ಕಾಂಗ್ರೆಸ್ಸಿನಲ್ಲೀಗ ಕಾಂಗ್ರೆಸ್‌ ವರ್ಸಸ್‌ ಕಾಂಗ್ರೆಸ್‌…!

ಪಂಚ ರಾಜ್ಯಗಳ ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಅಗುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿದ್ದ ಒಳಬೇಗುದಿಯೂ ಕೂಡ ಇದೇ ಸಮಯದಲ್ಲಿ ಹೊರಗೆ ಕಾಣಿಸಿಕೊಳ್ಳಲು ಆರಂಭಿಸಿದ್ದು, ಚುನಾವಣೆ ಸಂಸರ್ಭದಲ್ಲಿ ಇದು ಕಾಂಗ್ರೆಸ್‌ಗೆ ತಲೆ ನೋವೂ ಆಗಬಹುದಾಗಿದೆ.
ಕಾಂಗ್ರೆಸ್‌ನಲ್ಲಿ 23 (ಜಿ 23) ಭಿನ್ನಮತೀಯರ ಗುಂಪು ಇತ್ತೀಚೆಗೆ ಜಮ್ಮುವಿನಲ್ಲಿ ನಡೆದ ಸಭೆಯ ಪ್ರಕಾರ ಇತರ ರಾಜ್ಯಗಳಲ್ಲಿ ಸರಣಿ ಸಭೆಗಳನ್ನು ಆಯೋಜಿಸುವ ಮೂಲಕ ಹೈಕಮಾಂಡ್ಗೆ ಸಡ್ಡು ಹೊಡೆಯಲು ಸಜ್ಜಾಗಿದೆ.
ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವು ಶೀಘ್ರದಲ್ಲೇ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದ್ದು, ಮುಂಬರುವ ವಾರಗಳಲ್ಲಿ೨೩ ಭಿನ್ನಮತೀಯರ ಗುಂಪು ಹರಿಯಾಣ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಅಭಿಮಾನಿಗಳನ್ನು ಇತರೆ ಸಮಾನ ಮನಸ್ಕರನ್ನು ಹುಡುಕಲು ಪ್ರಯತ್ನಿಸುತ್ತಿದ್ದು, ಪಕ್ಷದ ನಾಯಕತ್ವವು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದೆ.
ಈ ಸಭೆಗಳು ಪಕ್ಷದ ಅಧ್ಯಕ್ಷೀಯ ಚುನಾವಣೆಗೆ ಮುನ್ನ ನಡೆಯಲಿವೆ, ಅದು ಮೇ ಅಂತ್ಯದ ವೇಳೆಗೆ ನಿಗದಿಯಾಗಿದೆ. ಆನಂದ್ ಶರ್ಮಾ ಅವರಿಗೆ ಹಿಮಾಚಲ ಪ್ರದೇಶದಲ್ಲಿ ಒಂದು ಸಭೆ, ಕುರುಕ್ಷೇತ್ರದಲ್ಲಿ ಭೂಪಿಂದರ್ ಸಿಂಗ್ ಹೂಡಾ ಮತ್ತು ರೋಪರ್ ಅಥವಾ ಆನಂದಪುರ್ ಸಾಹಿಬ್‌ನಲ್ಲಿ ಮನೀಶ್ ತಿವಾರಿ ಅವರು ಸಭೆ ಆಯೋಜಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಪಕ್ಷದ ನಾಯಕತ್ವವು ನಿರ್ಣಾಯಕ ಚುನಾವಣೆಗೆ ಮುಂಚಿತವಾಗಿ ಬಂಡಾಯದ ವಿರುದ್ಧ ಯಾವುದೇ ತ್ವರಿತ ಕ್ರಮ ತೆಗೆದುಕೊಳ್ಳುವ ಬಗ್ಗೆ ಎಚ್ಚರವಹಿಸಿದೆ.
ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈ ಕ್ಷಣದಲ್ಲಿ ಯಾವುದೇ ವಿಧಾನದ ಶಿಸ್ತು ಕ್ರಮ ತೆಗೆದುಕೊಂಡರೂ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಮತ್ತು ಅನಗತ್ಯ ಚರ್ಚೆಗೆ ಕಾರಣವಾಗುತ್ತದೆ. ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಉತ್ತಮ ಸಾಧನೆ ಮಾಡಿದರೆ, ಅಧ್ಯಕ್ಷರ ಚುನಾವಣೆಗೆ ಮುನ್ನ ಈ ನಾಯಕರು ನಿರ್ಮಿಸಲು ಪ್ರಯತ್ನಿಸುತ್ತಿರುವ ಆ ವೇಗ ಸ್ವಯಂ ನಿಗ್ರಹವಾಗುತ್ತದೆ ”ಎಂದು ಕಾಂಗ್ರೆಸ್‌ ಮೂಲಗಳು ಹೇಳುತ್ತವೆ.
ಕಾಂಗ್ರೆಸ್ ದುರ್ಬಲಗೊಳ್ಳುತ್ತಿದ್ದು, ಅದನ್ನು ಬಲಪಡಿಸಲು ತಾವು ಕೆಲಸ ಮಾಡುತ್ತಿರುವುದಾಗಿ ಭಿನ್ನಮತೀಯರು ಹೇಳಿಕೊಂಡಿದ್ದಾರೆ.
ಗುಲಾಮ್ ನಬಿ ಆಜಾದ್ ಅವರ ಮೊನ್ನೆ ಪ್ರದಾನಿ ಮೋದಿಯವರನ್ನು ಹೊಗಳಿದ್ದು, ಮಾಜಿ ಸಚಿವ ಆನಂದ್ ಶರ್ಮಾ ಬಂಗಾಳದಲ್ಲಿ ಎಡ-ಕಾಂಗ್ರೆಸ್ ಮೈತ್ರಿಕೂಟವ ಮುಸ್ಲಿಂ ಧರ್ಮ ಗುರು ಅಬ್ಬಾಸ್ ಸಿದ್ದಿಕಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಬಹಿರಂಗವಾಗಿಯೇ ಟೀಕಿಸಿರುವುದು ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ.
ಆನಂದ ಶರ್ಮಾ ಅವರು, ಇದು ಕಾಂಗ್ರೆಸ್ಸಿನ ಆತ್ಮವನ್ನು ರೂಪಿಸುವ “ಗಾಂಧಿ ಮತ್ತು ನೆಹರೂವಿಯನ್ ಜಾತ್ಯತೀತತೆಗೆ” ವಿರುದ್ಧವಾಗಿದೆ ಮತ್ತು “ಕೋಮುವಾದಿಗಳ” ವಿರುದ್ಧ ಹೋರಾಡಲು ಪಕ್ಷವು ಸೀಮಿತ ಆಯ್ಕೆಗೆ ತಮ್ಮನ್ನು ಸೀಮಿತ ಮಾಡಿಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ. ಕೊಲ್ಕತ್ತಾದಲ್ಲಿ ನಡೆದ ಸಮಾವೇಶದಲ್ಲಿ ಐಎಸ್ಎಫ್ ನಾಯಕನೊಂದಿಗೆ ವೇದಿಕೆ ಹಂಚಿಕೊಂಡಿದ್ದಕ್ಕಾಗಿ ಶರ್ಮಾ ಸೋಮವಾರ ಪಶ್ಚಿಮ ಬಂಗಾಳ ಪಿಸಿಸಿ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಅವರಿಂದ ಸ್ಪಷ್ಟನೆ ಕೋರಿದ್ದರು.
ಮಾಜಿ ಕೇಂದ್ರ ಸಚಿವರು ಮತ್ತು 23ರ ಗುಂಪಿನ ಮುಖಂಡರಾದ ಶರ್ಮಾ ಐಎಸ್‌ಎಫ್‌ನಂತಹ ಮತೀಯ ಪಕ್ಷದೊಂದಿಗಿನ ಕಾಂಗ್ರೆಸ್‌ “ಮೈತ್ರಿ” ಬಗ್ಗೆ ಪಕ್ಷವು ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ಅಂಗೀಕರಿಸಬೇಕಾಗಿತ್ತು ಎಂದಿದ್ದಾರೆ.
ಇದಕ್ಕೆ ತಿರುಗೇಟು ನೀಡಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಪಕ್ಷದ ಮುಖಂಡ ಅಧೀರ್‌ ರಂಜನ್‌ ಚೌಧರಿ ಬಂಗಾಳದಲ್ಲಿ ಮುಸ್ಲಿಂ ಧರ್ಮ ಗುರು ಅಬ್ಬಾಸ್‌ ಸಿದ್ದಿಕಿ ಅವರ ಪಕ್ಷದ ಜೊತೆ ಸಿಪಿಎಂ ತನ್ನ ಕೋಟಾದ ಸ್ಥಾನಗಳನ್ನು ನೀಡಲು ನಿರ್ಧರಿಸಿದೆಯೇ ಹೊರತು ಕಾಂಗ್ರೆಸ್‌ ಅಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಈಗಾಗಲೇ ತನ್ನ ಸಂಪೂರ್ಣ ಸ್ಥಾನ ಪಡೆದುಕೊಂಡಿದೆ ಮತ್ತು ಎಡಪಕ್ಷಗಳು ತಮ್ಮಪಾಲಿನಿಂದ ಐಎಸ್‌ಎಫ್‌ಗೆ ಸ್ಥಾನಗಳನ್ನು ಹಂಚಿಕೆ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಗೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್‌ ಪಕ್ಷದ ಒಳಬೇಗುದಿಯೂ ಹೆಚ್ಚಾಗುತ್ತಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement