದ ವಿದ್ಯುತ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ೨೩ರ ಹರೆಯದ ಮೋಹಿತ್ ಚವ್ಹಾಣ, ೨೦೨೧ರ ಫೆಬ್ರವರಿ ೫ರಂದು ಮುಂಬೈ ಉಚ್ಚ ನ್ಯಾಯಾಲಯದ ತಮ್ಮ ನಿರೀಕ್ಷಣಾ ಜಾಮೀನು ರದ್ದುಪಡಿಸಿದ ಆದೇಶವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸೆಷನ್ಸ್ ಕೋರ್ಟ್ ೨೦೨೦ ಜನವರಿ ೬ರಂದು ಮೋಹಿತ್‌ಗೆ ನಿರೀಕ್ಷಣಾ ಜಾಮೀನು ನೀಡಿತ್ತು.
ಅತ್ಯಾಚಾರಕ್ಕೊಳಗಾದ ಯುವತಿ ೨೦೧೪-೧೫ರಲ್ಲಿ ೯ನೇ ತರಗತಿಯಲ್ಲಿದ್ದ ಸಂದರ್ಭದಿಂದಲೂ ಆರೋಪಿ ಅವಳನ್ನು ಹಿಂಬಾಲಿಸುತ್ತಿದ್ದನು. ಒಂದು ದಿನ ಅವಳ ಮನೆಗೆ ಬಂದು ಅವಳನ್ನು ಬಲಾತ್ಕಾರ ಮಾಡಿದನು. ಇದನ್ನು ಬಹಿರಂಗಪಡಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದನು. ಮುಂದೆ ಅವಳ ಶೋಷಣೆ ಮುಂದುವರೆಸಿದ. ೨೦೧೮ರಲ್ಲಿ ಯುವತಿ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದಳು. ಈ ಸಂದರ್ಭದಲ್ಲಿ ಆರೋಪಿ ಮೋಹಿತ್ ಚವ್ಹಾಣ ಹಾಗೂ ಅವನ ತಾಯಿ ಯುವತಿಯನ್ನು ಮದುವೆಯಾಗುವುದಾಗಿ ಲಿಖಿತ ದಾಖಲೆ ನೀಡಿದ್ದರು. ಆದರೆ ಮುಂದೆ ಯುವತಿಯನ್ನು ಮದುವೆಯಾಗಲು ನಿರಾಕರಿಸಲಾಯಿತು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
Geek
ಅತ್ಯಾಚಾರದ ಆರೋಪಿ ಆ ಹುಡುಗಿಯನ್ನು ಮದುವೆಯಾದರೆ ರೇಪ್ ಆರೋಪದಿಂದ ಮುಕ್ತಗೊಳಿಸಲಿದ್ದಾರೆಯೇ ಆ ನ್ಯಾಯಾಧೀಶರು? ನಮ್ಮ ನ್ಯಾಯವ್ಯವಸ್ಥೆಯಲ್ಲಿ ಇಂತಹ ಪ್ರಶ್ನೆಗಳನ್ನು ಕೇಳಲು ಅವಕಾಶವಿದೆಯೇ?