ಆಂಟಿಲಿಯಾ ಬಳಿ ಕಾರಿನಲ್ಲಿ ಸ್ಫೋಟಕ ಪತ್ತೆ ಪ್ರಕರಣ: ಹಿರೆನ್‌ ಮರಣೋತ್ತರ ಪರೀಕ್ಷೆ ಬಹಿರಂಗ ಮಾಡಿದ ನಂತರವೇ ಶವ ಪಡೆಯುವುದಾಗಿ ಹೇಳಿದ ಕುಟುಂಬ

ಮುಖೇಶ್ ಅಂಬಾನಿ ಮನೆಯ ಹೊರಗೆ ಸ್ಫೋಟಕಗಳಿಂದ ತುಂಬಿ ನಿಂತಿದ್ದ ಎಸ್‌ಯುವಿ ಕಾರ್ ಸ್ಕಾರ್ಪಿಯೋ ಮಾಲೀಕರಾದ ಮನ್ಸುಖ್ ಹಿರೆನ್ ಅವರ ಕುಟುಂಬ ಸದಸ್ಯರು ಅವರ ಶವವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಓಪ್‌ ಇಂಡಿಯಾ ವರದಿ ಮಾಡಿದೆ.
ಅದರ ಪ್ರಕಾರ, ಪೊಲೀಸರು ಮತ್ತು ಆಡಳಿತವು ಅವರ ಮರಣೋತ್ತರ ವರದಿಯನ್ನು ಸಾರ್ವಜನಿಕಗೊಳಿಸಿದ ನಂತರವೇ ತಾವು ಅವರ ಶವವನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ. ಅವರು ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ.
ನ್ಯೂಸ್ 18 ಲೋಕಮತದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮನ್ಸುಖ್ ಹಿರೆನ್ ಕುಟುಂಬ ಸದಸ್ಯರು ಅವರ ಮೃತ ದೇಹವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಹಿರೆನ್ ಅವರ ಶವಪರೀಕ್ಷೆ ವರದಿ ಬಿಡುಗಡೆ ಮಾಡಲು ಅವರು ಆಡಳಿತವನ್ನು ಕೇಳಿದ್ದಾರೆ, ತಮ್ಮ ಬೇಡಿಕೆಗಳು ಈಡೇರಿದ ನಂತರವೇ ಅವರು ಶವವನ್ನು ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ.
ಮನ್ಸುಖ್ ಹಿರೆನ್ ಆರ್ಥಿಕವಾಗಿ ಸ್ಥಿರವಾಗಿದ್ದ, ಜೊತೆಗೆ ಅತ್ಯುತ್ತಮ ಈಜುಗಾರ: ಹೀಗಾಗಿ ಕುಟುಂಬ ಸದಸ್ಯರು ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದಾದ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ಮನ್ಸುಖ್ ಹಿರಿಯ ಸಹೋದರ ವಿನೋದ್ ಮನ್ಸುಖ್ ಮತ್ತು ಅವರ ಪತ್ನಿ ಶವವನ್ನು ಪಡೆಯುವ ಬಗಿಗನ ತಮ್ಮ ನಿರ್ಧಾರ ಅಚಲ ಎಂದು ಹೇಳಿದ್ದಾರೆ. ಆಂಟಿಲಿಯಾ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನಿಗೆ ಮಾನಸಿಕವಾಗಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿರುವ ಹಿರೆನ್‌ ಸಂಬಂಧಿಕರು ಹಿರೆನ್‌ ಬರೆದ ಪತ್ರದ ಬಗ್ಗೆಯೂ ಗಮನ ಸೆಳೆದಿದ್ದಾರೆ.
