ಆಂಟಿಲಿಯಾ ಬಳಿ ಎಸ್‌ಯುವಿಯಲ್ಲಿ ಸ್ಫೋಟಕ ಪತ್ತೆ ಪ್ರಕರಣ:  ಪೊಲೀಸರಿಗೆ ಮೃತ್‌ ಹಿರೆನ್‌ ಬರೆದ ಪತ್ರ ಬಹಿರಂಗ

ಮುಂಬೈ: ಕೆಲವು ದಿನಗಳ ಹಿಂದೆ ಮುಕೇಶ ಅಂಬಾನಿಯವರ ಆಂಟಿಲಿಯಾ ಸಮೀಪದಲ್ಲಿ ಪತ್ತೆಯಾದ ಸ್ಫೋಟಕ ತುಂಬಿದ ಎಸ್‌ಯುವಿ ‘ಮಾಲೀಕ’ ಮನ್ಸುಖ್ ಹಿರೆನ್ ಅವರ ಶವ ಶುಕ್ರವಾರ ಬೆಳಿಗ್ಗೆ ಥಾಣೆಯ ರೆಟಿ ಬಂದರ್ ಕ್ರೀಕ್ ನಲ್ಲಿ ಪತ್ತೆಯಾಗಿತ್ತು. ಆದರೆ ಈ ಪ್ರಕರಣದಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು ಮನ್ಸುಖ್‌ ಹಿರೇನ್‌  ಪೊಲೀಸರು ಹಾಗೂ ಮಾಧ್ಯಮದವರು ಕಿರುಕುಳ ನೀಡುತ್ತಿದ್ದಾರೆಂದು  ಮುಂಬೈ ಮತ್ತು ಥಾಣೆ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.

ಇದನ್ನು ವರದಿ ಮಾಡಿರುವ ಫ್ರಿ ಪ್ರೆಸ್‌ ಜರ್ನಲ್‌, ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ತಮಗೆ ಮತ್ತು ತಮ್ಮ ಕುಟುಂಬಕ್ಕೆ ಕಿರುಕುಳ ಮತ್ತು ಹಸ್ತಕ್ಷೇಪದಿಂದ ರಕ್ಷಣೆ ಕೋರಿದ್ದಾರೆ.

ಫೆಬ್ರವರಿ 25 ರಂದು ಉದ್ಯಮಿ ಮುಖೇಶ್ ಅಂಬಾನಿಯವರ “ಆಂಟಿಲಿಯಾ” ನಿವಾಸದಿಂದ ಕೇವಲ 600 ಮೀಟರ್ ದೂರದಲ್ಲಿ ಪತ್ತೆಯಾಗಿದ್ದ ಸ್ಫೋಟಕಗಳನ್ನು ಹೊಂದಿರುವ ಎಸ್‌ಯುವಿ ಕಾರು ಹಿರೆನ್ ಅವರದ್ದು ಎಂದು ಪೊಲೀಸರು ತಿಳಿಸಿದ್ದರು. ಹಿರೆನ್‌ ಕೆಲದಿನಗಳ ಹಿಂದೆ ಕಾರು ಕಳ್ಳತನವಾಗಿದ್ದರ ಬಗ್ಗೆ ದೂರು ದಾಖಲಿಸಿದ್ದರು ಎಂದು ವರದಿಯಾಗಿತ್ತು. ಆದರೆ ಗುರುವಾರ ರಾತ್ರಿಯಿಂದ ಅವರು ಕಾಣೆಯಾಗಿದ್ದರು, ಒಂದು ದಿನದ ನಂತರ ಅವರ ದೇಹ ಮುಂಬೈ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು.ಮಾರ್ಚ್ 2 ರ ದಿನಾಂಕದ ಪತ್ರದಲ್ಲಿ ಅವರು ತಾವು ಈ ಪ್ರಕರಣದಲ್ಲಿ ಬಲಿಪಶುವಾಗಿದ್ದರೂ ಸಹ ನನ್ನ ಮೇಲೆ ಆರೋಪಿಯಂತೆ ವರ್ತಿಸಲಾಗಿದೆ ಎಂದು ಪತ್ರದಲ್ಲಿ  ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

 

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement