ಭಾರತಕ್ಕೆ ಅಮೆರಿಕದಿಂದ 20 ಶತಕೋಟಿ ಡಾಲರ್‌ ರಕ್ಷಣಾ ಸಾಮಗ್ರಿ ಪೂರೈಕೆ

ವಾಷಿಂಗ್ಟನ್: ಭಾರತಕ್ಕೆ ಪ್ರಮುಖ ರಕ್ಷಣಾ ಸಾಧನಗಳ ಮಾರಾಟವು ಈಗ 20 ಶತಕೋಟಿ ಯುಎಸ್ ಡಾಲರ್‌ಗಳಿಗೆ ತಲುಪಿದೆ. ಇದು ಭಾರತದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಅಮೆರಿಕದ ಬದ್ಧತೆ ತೋರಿಸುತ್ತದೆ ಎಂದು ಬೈಡೆನ್ ಆಡಳಿತ ಹೇಳಿದೆ.
ಈ ವರ್ಷಾಂತ್ಯದ ವೇಳೆಗೆ ಭಾರತಕ್ಕೆ 20 ಬಿಲಿಯನ್ ಡಾಲರ್‌ಗಳಷ್ಟು ರಕ್ಷಣಾ ಸಾಮಗ್ರಿಗಳ ಮಾರಾಟವನ್ನು ಅಮೆರಿಕ ಅಧಿಕೃತಗೊಳಿಸಿದೆ. ಇದು ಭಾರತದ ಸಾರ್ವಭೌಮತೆ ಮತ್ತು ಭದ್ರತೆಯನ್ನು ಪ್ರದರ್ಶಿಸುವ ಸುಧಾರಿತ ಯುಎಸ್ ರಕ್ಷಣಾ ವೇದಿಕೆಗಳ ಕೊಡುಗೆಗಳು ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಬೃಹತ್ ಮಟ್ಟದ ರಕ್ಷಣಾ ಸಾಧನಗಳ ಪೂರೈಕೆ, ಜಾಗತಿಕ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವಕ್ಕೆ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದರು.
ಅಧ್ಯಕ್ಷ ಬೈಡೆನ್ ಅವರ ಆಡಳಿತ ಇತರ ಕೆಲವು ದೇಶಗಳೊಂದಿಗೆ ನಡೆಸುತ್ತಿರುವಂತೆ ಭಾರತ ದೇಶದೊಂದಿಗೆ ತನ್ನ ರಕ್ಷಣಾ ಒಪ್ಪಂದಗಳ ಬಗ್ಗೆ ಪರಿಶೀಲಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅರ್ಥ ಮಾಡಿಕೊಂಡಿರುವ ರೀತಿಯಲ್ಲಿ ಪ್ರಸ್ತುತ ಏನೂ ಇಲ್ಲ. ಆದರೆ ಬಾಕಿ ಇರುವ ವರ್ಗಾವಣೆಯ ಸ್ಥಿತಿಯಲ್ಲಿ ಏನಾದರೂ ಬದಲಾವಣೆಗಳಿದ್ದರೆ, ತಿಳಿಸಲು ನನಗೆ ಸಂತೋಷವಾಗುತ್ತದೆ ಎಂದು ಅವರು ಹೇಳಿದರು.
ಅಮೆರಿಕದ ಭಾರತೀಯ ರಾಯಬಾರಿ ತಾರಂಜಿತ್ ಸಿಂಗ್ ಸಂಧು ಅವರು ಇತ್ತೀಚಿನ ಸಂದರ್ಶನದಲ್ಲಿ ಹಿಂದೆಂದಿಗಿಂತಲೂ ದ್ವಿಪಕ್ಷೀಯ ಮಿಲಿಟರಿ ಮತ್ತು ಭದ್ರತಾ ಸಂಬಂಧಗಳು ಈಗ ಬಲವಾಗಿವೆ ಎಂದು ತಿಳಿಸಿದ್ದಾರೆ.
ಭಾರತದ ಪ್ರಮುಖ ರಕ್ಷಣಾ ಪಾಲುದಾರ ಮತ್ತು ಅಮೆರಿಕ ಸ್ಟ್ರಾಟೆಜಿಕ್ ಟ್ರೇಡ್ ಆಥರೈಸೇಷನ್-1 ಸ್ಥಿತಿಗೆ ಅನುಗುಣವಾಗಿ, ವಾಷಿಂಗ್ಟನ್‍ನೊಂದಿಗೆ ನಾಲ್ಕು ಮೂಲ ಒಪ್ಪಂದಗಳಿಗೆ ಸಹಿ ಹಾಕುವುದರಿಂದ ಉಭಯ ರಾಷ್ಟ್ರಗಳ ನಡುವೆ ಮಿಲಿಟರಿಯಿಂದ ಮಿಲಿಟರಿ ಸಹಕಾರ ಹೆಚ್ಚಾಗುತ್ತದೆ. ಮಿಲ್-ಟು-ಮಿಲ್ ಸಹಕಾರಕ್ಕೆ ಅನುಕೂಲವಾಗುವಂತೆ ಭಾರತ ಲಾಜಿಸ್ಟಿಕ್ಸ್ ಎಕ್ಸೇಂಜ್ ಮೆಮೊರಾಂಡಮ್ ಆಫ್ ಅಗ್ರಿಮೆಂಟ್ (ಎಲ್‍ಇಎಂಒಎ), ಕಮ್ಯೂನಿಕೇಷನ್ ಹೊಂದಾಣಿಕೆ ಮತ್ತು ಭದ್ರತಾ ಒಪ್ಪಂದ (ಸಿಒಎಂಸಿಎಎಸ್‍ಎ), ಕೈಗಾರಿಕಾ ಭದ್ರತಾ ಅನೆಕ್ಸ್ ಮತ್ತು ಬೇಸಿಕ್ ಎಕ್ಸ್‍ಚೇಂಜ್ ಮತ್ತು ಸಹಕಾರ ಒಪ್ಪಂದಕ್ಕೆ (ಬಿಇಸಿಎ) ಸಹಿ ಹಾಕಿದೆ ಎಂದು ಅವರು ಹೇಳಿದರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇಂದಿನ ಪ್ರಮುಖ ಸುದ್ದಿ :-   ಐಎಂಎಫ್‌ ಬೇಲ್ಔಟ್ ಷರತ್ತುಗಳು "ಕಲ್ಪನೆಯನ್ನೂ ಮೀರಿವೆ", ಆದ್ರೆ ಒಪ್ಪಿಕೊಳ್ಳಲೇಬೇಕು: ತೀವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಪಾಕ್ ಪ್ರಧಾನಿ

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement