ಮಂಗಳನ ನೆಲದಲ್ಲಿ ಸಂಚರಿಸಿದ ಪರ್ಸವರೆನ್ಸ್

ವಾಶಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳ ಗ್ರಹಕ್ಕೆ ಕಳುಹಿಸಿರುವ ಬಾಹ್ಯಾಕಾಶ ನೌಕೆ ಪರ್ಸವರೆನ್ಸ್ ಮಾರ್ಚ್ 4ರಂದು ಮಂಗಳನ ನೆಲದಲ್ಲಿ ಮೊದಲ ಬಾರಿಗೆ ಸಂಚರಿಸಿದೆ.
ಪರ್ಸವರೆನ್ಸ್ ಸುಮಾರು 6.5 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಕ್ರಮಿಸಿತು. ಪರ್ಸವರೆನ್ಸ್ ರೋವರ್ ನೌಕೆಯು 33 ನಿಮಿಷಗಳ ಕಾಲದ ಸಂಚರಿಸಿದ್ದು, 3 ಮೀಟರ್‌ವರೆಗೆ ಮುಂದಡಿಯಿಟ್ಟಿತು. ಆನಂತರ ಅದು ಎಡಕ್ಕೆ 150 ಡಿಗ್ರಿಗಳಷ್ಟು ತಿರುಗಿತು ಹಾಗೂ 2.4 ಮೀಟರ್‌ಗಳಷ್ಟು ಹಿಂದಕ್ಕೆ ಸರಿದು ತಾತ್ಕಾಲಿಕ ನಿಲುಗಡೆ ತಾಣವೊಂದರಲ್ಲಿ ನಿಂತಿತು ಎಂದು ನಾಸಾ ತಿಳಿಸಿದೆ.
ಪರ್ಸವರೆನ್ಸ್ ಮಂಗಳನ ನೆಲದಲ್ಲಿ ತನ್ನ ಸಂಚಾರವನ್ನು ಆರಂಭಿಸಿದ ಸ್ಥಳಕ್ಕೆ ” ಆಕ್ಟೇವಿಯಾ ಇ. ಬಟ್ಲರ್ ಲ್ಯಾಂಡಿಂಗ್’ ಎಂದು ಹೆಸರಿಡಲಾಗಿದೆ. ಅಕ್ಟೇವಿಯಾ ಇ. ಬಟ್ಲರ್ ಅವರು ಆಂಗ್ಲ ವೈಜ್ಞಾನಿಕ ಕಾದಂಬರಿಗಳ ಲೇಖಕರಾಗಿ ಜನಪ್ರಿಯರಾಗಿದ್ದರು.
ಈ ನೌಕೆಯು ತನ್ನ ವೈಜ್ಞಾನಿಕ ಗುರಿಗಳನ್ನು ಕಾರ್ಯಗತಗೊಳಿಸುವುದನ್ನು ಆರಂಭಿಸಿದ ಬಳಿಕ ಅದರ ಸಂಚಾರದ ವ್ಯಾಪ್ತಿಯನ್ನು 200 ಮೀಟರ್ ಅಥವಾ ಅದಕ್ಕಿಂತಲೂ ಅಧಿಕ ದೂರದವರೆಗೂ ವಿಸ್ತರಿಸಲಾಗುವುದು ಎಂದು ನಾಸಾ ಹೇಳಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

ಇಂದಿನ ಪ್ರಮುಖ ಸುದ್ದಿ :-   ಒಮ್ಮೆಲೇ ಪೆಟ್ರೋಲ್-ಡೀಸೆಲ್ ಬೆಲೆ ಲೀಟರಿಗೆ 35 ರೂ.ಹೆಚ್ಚಳ ಮಾಡಿದ ಪಾಕಿಸ್ತಾನ ಸರ್ಕಾರ

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement