ಭೋಪಾಲ್: ಅಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಧರ್ಮದ ಚೌಕಟ್ಟಿಲ್ಲ, ಧರ್ಮ ಅಡ್ಡಿಯಲ್ಲ ಎಂಬುದಕ್ಕೆ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಮುಷಾರಿಫ್ ಖಾನ್ ಉತ್ತಮ ಉದಾಹರಣೆಯಾಗಿದ್ದಾರೆ. ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ಭಗವದ್ಗೀತೆ ಶ್ಲೋಕಗಳನ್ನು ಬಹಳ ಸ್ಫುಟವಾಗಿ ಪಠಿಸುತ್ತಾಳೆ. ಇದು ಅವಳ ಹೆತ್ತವರು ಮತ್ತು ಶಿಕ್ಷಕರ ಸಂತೋಷಕ್ಕೆ ಕಾರಣವಾಗಿದೆ.
ಇದನ್ನು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಜ್ಞಾಪಕ ಶಕ್ತಿಯ ಹೆಚ್ಚಳ ಮಾಡುವ ತರಬೇತಿ ಭಾಗವಾಗಿ ಮುಷಾರಿಫ್ ಪವಿತ್ರ ಹಿಂದೂ ಧರ್ಮಗ್ರಂಥವನ್ನು ಕಲಿಯಲು ಪ್ರಾರಂಭಿಸಿದ್ದಾಳೆ. ಮತ್ತು ಈ ಬಗ್ಗೆ ಮತ್ತೊಂದು ಧರ್ಮದ ಅತ್ಯುತ್ಕೃಷ್ಟ ಅಧ್ಯಾತ್ಮ ಗ್ರಂಥವನ್ನು ಕಲಿತ ಬಗ್ಗೆ ಅವಳೂ ಹೆಮ್ಮೆ ಪಡುತ್ತಾಳೆ ಹಾಗೂ ಅವಳ ಪೋಷಕರೂ ಹೆಮ್ಮೆ ಪಡುತ್ತಾರೆ.
ಮುಷಾರಿಫ್ ಖಾನ್ ಪ್ರತಿಭಾವಂತ ಹುಡುಗಿ ಭಗವದ್ಗೀತೆ ಒಟ್ಟು 701 ಶ್ಲೋಕಗಳಲ್ಲಿ 500 ಶ್ಲೋಕಗಳನ್ನು ಕಂಠಪಾಠ ಮಾಡಿಕೊಂಡಿದ್ದು, ಪಟಪಟನೆ ಹೇಳುತ್ತಾಳೆ. ಇವಳ ಈ ಸಾಧನೆಗೆ ಅನೇಕರು ಶ್ಲಾಘಿಸಿದ್ದಾರೆ.
ಈ ಸಾಧನೆ ಆಗಿದ್ದು ಹೇಗೆ..?:
ಇದನ್ನು ಮನಃಪೂರ್ವಕಾಗಿ ಕಲಿತಿದ್ದೇನೆ ಎನ್ನುತ್ತಾಳೆ ಅವಳು. ತನ್ನ ಅಬ್ಯಾಕಸ್ ಮತ್ತು ವೈದಿಕ ಗಣಿತ ಶಿಕ್ಷಕಿ ರೋಹಿಣಿ ಮೆನನ್ ಅವರು ಜ್ಞಾಪಶಕ್ತಿ ಧಾರಣ ತಂತ್ರ ಬಳಸಿ ಅವಳಿ ಈ ೫೦೦ ಭಗವದ್ಗೀತೆ ಶ್ಲೋಕಗಳನ್ನು ಕಲಿತಿದ್ದಾಳೆ.
“ಮುಷಾರಿಫ್ ನನ್ನ ಅತ್ಯುತ್ತಮ ವಿದ್ಯಾರ್ಥಿಗಳಲ್ಲಿ ಒಬ್ಬರು. ತರಬೇತಿ ಸಂದರ್ಭದಲ್ಲಿ ಸ್ಮರಣೆ ಉಳಿಸಿಕೊಳ್ಳುವ ತಂತ್ರವನ್ನು ಪ್ರದರ್ಶಿಸಲು ನಾನು ಅವಳಿಗೆ ಮೂರು ಆಯ್ಕೆಗಳನ್ನು ನೀಡಿದ್ದೆ: ಇಡೀ ನಿಘಂಟು ಅಥವಾ ಭಾರತದ ಸಂಪೂರ್ಣ ಸಂವಿಧಾನ ಅಥವಾ ಭಗವದ್ಗೀತೆ ಕಂಠಪಾಠ ಮಾಡುವುದು. ನಮಗೆಲ್ಲರಿಗೂ ಅಚ್ಚರಿಯಾಗುವಂತೆ ಅವಳು ಭಗವದ್ಗೀತೆಯನ್ನೇ ಕಲಿಯಲು ಆಯ್ಕೆ ಮಾಡಿಕೊಂಡಳು. ಅವಳು ಆರನೇ ತರಗತಿಯಲ್ಲಿದ್ದಾಗ ಕಲಿಯಲು ಪ್ರಾರಂಭಿಸಿದಳು ಮತ್ತು ಇಲ್ಲಿಯ ವರೆಗೆ 500 ಸಂಸ್ಕೃತ ಶ್ಲೋಕಗಳನ್ನು ಈ ಜ್ಞಾಪಕ ಧಾರಣ ತರಬೇತಿ(memory retention training) ಕಂಠಪಾಠ ಮಾಡಿದ್ದಾಳೆ ”ಎಂದು ಮೆನನ್ ಹೇಳಿದ್ದಾರೆ.
ಮೆನನ್ ತನ್ನ ಇತರ ಅನೇಕ ವಿದ್ಯಾರ್ಥಿಗಳು ಭಗವದ್ಗೀತೆಯಿಂದ ಶ್ಲೋಕಗಳನ್ನು ಕಲಿಯಲು ಪ್ರಯತ್ನಿಸಿದ್ದಾರೆ, ಆದರೆ ಮುಷಾರಿಫ್ ಅವರೆಲ್ಲರಿಗಿಂತ ಮುಂದಿದ್ದು, 500 ಶ್ಲೋಕಗಳನ್ನು ಕಂಠಪಾಠ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಉಳಿದವುಗಳನ್ನು ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಿದರು.
ಮುಷಾರಿಫ್, ಅವರ ತಂದೆ ಗಣಿತ ಶಿಕ್ಷಕ ಮತ್ತು ತಾಯಿ ಗೃಹಿಣಿ, ಎರಡು ವರ್ಷಗಳ ಹಿಂದೆ ಮೆನನ್ ಅವರ ಅಡಿಯಲ್ಲಿ ಜ್ಞಾಪಕಶಕ್ತಿ ಧಾರಣದ ಕಿರು ಕೋರ್ಸ್‌ಗೆ ಸೇರಿದ್ದರು.
“ಸಣ್ಣ ಕೋರ್ಸ್ ಮಾಡಿದ ನಂತರ, ನಾನು ಅನನ್ಯ ಮತ್ತು ವಿಭಿನ್ನವಾದದ್ದನ್ನು ಮಾಡಲು ಬಯಸಿದ್ದೆ. ಆ ಕಾರಣಕ್ಕಾಗಿಯೇ ನಾನು ಭಗವದ್ಗೀತೆ ಕಂಠಪಾಠ ಮಾಡಲು ಆಯ್ಕೆ ಮಾಡಿಕೊಂಡಿದ್ದೇನೆ. ಯಾಕೆಂದರೆ ನನ್ನ ತಾಯಿ ಯಾವಾಗಲೂ ‘ಮನೆಯಲ್ಲಿ ಮಾತ್ರ ನಮ್ಮ ಧರ್ಮ. ಮನೆಯಿಂದ ಹೊರಗಡೆ ನೀವು ಕೇವಲ ಮನುಷ್ಯರು ಮತ್ತು ಕೇವಲ ನಿರ್ದಿಷ್ಟ ಧರ್ಮವನ್ನು ಮಾತ್ರ ಅನುಸರಿಸುವ ವ್ಯಕ್ತಿಯಲ್ಲ’ ಎಂದು ನನಗೆ ನನ್ನ ತಾಯಿ ಕಲಿಸಿದ್ದಾರೆ. ನಾನು ನನ್ನ ನಿರ್ಧಾರವನ್ನು ತಿಳಿಸಿದಾಗ ನನ್ನ ಪೋಷಕರು ಭಗವದ್ಗೀತೆ ಕಲಿಯಲು ನನಗೆ ಅನುಮತಿ ನೀಡಿದ್ದರಿಂದ ನಾನು ಪ್ರತಿ ಧರ್ಮದ ಬಗ್ಗೆಯೂ ಜ್ಞಾನ ಪಡೆಯಬೇಕೆಂದು ಅವರು ಬಯಸಿ ಇದನ್ನು ಕಲಿತೆ ”ಎಂದು ಮುಷಾರಿಫ್ ಹೇಳಿದ್ದಾರೆ.
ಮುಷಾರಿಫ್ ಸಾಧನೆಯ ಬಗ್ಗೆ ಹೆಮ್ಮೆ ಪಡುವ ತಾಯಿ ಜೀನತ್ ಖಾನ್, ನಾವು ಮುಸ್ಲಿಮರು. ಆದರೆ ನಮ್ಮ ಮಗಳನ್ನು ಪ್ರತಿ ಧರ್ಮದ ಅತ್ಯುತ್ತಮ ಧ್ಯೇಯ ಹಾಗೂ ವಿಷಯವನ್ನು ತೆಗೆದುಕೊಂಡು ಅವಳನ್ನು ಉದಾತ್ತವಾಗಿ ಬೆಳೆಸಲು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
Geek
ಅಭಿನಂದದನೆಗಳು. ಹಾಗೆಯೇ ಒಬ್ಬ ಹಿಂದೂ ಬಾಲಕ ಕುರಾನ್ ಅಥವಾ ಬೈಬಲ್ ನ್ನು ಮೆಚ್ಚಿ ಕಂಠಪಾಠ ಮತ್ತು ಪಠಣ ಮಾಡಿದರೆ ಅದನ್ನು ಸಂಘಪರಿವಾರದವರು ಖುಷಿಯಿಂದ ಸ್ವೀಕರಿಸಬಲ್ಲರೇ?gee
Vinod Nayak
Welcome for knowledge of good things from any religious books.