ಅಲ್ಲದೆ, ಹಿರೆನ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಪೊಲೀಸರ ಅನುಮಾನವನ್ನು ಹಿರೆನ್ ಕುಟುಂಬ ಸದಸ್ಯರು ತಿರಸ್ಕರಿಸಿದ್ದಾರೆ. ಅವರ ಸಾವಿನ ಹಿಂದೆ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಸರಿಯಾಗಿ ಅಡುಗೆ ಮಾಡಲಿಲ್ಲ ಎಂಬ ಕಾರಣಕ್ಕೆ ಅಜ್ಜಿಗೆ ಬರ್ಬರವಾಗಿ ಥಳಿಸಿದ ಮೊಮ್ಮಗ-ಆತನ ಪತ್ನಿ : ವೀಡಿಯೊ ವೈರಲ್‌, ಇಬ್ಬರ ಬಂಧನ

ಮನ್ಸುಖ್ ಹಿರೆನ್ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ: ಶುಕ್ರವಾರ ಮನ್ಸುಖ್ ಹಿರೆನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ವರದಿಗಳು ಬಂದ ನಂತರ, ಹಿರೆನ್ ಪತ್ನಿ ವಿಮ್ಲಾ, ತನ್ನ ಪತಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ ಮತ್ತು ಅಪರಾಧ ಶಾಖೆ ಅಧಿಕಾರಿ ತಾವ್ಡೆ ಅವರನ್ನು ಭೇಟಿಯಾಗುವುದಾಗಿ ಹೇಳಿ ಪತಿ ಮನೆಯಿಂದ ಹೊರಹೋಗಿದ್ದರು ಎಂದು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಹಿರೆನ್‌ ಪತ್ನಿ, ಅಪರಾಧ ವಿಭಾಗದ ಅಧಿಕಾರಿ ತಾವ್ಡೆ ವಾಡಿಕೆಯ ತನಿಖೆಗಾಗಿ ಮನ್ಸುಖ್ ಅವರಿಗೆ ಮಾಹಿತಿ ನೀಡಿದ್ದರು ಎಂದು ಹೇಳಿದರು. ವಿಮ್ಲಾ ಪ್ರಕಾರ, ವಾಡಿಕೆಯ ತನಿಖೆಯ ಭಾಗವಾಗಿ ಮನ್ಸುಖ್ ಅವರು ಘಾವ್‌ಬಂದರ್‌ನಲ್ಲಿ ತಾವ್ಡೆ ಅವರನ್ನು ಭೇಟಿಯಾಗಬೇಕಿತ್ತು.
ಹಿರೆನ್ ಆತ್ಮಹತ್ಯೆಯ ವರದಿಗಳು ಬರಲು ಕೆಲವೇ ಗಂಟೆಗಳ ಮೊದಲು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ್ದು, ಆಂಟಿಲಿಯಾ ಬಾಂಬ್ ಹೆದರಿಕೆಗೆ ಸಂಬಂಧಿಸಿದ ಸಂವೇದನಾಶೀಲ ವಿಷಯಗಳನ್ನು ಅಲ್ಲಿ ಹೇಳಿದ್ದಾರೆ.
ಮುಂಬೈನ ಮುಖೇಶ್ ಅಂಬಾನಿ ನಿವಾಸದ ಹೊರಗೆ ಜೆಲೆಟಿನ್ ಕಡ್ಡಿ ಮತ್ತು ಬೆದರಿಕೆ ಪತ್ರವನ್ನು ಇಡಲು ಬಳಸಲಾಗುತ್ತಿದ್ದ ಸ್ಕಾರ್ಪಿಯೋ ಕಾರಿನ ಮಾಲೀಕರು ಮುಂಬೈ ಪೊಲೀಸ್ ಹೆಸರಿನಲ್ಲಿ ನೋಂದಾಯಿಸಲಾದ ಮೊಬೈಲ್ ಫೋನ್ ಸಂಖ್ಯೆಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವಿಧಾನಸಭೆಯಲ್ಲಿ ಮಾತನಾಡಿದ ಫಡ್ನವೀಸ್ ಹೇಳಿದ್ದರು. ಅಧಿಕಾರಿ ಮತ್ತು ‘ಎನ್ಕೌಂಟರ್ ಸ್ಪೆಷಲಿಸ್ಟ್’ ಸಚಿನ್ ವಾಝೆ ಹೆಸರೂ ಪ್ರಸ್ತಾಪಿಸಿದ್ದರು.
ಮುಲುಂಡ್-ಐರೋಲಿ ಲಿಂಕ್ ರಸ್ತೆಯಿಂದ ತನ್ನ ಕಾರನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿದ್ದ ಮನ್ಸುಖ್ ಹಿರೆನ್ ಈ ಕಾರನ್ನು ಹೊಂದಿದ್ದ. ಕಾಣೆಯಾದ ಕಾರಿನ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಶುಕ್ರವಾರ ಮುಂಬೈನ ಸಮುದ್ರ ತೀರದಲ್ಲಿ ಹಿರೆನ್ ಶವವಾಗಿ ಪತ್ತೆಯಾಗಿದ್ದಾರೆ.
ಈ ಪ್ರಕರಣದಲ್ಲಿ ಭಾರಿ ಪಿತೂರಿ ಇದೆ ಎಂದು ಆರೋಪಿಸಿರುವ ಫಡ್ನವೀಸ್, ಬಾಂಬ್‌ ಬೆದರಿಕೆ ಪ್ರಕರಣದಲ್ಲಿ ಒಂದು ಸ್ಕಾರ್ಪಿಯೋ ಮತ್ತು ಒಂದು ಇನ್ನೋವಾ ಭಾಗಿಯಾಗಿತ್ತು ಎಂದು ಪೊಲೀಸರು ಹೇಳಿದ್ದರು ಮತ್ತು ಎರಡೂ ಕಾರುಗಳೂ ಥಾಣೆಯಿಂದ ಬಂದಿದ್ದವು. ಮತ್ತು ಅದೇ ಮಾರ್ಗವನ್ನು ಅನುಸರಿಸಿ ಸ್ಥಳ ತಲುಪಿದವು. ಸ್ಫೋಟಕಗಳೊಂದಿಗಿನ ಸ್ಕಾರ್ಪಿಯೋವನ್ನು ಮುಖೇಶ್ ಅಂಬಾನಿಯ ನಿವಾಸದ ಬಳಿ ನಿಲ್ಲಿಸಲಾಗಿದ್ದರೆ, ಇನ್ನೋವಾ ಅಲ್ಲಿರಲಿಲ್ಲ ಎಂದು ಪೊಲೀಸರು ಹೇಳಿದ್ದರು. ಕಾರನ್ನು ಥಾಣೆಯಿಂದ ಕಳವು ಮಾಡಿರುವುದು ಕಾಕತಾಳೀಯವಲ್ಲ, ಅವರು ಅನುಸರಿಸಿದ ಮಾರ್ಗವೂ ಥಾಣೆ ಮೂಲದ್ದಾಗಿದೆ, ಮತ್ತು ಈ ಪ್ರಕರಣದ ತನಿಖೆ ನಡೆಸುತ್ತಿರುವ ಐಒ ಕೂಡ ಥಾಣೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಫಡ್ನವೀಸ್ ಆರೋಪಿಸಿದರು
ಸಚಿನ್ ವಾಝೆ ಈ ಸ್ಥಳವನ್ನು ತಲುಪಿದ ಮೊದಲ ಪೊಲೀಸ್ ಅಧಿಕಾರಿ, ಮತ್ತು ನಂತರ ಅವರನ್ನು ತನಿಖಾ ಅಧಿಕಾರಿ (ಐಒ) ಆಗಿ ನೇಮಿಸಲಾಯಿತು. ಮೂರು ದಿನಗಳ ಹಿಂದೆ, ಐಒ ಆಗಿದ್ದ ಅವರನ್ನು ಅದರಿಂದ ತೆಗೆದುಹಾಕಲಾಯಿತು, ಅವರನ್ನು ಏಕೆ ತೆಗೆದುಹಾಕಲಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿರುವ ಫಡ್ನವೀಸ್‌ ಸ್ಥಳೀಯ ಪೊಲೀಸರಿಗಿಂತ ಮುಂಚೆ ವಾಝೆ ಹೇಗೆ ಸ್ಥಳವನ್ನು ತಲುಪಿದರು ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ.

ಪ್ರಮುಖ ಸುದ್ದಿ :-   ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement