ಕೊವಿಡ್‌ ೨ನೇ ಲಸಿಕೆ ಪಡೆದರೂ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್‌ !

ಮಹಾರಾಷ್ಟ್ರದ ಸಿಯಾನ್‌ ಆಸ್ಪತ್ರೆಯ ಅಂತಿಮ ವರ್ಷದ ವಿದ್ಯಾರ್ಥಿಗಳು ಕೊರೊನಾ ೨ನೇ ಲಸಿಕೆ ಪಡೆದರೂ ಕೊರೊನಾ ಪಾಸಿಟಿವ್‌ ಆಗಿರುವುದು ಆತಂಕ ಮೂಡಿಸಿದೆ.
೨೧ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಕೋವಿಶೀಲ್ಡ್‌ ೨ ಲಸಿಕೆ ಪಡೆದಿದ್ದರು. ಆದರೂ ಅವರನ್ನು ಪರೀಕ್ಷೆ ಮಾಡಿದಾಗ ಪಾಸಿಟಿವ್‌ ಇರುವುದು ಪತ್ತೆಯಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಕೆಲವು ದಿನಗಳು ಬೇಕಾಗುತ್ತವೆ. ಆದ್ದರಿಂದ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.
೨ನೇ ಲಸಿಕೆ ಪಡೆದ ನಂತರ ಸೋಂಕಿನ ಲಕ್ಷಣಗಳು ಕಂಡು ಬರುತ್ತಿದ್ದಂತೆ ವಿದ್ಯಾರ್ಥಿಯನ್ನು ಪರೀಕ್ಷೆಗೊಳಪಡಿಸಲಾಯಿತು. ಪರೀಕ್ಷೆಯಲ್ಲಿ ಪಾಸಿಟಿವ್‌ ಬರುತ್ತಿದ್ದಂತೆಯೇ ವಿದ್ಯಾರ್ಥಿಯನ್ನು ಸೆವೆನ್‌ ಹಿಲ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದಾಗಿ ಲಸಿಕೆ ಪಡೆದ ಹಾಸ್ಟೆಲ್‌ ವಿದ್ಯಾರ್ಥಿಗಳಲ್ಲಿ ಆತಂಕ ಶುರುವಾಗಿದೆ.
ಲಸಿಕೆ ಪಡೆದ ನಿರ್ದಿಷ್ಟ ಸಮಯದೊಳಗೆ ಎಲ್ಲರಿಗೂ ರೋಗ ನಿರೋಧಕ ಶಕ್ತಿ ಬೆಳೆಯುವುದಿಲ್ಲ. ಕೆಲವರಿಗೆ ಹೆಚ್ಚು ಕಾಲಾವಕಾಶ ಬೇಕಾಗುತ್ತದೆ. ವಿದ್ಯಾರ್ಥಿ ಸೌಮ್ಯವಾದ ಸೋಂಕಿನ ಲಕ್ಷಣಗಳನ್ನು ಹೊಂದಿದ್ದರು. ವೈರಸ್‌ ವಿರುದ್ಧದ ಪ್ರತಿರಕ್ಷಣಾ ಪ್ರಕ್ರಿಯೆ ಜರುಗಲು ೪೫ ದಿನಗಳು ತೆಗೆದುಕೊಳ್ಳಬಹುದು. ಆದ್ದರಿಂದ ಲಸಿಕೆ ಪಡೆದರೂ ಸೋಂಕಿಗೊಳಗಾಗಿರುವುದಕ್ಕೆ ಭಯ ಪಡುವ ಅವಶ್ಯಕತೆಯಿಲ್ಲ ಎಂದು ಡಾ. ಬಾಲಕೃಷ್ಣ ಹೇಳುತ್ತಾರೆ.
ಲಸಿಕೆಗಳನ್ನು ಪಡೆದ ನಂತರವೂ ಕೋವಿಡ್‌-೧೯ ಸುರಕ್ಷತಾ ಪ್ರೊಟೊಕಲ್‌ ಅನುಸರಿಸುವುದು ಮುಖ್ಯವಾಗಿದೆ ಎಂದು ಸಿಯಾನ್‌ ಆಸ್ಪತ್ರೆಯ ಡಾ. ಮೋಹನ ಜೋಶಿ ಅಭಿಪ್ರಾಯಪಡುತ್ತಾರೆ.

ಪ್ರಮುಖ ಸುದ್ದಿ :-   'ಸತ್ತಿದ್ದಾನೆ' ಎಂದು ಭಾವಿಸಲಾಗಿದ್ದ ತಮ್ಮ 35 ವರ್ಷಗಳ ಬಳಿಕ ಪತ್ತೆ : ಕುಟುಂಬ ಒಂದಾಗಿಸಿದ ಮತದಾರರ 'ಎಸ್‌ಐಆರ್‌' ಪರಿಶೀಲನೆ !

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement