ಸೋಲನ್ನು ಸಹಿಸಿಕೊಳ್ತೇವೆ..ವೈಯಕ್ತಿಕ ತೇಜೋವಧೆ ಸಹಿಸಿಕೊಳ್ಳಲು ಸಾಧ್ಯವಿಲ್ಲ :ಸಚಿವ ಹೆಬ್ಬಾರ

ಶಿರಸಿ: ಸಾರ್ವಜನಿಕ ಜೀವನದಲ್ಲಿರುವ ನಾವು ಸೋಲನ್ನು ಸಹಿಸಿಕೊಳ್ಳುತ್ತೇವೆ. ಆದರೆ, ವೈಯಕ್ತಿಕ ತೇಜೋವಧೆ ಮಾಡಿದರೆ ಮಾತ್ರ ನಮ್ಮಿಂದ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜಯದಲ್ಲಿ ‘ಬಿಜೆಪಿ ಸರ್ಕಾರ ಅತಿತವಕ್ಕೆ ಬರಲು ಕಾರಣರಾದ ಅದರಲ್ಲಿಯೂ ವಿಶೇಷವಾಗಿ ಸರ್ಕಾರ ರಚನೆಗೆ ಶಕ್ತಿ ನೀಡಿದ ಸಚಿವರನ್ನೇ ಗುರಿಯಾಗಿಸಿಬೆದರಿಸುವ ಪ್ರಯತ್ನಗಳು ನಡೆದಿವೆ ಎಂಬುದು ಸ್ಪಷ್ಟ. ಈ ಕಾರಣಕ್ಕಾಗಿಯೇ ನಮಗೆ ಕೋರ್ಟ್‌ ಮೊರೆ ಹೋಗುವ ಅನಿವಾರ್ಯತೆ ಎದುರಾಯಿತು ಎದು ತಿಳಿಸಿದರು.
‘ರಾಜಕೀಯ ಜೀವನದ ಹೊರತಾಗಿಯೂ ನಮಗೆ ವೈಯಕ್ತಿಕ ಜೀವನ ಎಂಬುದಿದೆ. ನಮಗೂ ಕುಟುಂಬ, ಮಕ್ಕಳು, ಬಂಧು-ಬಳಗವಿದೆ. ಯಾರೇ ಇರಲಿ, ಅವರ ವೈಯಕ್ತಿಕ ಚಾರಿತ್ರ್ಯ ಹನನ, ಸಾಮಾಜಿಕ ಗೌರವ ಹಾಳುಮಾಡುವ ಕೆಲಸ ರಾಜಕೀಯ ಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ಇಂಥವು ಯಾವ ರಾಜಕೀಯ ಪಕ್ಷಕ್ಕೂ ಶೋಭೆ ತರುವುದಿಲ್ಲ ಎಂದು ಸಚಿವ ಹೆಬ್ಬಾರ ಅಭಿಪ್ರಾಯಪಟ್ಟರು.
ಮಾಜಿ ಸಚಿವ ರಮೇಶ ಜಾರಕಿಹೋಳಿ ಇಂದಲ್ಲ ನಾಳೆ ತಪ್ಪಿತಸ್ಥರಲ್ಲ ಎಂದು ಸಾಬೀತಾಗಬಹುದು. ಆದರೆ, ಈಗ ಅವರ ಚಾರಿತ್ರ್ಯ ವಧೆ ಮಾಡಿದ್ದನ್ನು ವಾಪಸ್‌ ತಂದುಕೊಡಲು ಸಾಧ್ಯವೆ? ಇದೇ ಸ್ಥಿತಿ ಉಳಿದ ನಾಯಕರಿಗೂ ಎದುರಾಗಬಹುದು.ಯಾರಿಗಾದರೂ ಬರಬಹುದು. ಈ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಕೋರ್ಟಿಗೆ ನಮಗೂ ಅನಿವಾರ್ಯವಾಯಿತು ಎಂದು ಅವರು ಹೇಳಿದ್ದಾರೆ.
ಯಅವುದೇ ರಾಜಕೀಯ ಪಿತೂರಿಯಿಲ್ಲದೆ ಈ ರೀತಿಯ ಕೃತ್ಯಗಳು ನಡೆಯಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಬ್ಲ್ಯಾಕ್ ಮೇಲ್ ಮಾಡುವ ದೊಡ್ಡ ದಂಧೆಯೇ ನಡೆಯುತ್ತಿದೆ. ಹೀಗಾಗಿ ಈ ಬಗ್ಗೆ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement