ಗರ್ಭಪಾತದ ಮಿತಿ ೨೪ ವಾರಕ್ಕೆ ಹೆಚ್ಚಳ: ತಿದ್ದುಪಡಿ ಕಾಯ್ದೆ ರಾಜ್ಯಸಭೆಯಲ್ಲೂ ಅಂಗೀಕಾರ

ನವ ದೆಹಲಿ : ಗರ್ಭಪಾತದ ಮಿತಿಯನ್ನು ಈಗಿನ 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸುವಂತೆ ಕೋರಿರುವ ಗರ್ಭಾವಸ್ಥೆ ವೈದ್ಯಕೀಯ ಮುಕ್ತಾಯ ತಿದ್ದುಪಡಿ ಮಸೂದೆ 2020ಕ್ಕೆ ರಾಜ್ಯಸಭೆ ಮಂಗಳವಾರ ಅಂಗೀಕಾರ ನೀಡಿದೆ. ಸದನದಲ್ಲಿ ವಿಧೇಯಕದ ಮೇಲಿನ ಚರ್ಚೆಗೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್, ವ್ಯಾಪಕ ಸಮಾಲೋಚನೆ ನಡೆಸಿ ಈ ಮಸೂದೆ ಸಿದ್ಧಪಡಿಸಲಾಗಿದೆ ಎಂದು … Continued

ಸಿಡಿ, ಹನಿಟ್ರ್ಯಾಪ್‌ ಬ್ಲ್ಯಾಕ್‌ ಮೇಲ್‌ ಕಡಿವಾಣಕ್ಕೆ ರಾಜಕೀಯ ವಲಯದಲ್ಲಿ ಕಾನೂನು ಅಸ್ತ್ರದ ಚರ್ಚೆ

ಬೆಂಗಳೂರು: ಅಶ್ಲೀಲ ಸಿಡಿ ಮುಂದಿಟ್ಟುಕೊಂಡು ಬ್ಲ್ಯಾಕ್‌ ಮೇಲ್‌ ಮಾಡುವವರನ್ನು ಮಟ್ಟ ಹಾಕಲು ಕಠಿಣ ಕಾನೂನು ರೂಪಿಸುವ ಕುರಿತು ಚರ್ಚೆ ನಡೆಯುತ್ತಿದೆ. ರಾಸಲೀಲೆ ಸಿಡಿ ಬಹಿರಂಗವಾದ ನಂತರ ರಾಜಕೀಯ ಕ್ಷೇತ್ರದಲ್ಲಿ ಈ ಚರ್ಚೆಗಳು ಆರಂಭವಾಗಿವೆ. ಈ ರೀತಿಯ ಮಾನಹಾನಿಯಾಗುವಂತಹ ಸಿಡಿಗಳನ್ನು ಏಕಾಏಕೀ ಬಹಿರಂಗ ಪಡಿಸದಂತೆ ತಡೆಯಾಜ್ಞೆ ನೀಡಲು ಕೆಲವು ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದು ನ್ಯಾಯಾಲಯ ಕೂಡ … Continued

ಕ್ರಿಪ್ಟೋ ಕರೆನ್ಸಿ: ಶೀಘ್ರವೇ ಕಾನೂನು ರಚನೆಗೆ ನಿರ್ಧಾರ

ನವ ದೆಹಲಿ: ಕ್ರಿಪ್ಟೋ ಕರೆನ್ಸಿಗಳ ಬಗ್ಗೆ ಸರ್ಕಾರವು ಶೀಘ್ರದಲ್ಲೇ ಮಸೂದೆ ತರಲಿದೆ, ಏಕೆಂದರೆ ಅವುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು ಅಸ್ತಿತ್ವದಲ್ಲಿರುವ ಕಾನೂನುಗಳು ಅಸಮರ್ಪಕವಾಗಿವೆ ಎಂದು ಕೇಂದ್ರದ ಹಣ ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಠಾಕೂರ್, ಆರ್‌ಬಿಐ ಮತ್ತು ಸೆಬಿಯಂತಹ ನಿಯಂತ್ರಕ ಸಂಸ್ಥೆಗಳು ಕ್ರಿಪ್ಟೋ ಕರೆನ್ಸಿಗಳನ್ನು ನೇರವಾಗಿ ನಿಯಂತ್ರಿಸಲು … Continued

ಪರಿಷತ್ತಿನಲ್ಲೂ ಗೋ ಹತ್ಯೆ ನಿಷೇಧ ಕಾಯ್ದೆ ಅಂಗೀಕಾರ

ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಕರ್ನಾಟಕ ಗೋ ಹತ್ಯೆ ನಿಷೇಧ ಕಾಯ್ದೆಗೆ ವಿಧಾನ ಪರಿಷತ್ತಿನಲ್ಲಿ ಸೋಮವಾರ ಅಂಗೀಕಾರ ದೊರೆಯಿತು. ಕಾಯ್ದೆ ಮಂಡನೆ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ಗದ್ದಲ ಮಾಡಿದರೂ ಕೊನೆಗೆ ಧ್ವನಿ ಮತಕ್ಕೆ ಹಾಕಿದಾಗ ಅಂಗೀಕಾರ ದೊರೆಯಿತು. ಮಸೂದೆ ಮಂಡಿಸಿದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಕಾಯ್ದೆಗೆ ಸದನ ಒಪ್ಪಿಗೆ ನೀಡುವಂತೆ ಮನವಿ … Continued