ತಮಿಳುನಾಡು ಚುನಾವಣೆ: ಕಳೆದ ಸಲದಷ್ಟುಸೀಟು ಕೊಡಲೊಪ್ಪದ ಡಿಎಂಕೆ, ಕಾಂಗ್ರೆಸ್‌ಗೆ ಆರಂಭದಲ್ಲೇ ಹಿನ್ನಡೆ?

ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ಗೆ ಮತ್ತೆ ಹಿನ್ನಡೆಯಾದ ಲಕ್ಷಣಗಳು ಗೋಚರಿಸುತ್ತಿವೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್‌ಗೆ ಈ ಸಲ ಕಳೆದ ಸಲದಷ್ಟು ಸೀಟುಗಳನ್ನು ನಿಡಲು ಡಿಎಂಕೆ ಸಿದ್ಧವಿಲ್ಲ ಎನ್ನಲಾಗಿದೆ. ಆದರೂ ಕಾಂಗ್ರೆಸ್‌ ಪ್ರಯತ್ನ ಮುಂದುವರಿಸಿದೆ.
ರಾಷ್ಟ್ರೀಯ ಪಕ್ಷಕ್ಕೆ ನೀಡುತ್ತಿರುವ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಡಿಎಂಕೆ ಸಿದ್ಧವಿಲ್ಲ. ೨೦೧೬ರ ವಿದಾನಸಭೆ ಚುನಾವಣೆಯಲ್ಲಿ ೪೦ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಈ ಸಲವೂ ಅಷ್ಟೇ ಸ್ತಾನಗಳನ್ನು ಕೇಳುತ್ತಿದೆ. ಆದರೆ ಕಾಂಗ್ರೆಸ್‌ಗೆ ಅಷ್ಟು ಸೀಟುಗಳನ್ನು ಕೊಡಲು ಡಿಎಂಕೆ ಸಿದ್ಧವಿಲ್ಲ. ಅದು ೧೮ ಸ್ಥಾನಗಳನ್ನು ಕೊಡಲು ಮಾತ್ರ ಸಿದ್ಧವಿದೆ. ಕಳೆದ ಸಲಕ್ಕೆ ಹೋಲಿಸಿದರೆ ಅರ್ಧಕ್ಕಿಂತ ಹೆಚ್ಚು ಸ್ತಾನ ಕಡಿಮೆಯಾಗಲಿದೆ.
೪೦ ಸೀಟುಗಳನ್ನು ಕೇಳುತ್ತಿರುವ ಕಾಂಗ್ರೆಸ್‌ನೊದಿಗೆ ಸ್ಥಾನ ಹೊಂದಾಣಿಕೆ ಮಾತುಕತೆ ನಡೆಸಲು ಡಿಎಂಕೆ ಉತ್ಸುಕವಾಗಿಲ್ಲ. ಕಾಂಗ್ರೆಸ್ ಮೂಲಗಳ ಪ್ರಕಾರ, ಡಿಎಂಕೆ ತನ್ನ ಮಿತ್ರಪಕ್ಷಕ್ಕೆ ಕೇವಲ 18 ಸ್ಥಾನಗಳನ್ನು ಮಾತ್ರ ನೀಡಲು ಸಿದ್ಧವಾಗಿದೆ ಮತ್ತು ಇದಕ್ಕಿಂತ ಮುಂದಿನ ಸ್ಥಾನಗಲ ಬಗ್ಗೆ ಚರ್ಚಿಸಲು ಡಿಎಂಕೆ ನಿರಾಕರಿಸಿದೆ ಎಂದು ಎಂದು ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ.
ಕಾಂಗ್ರೆಸ್ 2016 ರಲ್ಲಿ 40 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಹೀಗಾಗಿ ಕೆಲವು ಕಾಂಗ್ರೆಸ್ ಮುಖಂಡರು ಎರಡನೇ ಸುತ್ತಿನ ಮಾತುಕತೆಗಳನ್ನು ಕೈಬಿಟ್ಟರು ಯಾಕೆಂದರೆ ಮತ್ತೂ ಹೆಚ್ಚಿನ ಸೀಟುಗಳನ್ನು ನೀಡಲು ಡಿಎಂಕೆ ಸಿದ್ಧವಿಲ್ಲ.
ಈ ಮಧ್ಯೆ,ಕಾಂಗ್ರೆಸ್ 41 ಸ್ಥಾನಗಳನ್ನು ಕೋರಿದೆ. ಆದರೆ ಅವರಿಗೆ ಈಗಿನ ಸನ್ನಿವೇಶದಲ್ಲಿ ಸರಿಯಾದ ಸಂಖ್ಯೆ 15 ಸ್ಥಾನಗಳು. ಆದರೆ ಅವರು ಒತ್ತಾಯಿಸಿದರೆ ನಾವು 18 ಸ್ಥಾನಗಳನ್ನು ನಿಡಬಹುದು. ಆದರೆ ಈಗಿನಂತೆ, ನಾವು ಅವರಿಗೆ 24 ರಿಂದ 27 ಸ್ಥಾನಗಳನ್ನು ನೀಡುವುದನ್ನು ಸಹ ಪರಿಗಣಿಸಬಹುದು.ಆದರೆ ಮಾತುಕತೆ ಹೇಗೆ ಮುಂದುವರಿಯುತ್ತದೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ ಎಂದು ಡಿಎಂಕೆ ಮೂಲಗಳು ಹೇಳಿವೆ ಎಂದು ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ.
ಡಿಎಂಕೆ ಮೂಲದ ಪ್ರಕಾರ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಲ್ಲಿನ ಪರಿಸ್ಥಿತಿ ಅರ್ಥಮಾಡಿಕೊಂಡಿದ್ದಾರೆ. ಆದರೆ ಸ್ಥಳೀಯ ಕಾಂಗ್ರೆಸ್ ನಾಯಕರೇ ಮೈತ್ರಿಕೂಟಕ್ಕೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. “ಮಾತುಕತೆ ಸರಾಗವಾಗಿ ಮುಂದುವರಿಯಬೇಕೆಂದು ನಾವು ಬಯಸುತ್ತೇವೆ ಎಂದೂ ಅವರು ಹೇಳುತ್ತಾರೆ.

ಪ್ರಮುಖ ಸುದ್ದಿ :-   ಬಿಜೆಪಿ ಸೇರಿದ ದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement