ರಷ್ಯಾ ವಿರುದ್ಧ ನಿರ್ಬಂಧ ಘೋಷಿಸಿದ ಅಮೆರಿಕ

ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರಿಗೆ ವಿಷದ ಇಂಜೆಕ್ಷನ್‌ ನೀಡಿದ್ದು ಮತ್ತು ಅವರಿಗೆ ಜೈಲುವಾಸ ನೀಡಿದ್ದರ ಬಗ್ಗೆ ಬಿಡೆನ್ ಆಡಳಿತವು ರಷ್ಯಾ ವಿರುದ್ಧ ನಿರ್ಬಂಧಗಳನ್ನು ಘೋಷಿಸಿದೆ.
ಈ ನಿರ್ಬಂಧಗಳು ರಷ್ಯಾದ ವಿರುದ್ಧ ಅಮೆರಿದ ಅಧ್ಯಕ್ಷ ಜೋ ಬಿಡನ್ ಆದೇಶಿಸಿದ ಮೊದಲ ಆದೇಶವಾಗಿದೆ ಮತ್ತು ಪುಟಿನ್ ಅವರೊಂದಿಗಿನ ಸಂಬಂಧಕ್ಕೆ ಇದು ನಾಂದಿ ಹಾಡಲಿದೆ. ರಷ್ಯಾದಲ್ಲಿ ಬಂಧಿಸಲ್ಪಟ್ಟಿರುವ ನವಲ್ನಿ, ಅವರ ಮಿತ್ರರು ಮತ್ತು ಇತರರನ್ನು ಬಿಡುಗಡೆ ಮಾಡಲು ಮತ್ತು ಅವರ ಬೆಂಬಲಿಗರ ಕಿರುಕುಳವನ್ನು ಕೊನೆಗೊಳಿಸಲು ಅಮೆರಿಕ ಒತ್ತಾಯಿಸುತ್ತದೆ ಎಂದು ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.
ರಷ್ಯಾದ ರಾಷ್ಟ್ರೀಯ ಗಾರ್ಡ್‌ನ ಮುಖ್ಯಸ್ಥ ವಿಕ್ಟರ್ ಝೊಲೊಟೊವ್; ದೇಶದ ಪ್ರಾಸಿಕ್ಯೂಟರ್ ಜನರಲ್ ಇಗೊರ್ ಕ್ರಾಸ್ನೋವ್; ಫೆಡರಲ್ ಪೆನಿಟೆನ್ಷಿಯರಿ ಸರ್ವಿಸ್ ಮುಖ್ಯಸ್ಥ ಅಲೆಕ್ಸಾಂಡರ್ ಕಲಾಶ್ನಿಕೋವ್; ಮತ್ತು ದೇಶದ ತನಿಖಾ ಸಮಿತಿಯ ನೇತೃತ್ವ ವಹಿಸುವ ಅಲೆಕ್ಸಾಂಡರ್ ಬ್ಯಾಸ್ಟ್ರಿಕಿನ್ ಯುರೋಪಿಯನ್‌ ಒಕ್ಕೂಟದ ಗಿರಯಾಗಿದ್ದರು.
27 ಯುರೋಪಿಯನ್‌ ಒಕ್ಕೂಟದ ಸದಸ್ಯ ರಾಷ್ಟ್ರಗಳು ಮಂಗಳವಾರ ನಿರ್ಬಂಧಗಳನ್ನು ಔಪಚಾರಿಕವಾಗಿ ಅಂಗೀಕರಿಸಿದವು ಎಂದು ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕದ ಕ್ರಮಗಳು ರಾಜ್ಯ, ಖಜಾನೆ ಮತ್ತು ವಾಣಿಜ್ಯ ಇಲಾಖೆಗಳನ್ನು ಒಳಗೊಂಡಿರುತ್ತವೆ ಎಂದು ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮ ಮಾಹಿತಿಯಲ್ಲಿ ತಿಳಿಸಿದ್ದಾರೆ.

.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement