ಗಟಾರ ಸ್ವಚ್ಛಗೊಳಿಸುವುದು ನಿನ್ನ ಕೆಲಸ, ಪ್ರತಿಭಟಿಸುವ ಹಕ್ಕು ಯಾರು ಕೊಟ್ಟರು ನಿನಗೆ?

ನವ ದೆಹಲಿ: ದಲಿತ ಕಾರ್ಮಿಕ ಹಕ್ಕುಗಳ ಕಾರ್ಯಕರ್ತೆ ನೊದೀಪ್ ಕೌರ್ ಪೊಲೀಸ್ ವಶದಲ್ಲಿದ್ದಾಗ ತಮಗೆ ನೀಡಲಾದ ಚಿತ್ರ ಹಿಂಸೆಯನ್ನು ಬಹಿರಂಗಪಡಿಸಿದ್ದಾರೆ.
ಹತ್ಯೆಯ ಆರೋಪ, ಕೈಗಾರಿಕಾ ಯುನಿಟ್ ನಲ್ಲಿ ಘೆರಾವ್ ಹಾಕುವುದು ಹಾಗೂ ಕಂಪನಿಗಳಿಂದ ಹಣಕ್ಕಾಗಿ ಬೇಡಿಕೆ ಇಡುವುದೂ ಸೇರಿದಂತೆ ಹಲವು ಆರೋಪಗಳನ್ನೆದುರಿಸಿ ಪೊಲೀಸ್ ವಶದಲ್ಲಿದ್ದ 24 ವರ್ಷದ ನೊದೀಪ್ ಕೌರ್ಗೆ ಕೆಲವೇ ದಿನಗಳ ಹಿಂದೆ ಪಂಜಾಬ್, ಹರ್ಯಾಣ ಹೈಕೋರ್ಟ್ ಜಾಮೀನು ನೀಡಿದೆ.
ಅವರು ತಮಗಾದ ಕರಾಳ ಅನುಭವಗಳನ್ನು ಬಹಿರಂಗಪಡಿಸಿದ್ದು, “ನನನ್ನು ಬೆದರಿಸುವುದಕ್ಕಾಗಿ ಪೊಲೀಸರು ಜಾತಿ ನಿಂದನೆ ಮಾಡಿದರು, ದೈಹಿಕವಾಗಿ ಹಿಂಸೆ ನೀಡಿದರು. ಹಿಂಸೆ ನೀಡುವಾಗ ಜಾತಿ ನಿಂದನೆ ಮಾಡಿದ ಪೊಲೀಸರು, ಗಟಾರ ಸ್ವಚ್ಛಗೊಳಿಸುವುದಷ್ಟೇ, ನಿನಗೆ ದೊಡ್ಡ ವ್ಯಕ್ತಿಗಳ ವಿರುದ್ಧ ಪ್ರತಿಭಟನೆಯನ್ನು ಆಯೋಜಿಸುವ ಹಕ್ಕನ್ನು ನೀಡಿದವರು ಯಾರು? ದಲಿತರು ದಲಿತರ ರೀತಿಯಲ್ಲಿ ವರ್ತಿಸಬೇಕು” ಎಂದು ನಿಂದಿಸಿದ್ದಾಗಿ ನೊದೀಪ್ ಕೌರ್ ಗಂಭೀರ ಆರೋಪ ಮಾಡಿದ್ದಾರೆ.
ಜೈಲಿನಲ್ಲಿ ಮಹಿಳಾ ಸಹ ಖೈದಿಗಳ ಪರಿಸ್ಥಿತಿ ಭಯಾನಕವಾಗಿತ್ತು, ನನಗಾದ ಕರಾಳ ಅನುಭವವನ್ನು ಅವರಲ್ಲಿ ಹೇಳಿದರೆ ಅದ್ಯಾವುದೂ ಅವರಿಗೆ ಅಚ್ಚರಿ ಎನಿಸಲಿಲ್ಲ, “ನೀನು ಅನುಭವಿಸಿರುವುದು ಏನೂ ಅಲ್ಲ” ಎಂದು ಸಹಖೈದಿಗಳು ಹೇಳಿದ್ದನ್ನು ನೊದೀಪ್ ಕೌರ್ ಉಲ್ಲೇಖಿಸಿದ್ದಾರೆ.
ನಾನು ಇದ್ದ ಜೈಲಿನಲ್ಲಿ 200 ಮಹಿಳಾ ಖೈದಿಗಳಿದ್ದರು. ಸಣ್ಣ ಪುಟ್ಟ ಆರೋಪಗಳಿಗಾಗಿ ಅವರನ್ನು ಜೈಲಿನಲ್ಲಿಡಲಾಗಿತ್ತು. ಈ ಪೈಕಿ ಬಹುತೇಕ ಮಂದಿ ಹಿಂದುಳಿದ ಸಮುದಾಯದವರಾಗಿದ್ದರು ಎಂದು ನೊದೀಪ್ ಕೌರ್ ಹೇಳಿದ್ದಾರೆ. ನಾನು ತಪ್ಪು ಮಾಡಿಲ್ಲ, ಪೊಲೀಸರು ನನ್ನ ವಿರುದ್ಧ ಯಾವುದೇ ಸಾಕ್ಷ್ಯಗಳನ್ನು ಹೊಂದಿಲ್ಲ ಎಂದು ಕೌರ್ ಹೇಳಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಫೆಬ್ರವರಿ 15ರಿಂದ ಸಿಬಿಎಸ್​ಇ 10 &12ರ ಬೋರ್ಡ್‌ ಪರೀಕ್ಷೆಗಳು; ಅಡ್ಮಿಶನ್ ಕಾರ್ಡ್ ಬಿಡುಗಡೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.7 / 5. ಒಟ್ಟು ವೋಟುಗಳು 3

  1. Geek

    ಅರ್ಚಕ ವೃತ್ತಿಯನ್ನು ಬ್ರಾಹ್ಮಣರಿಗೆ ಮೀಸಲಾಹಿಡಬೇಕು ಎಂದ ಪೇಜಾವರ ಶ್ರೀಗಳ ದನಿಯ ಅರ್ಥವೂ ಇದೇ ಆಗಿದೆ. ಗಟಾರ್ ಕ್ಲೀನ್ ಮಾಡುವುದನ್ನು ದಲಿತರೇ ಮಾಡಬೇಕು ಎಂದು ಪರೋಕ್ಷವಾಗಿ ಹೇಳಿದ್ದಾಗಿದೆ. ಹಿಂದು ನಾವೆಲ್ಲಾ ಒಂದು ಎನ್ನುವವರು ಈಗ ತಮ್ಮ ದನಿಯನ್ನು ಅಡಗಿಸಿಬಿಡುತ್ತಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement