ಸಿಡಿ, ಹನಿಟ್ರ್ಯಾಪ್‌ ಬ್ಲ್ಯಾಕ್‌ ಮೇಲ್‌ ಕಡಿವಾಣಕ್ಕೆ ರಾಜಕೀಯ ವಲಯದಲ್ಲಿ ಕಾನೂನು ಅಸ್ತ್ರದ ಚರ್ಚೆ

ಬೆಂಗಳೂರು: ಅಶ್ಲೀಲ ಸಿಡಿ ಮುಂದಿಟ್ಟುಕೊಂಡು ಬ್ಲ್ಯಾಕ್‌ ಮೇಲ್‌ ಮಾಡುವವರನ್ನು ಮಟ್ಟ ಹಾಕಲು ಕಠಿಣ ಕಾನೂನು ರೂಪಿಸುವ ಕುರಿತು ಚರ್ಚೆ ನಡೆಯುತ್ತಿದೆ.
ರಾಸಲೀಲೆ ಸಿಡಿ ಬಹಿರಂಗವಾದ ನಂತರ ರಾಜಕೀಯ ಕ್ಷೇತ್ರದಲ್ಲಿ ಈ ಚರ್ಚೆಗಳು ಆರಂಭವಾಗಿವೆ. ಈ ರೀತಿಯ ಮಾನಹಾನಿಯಾಗುವಂತಹ ಸಿಡಿಗಳನ್ನು ಏಕಾಏಕೀ ಬಹಿರಂಗ ಪಡಿಸದಂತೆ ತಡೆಯಾಜ್ಞೆ ನೀಡಲು ಕೆಲವು ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದು ನ್ಯಾಯಾಲಯ ಕೂಡ ಅವರ ಅರ್ಜಿ ಸ್ವೀಕರಿಸಿ ಮಧ್ಯಂತರ ತಡೆಯಾಜ್ಞೆ ಸಹ ನೀಡಿದೆ. ಇದರ ಬೆನ್ನಲ್ಲೇ ಈ ರೀತಿ ಸಿಡಿ ಮುಂದಿಟ್ಟುಕೊಂಡು ಬ್ಲ್ಯಾಕ್‌ ಮಾಡುವುದಕ್ಕೆ ಅವಕಾಶ ಸಿಗದಂತೆ ಮಾಡಲು ಕಠಿಣ ಕಾನೂನು ರೂಪಿಸಬೇಕು ಎಂಬ ಒತ್ತಾಯ ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.
ಪ್ರಭಾವಿಗಳನ್ನು ಹೆದರಿಸಲು ಹನಿಟ್ರ್ಯಾಪ್‍ನಂತಹ ದಂಧೆಗಳು ಜೋರಾಗಿವೆ ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ತಂತ್ರಜ್ಞಾನದ ಮೂಲಕ ನಕಲಿ ದ್ರಶ್ಯಾವಳಿಗಳನ್ನೂ ಸೃಷ್ಟಿಸುತ್ತಾರೆ. ಅವುಗಳನ್ನು ಬಳಸಿಕೊಂಡು ಬ್ಲಾಕ್‍ಮೇಲ್ ಮಾಡುತ್ತಾರೆ.ಹೀಗಾಗಿ ಇವುಗಳ ತಡೆಗೆ ಕಾನೂನು ಬೇಕು ಎನ್ನುವುದು ಹಲವು ರಾಜಕೀಯ ನಾಯಕರ ಅಭಿಪ್ರಾಯ.
ಈ ಸಿಡಿ ಆತಂಕ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷಗಳಿಗೆ ಸೀಮಿತವಾಗಿಲ್ಲ. ಎಲ್ಲ ಪಕ್ಷಗಳಿಗಳಲ್ಲಿಯೂ ಕೆಲವರಿಗೆ ಈ ಭಯ ಆರಂಭವಾಗಿದೆ. ಈ ಅಶ್ಲೀಲ ಸಿಡಿ ಬಿಡುಗಡೆಯಿಂದ ಮೊದಲು ಕಾಂಗ್ರೆಸ್‌ನ ಎಚ್‌.ವೈ.ಮೇಟಿ ಸಚಿವ ಸ್ತಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ನಾಲ್ಕು ದಿನಗಳ ಹಿಂದೆ ಇಂಥದ್ದೇ ಸಿಡಿ ಬಿಡುಗಡೆಯಾಗಿ ರಮೇಶ ಜಾರಕಿಹೊಳಿ ರಾಜೀನಾಮೆ ನೀಡಬೇಕಾಯಿತು. ಇದರ ಬೆನ್ನಲ್ಲೇ ಇನ್ನೂ ಮೂರ್ನಾಲ್ಕು ಇಂತ ಸಿಡಿಗಳಿದ್ದು ಅದನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಆರ್ಟಿಐ ಕಾರ್ಯಕರ್ತರು ಎಂದು ಹೇಳಿಕೊಳ್ಳುವವರು ಬಹಿರಂಗ ಪಡಿಸಿದ ಮೇಲಂತೂ ರಾಜ್ಯ ಸಚಿವ ಸಂಪುಟದ ಆರು ಸಚಿವರು ಕೋರ್ಟ್‌ಗೆ ಹೋಗಿ ತಮ್ಮ ವಿರುದ್ಧ ಯಾವುದೇ ಮಾನಹಾನಿಯಾಗುವ ಸುದ್ದಿಯನ್ನು ಪ್ರಸಾರ ಮಾಡಬಾರದು ಎಂದು ಮಾಧ್ಯಮಗಳಿಗೆ ನಿರ್ಬಂಧ ಕೋರಿ ಪ್ರಸಾರ ಮಾಡದಂತೆ ಕೋರ್ಟಿಂದ ಮಧ್ಯಂತರ ತಡೆಯಾಜ್ಞೆಯನ್ನೂ ತಂದಿದ್ದರು. ಈ ಬೆನ್ನಲ್ಲೇ ಈ ರೀತಿ ಸಿಡಿ ಬಿಡುಗಡೆ ಮಾಡಿ ಬ್ಲ್ಯಾಕ್‌ ಮೇಲ್‌ ಮಾಡುವುದರ ವಿರುದ್ಧ ಕಾನೂನು ಜಾರಿಗೆ ತರಬೇಕೆಂಬ ಒತ್ತಾಯವೂ ರಾಜಕೀಯ ವಲಯದಿಂದಲೇ ಬಂದಿದೆ.
ಆದರೆ ಸಾರ್ವಜನಿಕ ವಲಯದಿಂದ ಆಕ್ಷೇಪಣೆಗಳೂ ಇವೆ. ಜನಪ್ರತಿನಿಧಿಗಳು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡರೆ ಅದನ್ನು ನಿಯಂತ್ರಣ ಮಾಡುವುದು ಹೇಗೆ? ಅವರು ಏನೇ ಮಾಡಿದರೂ ಪ್ರಶ್ನಿಸಬಾರದು, ಅವರ ವಿರುದ್ಧ ದೂರು ಕೊಡಬಾರದು ಎಂದರೆ ಹೇಗೆ ಎಂಬುದು ಹಲವರ ಪ್ರಶ್ನೆ. ಹೀಗಾಗಿ ರಾಜಕಾರಣಿಗಳು ನೈತಿಕ ಲಗಾಮು ಹಾಕಲು ಕಾನೂನು ಜಾರಿಗೆ ತರುವುದು ಎಲ್ಲಕ್ಕಿಂತ ಮುಖ್ಯ ಎಂದು ಸಾರ್ವಜನಿಕರು ಹೇಳುತ್ತಾರೆ.
ಈ ರೀತಿ ಕಾನೂನು ತರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪವೂ ವ್ಯಕ್ತವಾಗಿದೆ. ಜನಪ್ರತಿನಿಗಳು ತಮ್ಮ ಅಕಾರ ದುರುಪಯೋಗ ಮಾಡಿಕೊಂಡು ಅನೈತಿಕ ಚಟುವಟಿಕೆ ಮಾಡುವುದರ ನಿಯಂತ್ರಣಕ್ಕೆ ಮೊದಲು ಕಠಿಣ ಕಾನುನು ರೂಪಿಸಬೇಕು. ಅದನ್ನು ಬಿಟ್ಟು ಹೋರಾಟಗಾರರ ಧ್ವನಿ ಅಡಗಿಸುವ ಪ್ರಯತ್ನ ನಡೆಸಿರುವುದು ಖಂಡನೀಯ ಎಂಬ ಮಾತುಗಳು ಕೇಳಿ ಬಂದಿವೆ.

ಪ್ರಮುಖ ಸುದ್ದಿ :-   ಸುಗಾವಿ ಶಾಲೆಯ ʼಶತಮಾನೋತ್ಸವ ಸಂಭ್ರಮʼ ಕಾರ್ಯಕ್ರಮ ಭಾನುವಾರ ಉದ್ಘಾಟನೆ : ವಿವಿಧ ಕಾರ್ಯಕ್ರಮ ಆಯೋಜನೆ

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement