ಐಸ್‌ಲ್ಯಾಂಡ್ : ಒಂದು ವಾರದಲ್ಲಿ ೧೮ ಸಾವಿರಕ್ಕೂ ಹೆಚ್ಚು ಸಲ ಭೂಮಿ ನಡುಕ..!!!

ಐಸ್‌ಲ್ಯಾಂಡ್ ಕಳೆದ ವಾರದಲ್ಲಿ ನಡುಕಗಳ ಸರಣಿಯನ್ನು ದಾಖಲಿಸಿದೆ. ಐಸ್ಲ್ಯಾಂಡಿಕ್ ಮೆಟಿಯೊಲಾಜಿಕಲ್ ಕಚೇರಿ (ಐಸಿಒ) ಪ್ರಕಾರ, ಒಂದು ವಾರದಲ್ಲಿ 18,000ಕ್ಕೂ ಹೆಚ್ಚು ನಡುಕ ದಾಖಲಾಗಿದೆ.
ದೇಶದ ಹೆಚ್ಚಿನ ಭಾಗಗಳಲ್ಲಿ “ಭೂಕಂಪನ ನಡುಕ ಹೆಚ್ಚಳ” ಪತ್ತೆಯಾಗಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಶಿಲಾಪಾಕ ಚಲನೆಗಳು ಒಂದು ಕಾರಣವಾದರೆ ಕೈಲಿರ್‌ಗೆ ಸಮೀಪದಲ್ಲಿ (ಲಾವಾ-ಉತ್ಪಾದಿಸುವ) ಸ್ಫೋಟ ಸಂಭವಿಸುವ ಸಾಧ್ಯತೆಯಿದೆ” ಎಂದು ಇಲಾಖೆ ಬುಧವಾರ ತನ್ನ ಬುಲೆಟಿನ್ ನಲ್ಲಿ ತಿಳಿಸಿದೆ.
ಶಿಲಾಪಾಕವು ಮುರಿತಕ್ಕೊಳಗಾಗಿದೆ ಮತ್ತು ಅದು ಮೇಲ್ಮೈಗೆ ತುಂಬಾ ಹತ್ತಿರದಲ್ಲಿದೆ. ಹೀಗಾಗಿ ಅದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ” ಎಂದು ಐಸ್ಲ್ಯಾಂಡ್ ವಿಶ್ವವಿದ್ಯಾಲಯದ ಭೂ ಭೌತಶಾಸ್ತ್ರಜ್ಞ ಫ್ರೀಸ್ಟೀನ್ ಸಿಗ್ಮಂಡ್ಸನ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಐಸ್ಲ್ಯಾಂಡ್ ಯುರೋಪಿನ ಅತ್ಯಂತ ಸಕ್ರಿಯ ಜ್ವಾಲಾಮುಖಿ ಪ್ರದೇಶವಾಗಿದ್ದು, ಪ್ರತಿ ಐದು ವರ್ಷಗಳಿಗೊಮ್ಮೆ ಸರಾಸರಿ ಸ್ಫೋಟಗೊಳ್ಳುತ್ತದೆ. ಇದು 30 ಜ್ವಾಲಾಮುಖಿಗಳನ್ನು ಮತ್ತು 600 ಕ್ಕೂ ಹೆಚ್ಚು ಬಿಸಿನೀರಿನ ಬುಗ್ಗೆಗಳನ್ನು ಹೊಂದಿದೆ.
ಫಾಗ್ರಾಡಾಲ್ಸ್‌ಫಾಲ್ ಪ್ರದೇಶದಲ್ಲಿ 6.5 ತೀವ್ರತೆಯ ಭೂಕಂಪನ ಸೇರಿದಂತೆ ಕೆಲವು ಸಂಭವನೀಯ ಬೆಳವಣಿಗೆಗಳನ್ನು ಪ್ರಸ್ತುತಪಡಿಸಲು ರಾಜಧಾನಿಯಿಂದ 50 ಕಿಲೋಮೀಟರ್ ದೂರದಲ್ಲಿರುವ ರೇಕ್‌ಜನೆಸ್ ಸುತ್ತಮುತ್ತಲಿನ ಪ್ರದೇಶದ ಉಪಗ್ರಹ ದತ್ತಾಂಶವನ್ನು ಐಸಿಒ ವಿಶ್ಲೇಷಿಸಿದೆ.
ಫೆಬ್ರವರಿ 24 ರಂದು 5.6 ರ ತೀವ್ರತೆಯ ಭೂಕಂಪನವು ಈ ಪ್ರದೇಶವನ್ನು ಅಪ್ಪಳಿಸಿತು. ಒಂದೇ ದಿನದಲ್ಲಿ ಇನ್ನೂ ಐದು ಭೂಕಂಪಗಳು ದಾಖಲಾಗಿವೆ.1991ರಲ್ಲಿ ಡಿಜಿಟಲ್ ಮಾನಿಟರಿಂಗ್ ಪ್ರಾರಂಭವಾದಾಗಿನಿಂದ ಇಂತಹ ತೀವ್ರ ಭೂಕಂಪನ ಚಟುವಟಿಕೆಯನ್ನು ಈ ಪ್ರದೇಶದಲ್ಲಿ ದಾಖಲಿಸಲಾಗಿಲ್ಲ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement