ಸದನದಲ್ಲಿ ಶರ್ಟ್ ಬಿಚ್ಚಿ ದುರ್ವತನೆ ತೋರಿದ ಶಾಸಕ ಸಂಗಮೇಶ್ ಸಸ್ಪೆಂಡ್

posted in: ರಾಜ್ಯ | 0

ಬೆಂಗಳೂರು: ಸದನದಲ್ಲಿ ದುರ್ವತನೆ ತೋರಿದ ಕಾರಣಕ್ಕೆ ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರನ್ನು ಒಂದು ವಾರ ಅಮಾನತು ಮಾಡಿ ಸ್ಪೀಕರ್‌ ಕಾಗೇರಿ ಆದೇಶ ಮಾಡಿದ್ದಾರೆ.
ಒಂದು ರಾಷ್ಟ್ರ ಒಂದು ಚುನಾವಣೆ ವಿಷಯವಾಗಿ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಷಯ ಪ್ರಸ್ತಾಪನೆ ಮಡುತ್ತಿದ್ದಾಗ ಸಂಗಮೇಶ್ ತಮ್ಮ ಶರ್ಟ್ ಬಿಚ್ಚಿ ಅನುಚಿತವಾಗಿ ವರ್ತನೆ ಮಾಡಿದ್ದರು. ಇದರಿಂದ ಸದನವನ್ನು 15 ನಿಮಿಷಗಳ ಕಾಲ ಮುಂದೂಡಲಾಗಿತ್ತು.
ಬಳಿಕ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷ ಕಾಗೇರಿ ಅವರು ಸಂಗಮೇಶ ಅಶಿಸ್ತು ತೋರಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಪ್ರಸ್ತಾವನೆ ಮಂಡಿಸುವಂತೆ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸೂಚಿಸಿದರು.
ಪ್ರಸ್ತಾವನೆ ಮಂಡಿಸಿದ ಬೊಮ್ಮಾಯಿ, ನಿಯಮ 348ರ ಪ್ರಕಾರ ಶಾಸಕರು ಅನುಚಿತವಾಗಿ ವರ್ತಿಸಿರುವುದನ್ನು ಸದನ ಸಹಿಸಲು ಸಾಧ್ಯವಿಲ್ಲ. ಹಾಗಾಗಿ ಅವರನ್ನು ಸದನದಿಂದ ಅಮಾನತು ಪಡಿಸಬೇಕೆಂದು ಮನವಿ ಮಾಡಿದರು.ಆಗ ಸ್ಪೀಕರ್ ಕಾಗೇರಿ ಅವರು ಗುರುವಾರದಿಂದ ಜಾರಿಯಾಗುವಂತೆ ಮಾ.12ರ ವರೆಗೆ ಸಂಗಮೇಶ ಅವರನ್ನು ಅಮಾನತು ಮಾಡಿರುವುದಾಗಿ ಪ್ರಕಟಿಸಿದರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

ಇಂದಿನ ಪ್ರಮುಖ ಸುದ್ದಿ :-   ಕನ್ನಡದ ಹಿರಿಯ ನಟ ಮನದೀಪ್ ರಾಯ್ ನಿಧನ

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement