ಅರ್ಚಕ ನೌಕರಿ ಬ್ರಾಹ್ಮಣರಿಗೆ ಮೀಸಲಿಡಬೇಕು

posted in: ರಾಜ್ಯ | 1

ಮೈಸೂರು: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಿಗೆ ರಾಜ್ಯ ಸರ್ಕಾರವು ಸಮಾಜದ ಎಲ್ಲಾ ವರ್ಗದ ಜನರನ್ನು ಅರ್ಚಕರನ್ನಾಗಿ ನೇಮಿಸುತ್ತಿದೆ, ಸರ್ಕಾರ ಹೀಗೆ ಮಾಡದೇ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಅರ್ಚಕ ಉದ್ಯೋಗವನ್ನು ಮೀಸಲಿಡಬೇಕು ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಜಿ ತಿಳಿಸಿದ್ದಾರೆ.
ಮೈಸೂರಿನ ಖಾಸಗಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ವಿಪ್ರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರ್ಚಕ ವೃತ್ತಿಯನ್ನು ಬ್ರಾಹ್ಮಣರಿಂದ ಕಿತ್ತು ಕೊಳ್ಳುವ ಪ್ರಯತ್ನ ಸರ್ಕಾರದಿಂದ ನಡೆಯುತ್ತಿದ ಎಂದು ವಿಷಾದಿಸಿದರು.
ಕನ್ನಡ ಸಿನಿಮಾವೊಂದರಲ್ಲಿ ಬ್ರಾಹ್ಮಣರನ್ನು ಅವಹೇಳನವಾಗಿ ತೋರಿಸಲಾಗಿತ್ತು. ಇಂತಹ ಘಟನೆ ಇದೇ ಮೊದಲಲ್ಲ. ಇದಕ್ಕೆ ಪ್ರತಿರೋಧ ನಡೆದಿದ್ದು ಒಳ್ಳೆಯ ಬೆಳವಣಿಗೆಯಾಗಿದ್ದು, ಸಮಾಜ ಜಾಗೃತವಾಗಿದೆ ಎಂಬುದಕ್ಕೆ ಉದಾಹರಣೆ. ಸಿನಿಮಾ ಅವಹೇಳನ ದೃಶ್ಯ ಸಮಾಜದ ಎಲ್ಲರನ್ನೂ ಒಗ್ಗೂಡುವಂತೆ ಮಾಡಿದೆ ಎಂದರು.
ಬ್ರಾಹ್ಮಣರಿಗೆ ಅರ್ಚಕರ ವೃತ್ತಿಯಲ್ಲಿ ಮುಂದುವರಿಯಲು ಅವಕಾಶ ಕೊಡದಿರುವುದು ಬೇಸರದ ಸಂಗತಿ. ಸರ್ಕಾರ ಬ್ರಾಹ್ಮಣರಿಂದ ಅರ್ಚಕ ವೃತ್ತಿಯನ್ನು ಕಿತ್ತು ಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಈ ಎಲ್ಲಾ ಸಮಸ್ಯೆಗಳೊಳಗೆ ಪರಿಹಾರ ಕಂಡುಕೊಳ್ಳಲು ಸಂಘಟನೆಯೊಂದೇ ಪರಿಹಾರ ಎಂದರು.
ಮಂದಿರ ನಿರ್ಮಾಣಕ್ಕೆ 1,500 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ 2,100 ಕೋಟಿ ರೂ. ಸಂಗ್ರಹವಾಗಿದೆ. ಮಂದಿರ ನಿರ್ಮಾಣ ಮಾಡುವುದು ದೊಡ್ಡ ವಿಷಯವೇನಲ್ಲ. ಆದರೆ ಇಷ್ಟು ಆಸ್ಥೆಯಿಂದ ನಿರ್ಮಿಸಿದ ಮಂದಿರವನ್ನು ಎಷ್ಟು ದಿವಸ ಉಳಿಸಿಕೊಳ್ಳುತ್ತೇವೆ ಎಂಬುದು ಮುಖ್ಯ. ಶ್ರೀ ರಾಮನ ಹೆಸರಿನಲ್ಲಿ ನಮ್ಮ ಸಂಸ್ಕೃತಿ ಪುನರುತ್ಥಾನವಾಗಬೇಕು. ನೀವು ಕಟ್ಟಿದ ಮಂದಿರ ಅದೆಷ್ಟು ಕಾಲ ನಿಮ್ಮ ಕೈಯಲ್ಲಿ ಉಳಿಯುತ್ತದೆ? ಅದು ಮತ್ತೆ ನಮ್ಮ ಕೈಗೆ ಬಂದೇ ಬರುತ್ತದೆ ಎಂಬ ಹೇಳಿಕೆಗಳನ್ನು ಹುಸಿಗೊಳಿಸಬೇಕು ಎಂದು ಹೇಳಿದರು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರ ಪ್ರಕಟ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

2.2 / 5. ಒಟ್ಟು ವೋಟುಗಳು 6

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

  1. Geek

    ಹಾಗಿದ್ದರೆ ಬ್ರಾಹ್ಮಣರು ಯಾರು ಸ್ವಾಮಿಗಳೇ? ಹುಟ್ಟಿನಿಂದ ಬ್ರಾಹ್ಮಣರೋ ಅಥವಾ ಆಚಾರದಿಂದ ಬ್ರಾಹ್ಮಣರೋ?

    ಹುಟ್ಟಿನಿಂದ ಬ್ರಾಹ್ಮಣರಿಗೆ ಅರ್ಚಕ ವೃತ್ತಿ ಮೀಸಲಿಡಬೇಕೆಂದರೆ ಬ್ರಾಹ್ಮಣರಿಗೆ ಉಳಿದ ಡಾಕ್ಟರ್, ಇಂಜಿನಿಯರ್ , ಕೃಷಿಕ ಮೊದಲಾದ ಉದ್ಯೋಗಗಳನ್ನು ನಿಷೇಧಿಸುತ್ತೀರಾ?

    ನಿಮ್ಮಂತಹ ಸ್ವಾಮಿಗಳು ನಿಜವಾಗಿಯೂ ಸಮಾಜಕ್ಕೆ ಶಾಪವೇ ಸರಿ.

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement