ಬಿಜೆಪಿ ಸೇರಿದ ಪಶ್ಚಿಮ ಬಂಗಾಳದ ಹಿರಿಯ ನಾಯಕ ದಿನೇಶ ತ್ರಿವೇದಿ

ನವ ದೆಹಲಿ: ಪಶ್ಚಿಮ ಬಂಗಾಳ ಚುನಾವಣೆಗೆ ಕೆಲವೇ ದಿನಗಳಿರುವಾಗ ಮತ್ತೊಂದು ಮತ್ತೊಂದು ಶಾಕ್‌ ಆಗಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಹಾಗೂ ರೈಲ್ವೆ ಖಾತೆ ಮಾಜಿ ಸಚಿವ ದಿನೇಶ್ ತ್ರಿವೇದಿ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಹಿರಿಯ ನಾಯಕ ದಿನೇಶ್ ತ್ರಿವೇದಿ ದೆಹಲಿಯಲ್ಲಿ ಶನಿವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಮ್ಮುಖದಲ್ಲಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್ ಇದ್ದರು. ನ
ದಿನೇಶ ತ್ರಿವೇದಿ ಮಾತನಾಡಿ, ನಾನು ಕಾಯುತ್ತಿದ್ದ ಸುವರ್ಣ ಕ್ಷಣ ಇದಾಗಿದ್ದು, ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ. ನಾನು ಸ್ಪರ್ಧಿಸುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಆದರೆ ರಾಜಕೀಯದಲ್ಲಿ ಸಕ್ರಿಯನಾಗಿರುತ್ತೇನೆ. ಬಂಗಾಳದ ಅಭಿವೃದ್ಧಿ ಬೇಕೇ ಹೊರತು ಭ್ರಷ್ಟಾಚಾರ ಅಥವಾ ಗಲಭೆಗಳಲ್ಲ. ನಾನು ಯಾವುದೇ ಸವಾಲಿಗೂ ಸಿದ್ಧವಿದ್ದು, ರಾಜಕಾರಣ ಆಟವಲ್ಲ. ಇದು ಗಂಭೀರ ವಿಚಾರವಾಗಿದ್ದು, ಇದನ್ನು ಮುಖ್ಯಮಮತ್ರಿ ಮಮಮತಾ ಬ್ಯಾನರ್ಜಿ ಮರೆತಿದ್ದಾರೆ ಎಂದು ಟೀಕಿಸಿದರು.
ಕುಟುಂಬ ರಾಜಕಾರಣವನ್ನು ಟೀಕಿಸಿದ ಅವರು, ಕೆಲ ಪಕ್ಷಗಳಿಗೆ ಒಂದು ನಿರ್ದಿಷ್ಟ ಕುಟುಂಬಗಳೇ ಸರ್ವೋಚ್ಛವಾಗಿರುತ್ತದೆ. ಆದರೆ ಬಿಜೆಪಿ ಪಕ್ಷದಲ್ಲಿ ಮತದಾರರೇ ಸರ್ವೋಚ್ಛರಾಗಿದ್ದಾರೆ ಎಂದು ತ್ರಿವೇದಿ ಹೇಳಿದರು.

ಪ್ರಮುಖ ಸುದ್ದಿ :-   ಮಧ್ಯಪ್ರದೇಶದಲ್ಲಿ ಬಿಜೆಪಿ ಕಾರ್ಯತಂತ್ರ ಮರುರೂಪಿಸಿ ಪಕ್ಷದ ಅಭೂತಪೂರ್ವ ಗೆಲುವಿನ ಹಿಂದಿನ ಸೂತ್ರದಾರ ಈ ವಿಷ್ಣುದತ್ತ ಶರ್ಮಾ...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement