ಛತ್ತೀಸ್‌ಗಡ:೧೩ ಮಂಗಳಮುಖಿಯರು ಪೊಲೀಸ್‌ ಕಾನ್‌ಸ್ಲ್ಟೇಬಲ್‌‌ಗಳಾಗಿ ನೇಮಕ

ಸಮುದಾಯದ ಜನರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮತ್ತು ಅವರ ಬಗ್ಗೆ ಸಮಾಜದ ಗ್ರಹಿಕೆ ಬದಲಿಸುವ ಪ್ರಯತ್ನದಲ್ಲಿ ಛತ್ತೀಸ್‌ಗಡ ರಾಜ್ಯದಲ್ಲಿ ಪೊಲೀಸ್‌ ಇಲಾಖೆ 13  ಮಂಗಳಮುಖಿಯರು  (ತೃತೀಯಲಿಂಗಿಗಳು) ಕಾನ್‌ಸ್ಟೆಬಲ್‌ಗಳಾಗಿ ನೇಮಿಸಿಕೊಂಡಿದೆ.
ಮಂಗಳಮುಖಿಯರನ್ನು ರಾಜ್ಯ ಪೊಲೀಸ್ ಪಡೆಗೆ ಸೇರಿಸಿಕೊಳ್ಳುವುದು ಇದೇ ಮೊದಲು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹದಿಮೂರು ಅಭ್ಯರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ ಕಾನ್‌ಸ್ಟೆಬಲ್‌ಗಳಾಗಿ ನೇಮಕ ಮಾಡಲಾಗಿದೆ. ಇತರ ಇಬ್ಬರು ವೇಟಿಂಗ್‌ ಪಟ್ಟಿಯಲ್ಲಿದ್ದಾರೆ” ಎಂದು ಛತ್ತೀಸ್‌ಗಡ ಪೊಲೀಸ್ ಮಹಾನಿರ್ದೇಶಕ ಡಿ.ಎಂ. ಅವಸ್ಥಿ ತಿಳಿಸಿದ್ದಾರೆ.
ಯಶಸ್ವಿ ಅಭ್ಯರ್ಥಿಗಳಲ್ಲಿ ಎಂಟು ಮಂದಿ ರಾಯಪುರ ಜಿಲ್ಲೆಗೆ ಸೇರಿದವರು, ಇಬ್ಬರು ರಾಜನಂದಗಾಂವ್ ಮತ್ತು ತಲಾ ಒಬ್ಬರು ಬಿಲಾಸ್ಪುರ್, ಕೊರ್ಬಾ ಮತ್ತು ಸುರ್ಗುಜಾ ಜಿಲ್ಲೆಗಳಿಂದ ಬಂದವರು. ನಾವು ಅವರನ್ನು ಸ್ವಾಗತಿಸುತ್ತೇವೆ ಮತ್ತು ಸಮುದಾಯದ ಅನೇಕರು ಭವಿಷ್ಯದಲ್ಲಿ ಪೊಲೀಸ್ ಪಡೆಗೆ ಸೇರುತ್ತಾರೆ ಎಂದು ನಂಬುತ್ತೇವೆ” ಎಂದು ಅವರು ಹೇಳಿದರು.
2017-18ರಲ್ಲಿ ಪರೀಕ್ಷೆ ನಡೆದಿದ್ದು, ಈ ವರ್ಷ ಮಾರ್ಚ್ 1 ರಂದು ಫಲಿತಾಂಶ ಪ್ರಕಟಿಸಲಾಗಿದೆ. .ಕಾನ್ಸ್ಟೇಬಲ್ ಆಗಿ ನೇಮಕಗೊಂಡವರಲ್ಲಿ ಒಬ್ಬರಾದ ಶಿವಾನ್ಯ ಅಲಿಯಾಸ್ ರಾಜೇಶ್ ಪಟೇಲ್ (24), ಪೊಲೀಸ್ ಸಮವಸ್ತ್ರದಲ್ಲಿ ಧರಿಸಿರುವುದು ಸಂತೋಷವಾಗಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement