ಮಗನಿಗೆ ಪದವಿ ವರೆಗೆ ಶಿಕ್ಷಣ ನೀಡುವುದು ತಂದೆ ಹೊಣೆ: ಸುಪ್ರೀಂಕೋರ್ಟ್ ತೀರ್ಪು

ಮಗನಿಗೆ ಪದವಿ ವರೆಗೆ ಶಿಕ್ಷಣ ನೀಡುವುದು ತಂದೆಯ ಜವಾಬ್ದಾರಿ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತಂದೆಯಾದವನು ಪುತ್ರನಿಗೆ 18 ವರ್ಷ ವಯಸ್ಸಾಗುವ ವರೆಗೆ ಆತನ ಖರ್ಚಿನ ಜೊತೆಗೆ ಮಗ ಮೊದಲ ಪದವಿ ಪಡೆಯುವವರೆಗೂ ಆತನ ಖರ್ಚನ್ನು ನೋಡಿಕೊಳ್ಳಬೇಕು ಎಂದು ತೀರ್ಪು ನೀಡಿದೆ. ನ್ಯಾಯಮೂರ್ತಿ ಧನಂಜಯ್ ಚಂದ್ರಚೂಡ ಹಾಗೂ ಎಂ ಆರ್ ಶಾ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ..

ಪ್ರಕರಣದ ಹಿನ್ನೆಲೆ: ವ್ಯಕ್ತಿಯೊಬ್ಬರು 1999ರಲ್ಲಿ ಮೊದಲ ವಿವಾಹವಾಗಿದ್ದರು. ಈ ದಂಪತಿ ಒಂದು ಗಂಡು ಮಗು ಹೊಂದಿದ್ದರು.ಆದರೆ ಈ ವ್ಯಕ್ತಿ ಪತ್ನಿಯಿಂದ 2005 ರಲ್ಲಿ ವಿಚ್ಛೇದನ ಪಡೆದಿದ್ದರು. ಇದಾದ ನಂತರ ಸೆಪ್ಟೆಂಬರ್ 2017 ರಲ್ಲಿ ಕರ್ನಾಟಕ ಕೌಟುಂಬಿಕ ನ್ಯಾಯಾಲಯವು ಬಾಲಕನಿಗೆ 20 ಸಾವಿರ ರೂ ಜೀವನಾಂಶ ನೀಡಬೇಕು ಎಂದು ಹೇಳಿತ್ತು. ಆದರೆ ಬಾಲಕನ ತಂದೆ ಈ ಆದೇಶದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಕೂಡ ಕರ್ನಾಟಕ ಕೌಟುಂಬಿಕ ನ್ಯಾಯಾಲಯದ ಪರವಾಗಿಯೇ ಆದೇಶ ಹೊರಡಿಸಿತ್ತು.
ನಂತರ ಹೈಕೋರ್ಟ್ ಆದೇಶ ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಗನಿಗೆ ಪದವಿ ವರೆಗೆ ಶಿಕ್ಷಣ ನೀಡುವುದು ತಂದೆಯ ಜವಾಬ್ದಾರಿಯಾಗಿರುತ್ತದೆ ಎಂದು ಮಹತ್ವದ ತೀರ್ಪು ನೀಡಿದೆ.

ಪ್ರಮುಖ ಸುದ್ದಿ :-   ಆಘಾತಕಾರಿ...| ಗಂಡನ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿ ಇರಿಸಿಕೊಂಡ ಬ್ಯಾಂಕ್‌ ; ಹಣದ ಕಂತು ಕೊಟ್ಟ ಬಳಿಕವೇ ಮಹಿಳೆಯ ಬಿಡುಗಡೆ...!

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement