ಆರ್‌ಟಿಒ ೧೮ ಸೇವೆಗಳು ಈಗ ಆನ್‌ಲೈನ್‌ನಲ್ಲಿಯೂ ಲಭ್ಯ..!

ನವ ದೆಹಲಿ: ಡ್ರೈವಿಂಗ್ ಲೈಸ್ಸ್, ನವೀಕರಣ ಸೇರಿದಂತೆ ವಿವಿಧ 18 ಸೇವೆಗಳಿಗೆ ಆರ್ ಟಿ ಒ ಕಚೇರಿಗೆ ಹೋಗಿಯೇ ಮಾಡಿಸಬೇಕಿತ್ತು. ಇನ್ಮುಂದೆ ಆಧಾರ್ ದೃಢೀಕರಣದ ಮೂಲಕ 18 ಸೇವೆಗಳನ್ನು ಈಗ, ಸಂಪರ್ಕ ರಹಿತ ಸೇವೆಗನ್ನಾಗಿ ಪಡೆಯಬಹುದಾಗಿದೆ.
ಇಂತಹ ಸೇವೆಯನ್ನು ಭಾರತೀಯ ನಾಗರಿಕರಿಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಆರಂಭಿಸಿದ್ದು, ದೇಶದ ಜನರು ಕುಳಿತಲ್ಲೇ, ರಸ್ತೆ ಸಾರಿಗೆಗೆ ಸಂಬಂಧಿಸಿದ 18 ಸೇವೆಗಳನ್ನು ಪಡೆಯಬಹುದಾಗಿದೆ.
ಇದು, ಆರ್ ಟಿಓ ಕಚೇರಿಗಳ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಎಂಒಆರ್ ಟಿಯು ತಿಳಿಸಿದೆ ಹಾಗೂ
ಟ್ವಿಟರ್‌ನಲ್ಲಿ ಎಂಒಆರ್ ಟಿಯು ಅಧಿಸೂಚನೆಗಳನ್ನು ಬಿಡುಗಡೆ ಮಾಡಿದೆ. ವಾಹನ ನೋಂದಣಿ, ಕಲಿಕಾ ಪರವಾನಗಿ, ಡ್ರೈವಿಂಗ್ ಲೈಸೆನ್ಸ್, ನಕಲಿ ಪರವಾನಗಿ ಸೇರಿದಂತೆ ಇಲಾಖೆ 18 ವಿವಿಧ ಸೇವೆಗಳನ್ನು ಪಡೆಯಲು ಇನ್ನು ಮುಂದೆ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (ಆರ್ ಟಿಓ) ಭೇಟಿ ನೀಡುವ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದೆ.ಚಾಲನಾ ಪರವಾನಗಿ ಮತ್ತು ನೋಂದಣಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಕೆಲವು ಸೇವೆಗಳನ್ನು ಸಂಪೂರ್ಣವಾಗಿ ಆನ್ ಲೈನ್ ಮಾಡಲಾಗಿದೆ. ಈಗ ಆರ್ ಟಿಎಗೆ ಹೋಗದೆ ಪಡೆಯಬಹುದಾಗಿದೆ. ಆಧಾರ್ ದೃಢೀಕರಣದೊಂದಿಗೆ, ಸ್ವಯಂ ಪ್ರೇರಿತವಾಗಿ ಯಾರು ಬೇಕಾದರೂ ಈ ಸಂಪರ್ಕರಹಿತ ಸೇವೆಗಳ ಪ್ರಯೋಜನ ಪಡೆಯಬಹುದು’ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗುರುವಾರ ತಿಳಿಸಿದೆ.
ಆಧಾರ್ ದೃಢೀಕರಣದ ಮೂಲಕ ನಾಗರಿಕರು ಪಡೆಯಬಹುದಾದ 18 ಸೇವೆಗಳು ಇಲ್ಲಿವೆ. * ಕಲಿಯುವವರ ಪರವಾನಗಿ *ಚಾಲನಾ ಪರವಾನಗಿ ನವೀಕರಿಸುವ ಅವಶ್ಯಕತೆಯಿಲ್ಲ. *ನಕಲಿ ಡ್ರೈವಿಂಗ್ ಲೈಸೆನ್ಸ್ * ಡ್ರೈವಿಂಗ್ ಲೈಸೆನ್ಸ್ ಮತ್ತು ನೋಂದಣಿ ಪ್ರಮಾಣಪತ್ರದಲ್ಲಿ ವಿಳಾಸ ಬದಲಾವಣೆ * ಅಂತಾರಾಷ್ಟ್ರೀಯ ಚಾಲನಾ ಪರವಾನಗಿ * ಪರವಾನಗಿಯಿಂದ ವಾಹನದ ವರ್ಗ ಶರಣಾಗತಿ *ಮೋಟಾರು ವಾಹನ ತಾತ್ಕಾಲಿಕ ನೋಂದಣಿಗೆ ಅರ್ಜಿ, * ಸಂಪೂರ್ಣವಾಗಿ ನಿರ್ಮಿಸಲಾದ ಬಾಡಿಯೊಂದಿಗೆ ಮೋಟಾರು ವಾಹನ ನೋಂದಣಿಗೆ ಅರ್ಜಿ *ನಕಲಿ ನೋಂದಣಿ ಪ್ರಮಾಣಪತ್ರವನ್ನು ವಿತರಿಸಲು ಅರ್ಜಿ *ಮಾನ್ಯತೆ ಪಡೆದ ಡ್ರೈವರ್ ತರಬೇತಿ ಕೇಂದ್ರದಿಂದ ಚಾಲಕ ತರಬೇತಿಗಾಗಿ ನೋಂದಣಿಗೆ ಅರ್ಜಿ*ನೋಂದಣಿ ಪ್ರಮಾಣಪತ್ರಕ್ಕಾಗಿ ಎನ್‌ಒಸಿ ನೀಡಲು ಅರ್ಜಿ* ನೋಂದಣಿ ಪ್ರಮಾಣಪತ್ರದಲ್ಲಿ ವಿಳಾಸ ಬದಲಾವಣೆ * ಮೋಟಾರು ವಾಹನದ ಮಾಲೀಕತ್ವ ವರ್ಗಾವಣೆಯ ಸೂಚನೆ *ಮೋಟಾರು ವಾಹನದ ಮಾಲೀಕತ್ವ ವರ್ಗಾವಣೆಗೆ ಅರ್ಜಿ *ರಾಜತಾಂತ್ರಿಕ ಅಧಿಕಾರಿಯ ಮೋಟಾರು ವಾಹನ ನೋಂದಣಿಗೆ ಅರ್ಜಿ *ರಾಜತಾಂತ್ರಿಕ ಅಧಿಕಾರಿಯ ಮೋಟಾರು ವಾಹನದ ಹೊಸ ನೋಂದಣಿ ಚಿನ್ಹೆಯನ್ನು ನಿಯೋಜಿಸಲು ಅರ್ಜಿ * ಬಾಡಿಗೆ-ಖರೀದಿ ಒಪ್ಪಂದದ ಅನುಮೋದನೆ *ಬಾಡಿಗೆ-ಖರೀದಿ ಒಪ್ಪಂದ ರದ್ದು ಇವುಗಳನ್ನು ಆನ್‌ಲೈನಿಲ್ಲಿಯೇ ಮಾಡಬಹುದಾಗಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ: ಈ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೇ ಮತ ಹಾಕಬೇಡಿ ಎಂದು ಮತದಾರರಿಗೆ ಮನವಿ ಮಾಡುತ್ತಿರುವ ಕಾಂಗ್ರೆಸ್‌...!

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement