ಸೆಲ್ಫಿ ಹುಚ್ಚಿಗೆ ಆನೆಗೆ ಬಲಿಯಾದ

ರಾಯಘರ್:ಛತ್ತೀಸ್ಗಢ ದ ರಾಯಘರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಆನೆಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋದ 21 ವರ್ಷದ ಯುವಕನನ್ನು ಆನೆ ತುಳಿದು ಕೊಂದು ಹಾಕಿದೆ.
ಮನೋಹರ್ ಪಾಟೀಲ್ ಎಂಬುವವನೇ ಮೃತಪಟ್ಟವ. ಹಳ್ಳಿಯಿಂದ ಆನೆಯನ್ನು ಕಾಡಿಗೆ ಓಡಿಸಲು ಅರಣ್ಯಾಧಿಕಾರಿಗಳು ಪ್ರಯತ್ನಿಸುತ್ತಿದ್ದಾಗ ಇಡೀ ಹಳ್ಳಿಯ ಜನರು ಆನೆಯನ್ನು ನೋಡಲು ಕಿಕ್ಕಿರಿದು ತುಂಬಿದ್ದರು. ಅದರಲ್ಲಿ ಮನೋಹರ್ ಪಾಟೀಲ್ ಮತ್ತು ಅವನ ಮೂವರು ಸ್ನೇಹಿತರು ಆನೆಯ ಜೊತೆ ಸೆಲ್ಫಿ ತೆಗೆದುಕೊಳ್ಳುವ ದುಸ್ಸಾಹಸ ಮಾಡಿದರು. ರೊಚ್ಚಿಗೆದ್ದ ಆನೆ ಆ ನಾಲ್ಕು ಜನರನ್ನು ಓಡಿಸಿಕೊಂಡು ಬಂತು. ಮೂವರು ತಪ್ಪಿಸಿಕೊಂಡರೆ ಮನೋಹರ್ ಪಾಟೀಲ್ ಆನೆಗೆ ಬಲಿಯಾದ. ಮೃತನ ಕುಟುಂಬಕ್ಕೆ ಇಲಾಖೆಯಿಂದ 25 ಸಾವಿರ ಪರಿಹಾರ ಘೋಷಿಸಲಾಗಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?

ನಿಮ್ಮ ಕಾಮೆಂಟ್ ಬರೆಯಿರಿ

advertisement