ಶ್ರೀಧರನ್‌ ಕೇರಳದ ಬಿಜೆಪಿ ಸಿಎಂ ಅಭ್ಯರ್ಥಿ: ಸುಬ್ರಮಣಿಯನ್‌ಸ್ವಾಮಿ ಅಪಶ್ರುತಿ

ತಿರುವನಂತಪುರಂ: ಮುಂದಿನ ತಿಂಗಳು ಕೇರಳ ವಿಧಾನಸಭೆಗೆ ಚುನಾವಣೆಗೆ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮೆಟ್ರೊ ಮ್ಯಾನ್ ಇ ಶ್ರೀಧರನ್ ಅವರನ್ನು ಘೋಷಿಸಿದ ಬೆನ್ನಲ್ಲೇ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಇದಕ್ಕೆ ಅಪಶ್ರುತಿ ಎತ್ತಿದ್ದಾರೆ.
ಶ್ರೀಧರನ್ ಅವರು ಕೇರಳ ಬಿಜೆಪಿ ಸಿಎಂ ಅಭ್ಯರ್ಥಿ ಆಗುವುದಕ್ಕೆ ಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಅವರು ಶ್ರೀಧರನ್‌ ವಯಸ್ಸಿನ ಬಗ್ಗೆ ಟ್ವೀಟ್‌ ಮಾಡಿದ್ದು 89 ವರ್ಷದ ಶ್ರೀಧರನ್ ಅವರನ್ನುಕೇರಳದ ಮುಖ್ಯಮಂತ್ರಿ ಎಂದು ಹೇಳಿರುವ ಬಿಜೆಪಿ ತನ್ನ ೭೫ ವರ್ಷದ ಮಿತಿಯನ್ನು ಸಡಿಲಿಸಿದೆಯೇ ಎಂದು ಕೇಳಿದ್ದಾರೆ.
75 ವರ್ಷ ಮೀರಿದ ಬಿಜೆಪಿ ನಾಯಕರನ್ನು ಮಾರ್ಗದರ್ಶನ ಮಂಡಳಿಯ ಹೆಸರಿನಲ್ಲಿ ನಿವೃತ್ತಿಯ ಅಂಚಿಗೆ ತಳ್ಳುವ ತನ್ನ ನಿರ್ಧಾರವನ್ನು ಬಿಜೆಪಿ ಬದಲಿಸಿದೆಯಾ ಎಂದು ಕೇಳಿರುವ ಸ್ವಾಮಿ, ಬದಲಾಯಿಸಿದ್ದರೆಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಡಾ. ಮುರಳಿ ಮನೋಹರ್ ಜೋಶಿ ಅವರಂತಹವರಿಗೂ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಬೇಕು’ ಎಂದು ಟ್ವೀಟ್ ಮಾಡಿದ್ದಾರೆ.
88ರ ವಯೋಮಾನದ ಶ್ರೀಧರನ್ ಅವರು ಮೂಲತಃ ಕೇರಳದ ಪಾಲಕ್ಕಾಡ್ ಜಿಲ್ಲೆಯವರು. ಕೊಂಕಣ ರೈಲ್ವೆ, ದೆಹಲಿ ಮೆಟ್ರೋ ಮೊದಲಾದ ನಗರಗಳ ಮೆಟ್ರೋ ಯೋಜನೆ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಚಾಟ್​ ಜಿಪಿಟಿಯಂತೆ ಭಗವದ್ಗೀತೆ ಆಧರಿಸಿ ‘ಗೀತಾ ಜಿಪಿಟಿ’ ರಚಿಸಿದ ಗೂಗಲ್ ಎಂಜಿನಿಯರ್ : ಜೀವನದ ಪ್ರಶ್ನೆಗಳಿಗೆ ಉತ್ತರ ಪಡೆಯಲು ಶ್ರೀಕೃಷ್ಣನೊಂದಿಗೆ ಮಾತನಾಡಿ..! ವೈಶಿಷ್ಟ್ಯಗಳು ಇಲ್ಲಿವೆ...

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement