ನವ ದೆಹಲಿ: ಉತ್ತರ ಪ್ರದೇಶದ ಶಾಮ್ಲಿ ಪೊಲೀಸರು ವಿಚಿತ್ರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ವ್ಯಕ್ತೊಯೊಬ್ಬ ತನ್ನ ಎಮ್ಮೆ ಕದ್ದ ಬಗ್ಗೆ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದು, ಈ ವ್ಯಕ್ತಿಯು ತನ್ನನ್ನು ಮಾಲೀಕ ಎಂದು ಹೇಳಿಕೊಂಡಿದ್ದಾನೆ. ಅದರ ಮಾಲೀಕತ್ವದ ವಿವಾದ ಬಗೆಹರಿಸಲು ಎಮ್ಮೆಯ ಡಿಎನ್‌ಎ ಪರೀಕ್ಷೆಗೆ ಕೋರಿದ್ದಾನೆ…!
ಝಿಂಝಾನಾದ ರೈತ ಚಂದ್ರಪಾಲ್ ಸಿಂಗ್ (40), 2020 ರ ಆಗಸ್ಟ್ 25 ರಂದು ತನ್ನ ನಾಲ್ಕು ವರ್ಷದ ಎಮ್ಮೆ ಕಳ್ಲತನವಾಗಿದೆ ಎಂದು ಹೇಳಿದ್ದಾನೆ ಮತ್ತು ಮೂರು ತಿಂಗಳ ನಂತರ ಶಾಮ್ಲಿಯಿಂದ 40 ಕಿ.ಮೀ ದೂರದಲ್ಲಿರುವ ಸಹರಾನ್ಪುರ್ ಜಿಲ್ಲೆಯ ಹಳ್ಳಿಯಲ್ಲಿ ಅದನ್ನು ಪತ್ತೆಹಚ್ಚಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಪೊಲೀಸರಿಗೆ ನೀಡಿದ ದೂರಿನಲ್ಲಿ ಚಂದ್ರಪಾಲ್ಬೀನ್‌ಪುರ ಗ್ರಾಮದ ಒಬ್ಬ ಸತ್ಯವೀರ್ ಸಿಂಗ್‌ಗೆ ಸೇರಿದ ಪ್ರಾಣಿಗಳ ಶೆಡ್‌ನಲ್ಲಿ ಎಮ್ಮೆಯನ್ನು ಕಂಡಿದ್ದೇನೆ. ಅದು ತನ್ನದೇ ಕಳೆದುಹೋದ ಎಮ್ಮೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾನೆ.
ಆದಾಗ್ಯೂ, ಗ್ರಾಮದ ಮುಖ್ಯಸ್ಥ ಮತ್ತು ಇತರ ಹಿರಿಯ ಪಂಚಾಯತ್ ಸದಸ್ಯರು ಸೇರಿದಂತೆ ಬೀನ್‌ಪುರದ ನಿವಾಸಿಗಳು ಎಮ್ಮೆ ಸತ್ಯವೀರ್‌ಗೆ ಸೇರಿದ್ದು ಎಂದು ಹೇಳಿದ್ದಾರೆ ಮತ್ತು ಈ ನಿಟ್ಟಿನಲ್ಲಿ ಪೊಲೀಸರಿಗೆ ಲಿಖಿತ ಹೇಳಿಕೆ ಸಹ ನೀಡಿದ್ದಾರೆ.ಆದರೆ ಇದನ್ನು ಒಪ್ಪಲು ಚಂದ್ರಪಾಲ್ ಸಿದ್ಧನಿಲ್ಲ.
ನವೆಂಬರ್ 2020 ಮತ್ತು ಈ ವರ್ಷದ ಫೆಬ್ರವರಿ ನಡುವೆ, ಚಂದ್ರಪಾಲ್ ಅವರು ಶಾಮ್ಲಿ ಪೊಲೀಸರಿಗೆ ಹಲವಾರು ದೂರುಗಳನ್ನು ಸಲ್ಲಿಸಿದ್ದು, ಅವರ ಎಮ್ಮೆಯನ್ನು ಮರಳಿ ಪಡೆಯಲು ಅಥವಾ ಇನ್ನೊಂದು ಪೊಲೀಸ್ ಠಾಣೆಯಲ್ಲಿ ಹೊಸದಾಗಿ ದೂರು ನೀಡಲು ಅನುಮತಿ ನೀಡುವಂತೆ ಒತ್ತಾಯಿಸಿದ್ದಾರೆ.ಈ ಕುರಿತು ದಿ ಪ್ರಿಂಟ್ ವರದಿ ಮಾಡಿದೆ.

ಫೆಬ್ರವರಿ 4 ರಂದು ಶಾಮ್ಲಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸುಕೃತಿ ಮಾಧವ್ ಅವರಿಗೆ ಸಲ್ಲಿಸಿದ ಅರ್ಜಿಯಲ್ಲಿ, ಎಮ್ಮೆಯ ಮೇಲೆ ಡಿಎನ್‌ಎ ಪರೀಕ್ಷೆ ನಡೆಸಲು ಚಂದ್ರಪಾಲ್ ಒತ್ತಾಯಿಸಿದ್ದಾರೆ.
ಪ್ರಕರಣದ ತೀರ್ಮಾನಕ್ಕೆ ಬರಲು ಎಮ್ಮೆಯ ಡಿಎನ್‌ಎ ಪರೀಕ್ಷೆ ನಡೆಸುವುದು ಅವಶ್ಯಕ” ಎಂದು ಚಂದ್ರಪಾಲ್ ಸಿಂಗ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಪ್ರಾಣಿಗಳ ಮೇಲೆ ಇಂತಹ ಪರೀಕ್ಷೆ ಮಾಡಿದ ಪೂರ್ವನಿದರ್ಶನವಿದೆಯೇ ಎಂದು ಪಶುಸಂಗೋಪನಾ ವಿಭಾಗದ ಅಧಿಕಾರಿಗಳು ಹೇಳಲು ಸಾಧ್ಯವಿಲ್ಲವಾದರೂ, ಎಮ್ಮೆಯ ಮೇಲಿನ ಡಿಎನ್‌ಎ ಪರೀಕ್ಷೆಯನ್ನು ಹೈದರಾಬಾದ್‌ನ ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರಕ್ಕೆ ಮಾದರಿಗಳನ್ನು ಕಳುಹಿಸುವ ಮೂಲಕ ಮಾಡಬಹುದು ಎಂದು ಹೇಳಿದ್ದಾರೆ. ಆದಾಗ್ಯೂ, ನಿಖರ ಫಲಿತಾಂಶಗಳಿಗಾಗಿ ಅರ್ಜಿದಾರರು ಪೋಷಕ ಎಮ್ಮೆಗಳ ಡಿಎನ್‌ಎ ಮಾದರಿಗಳನ್ನು ಪಡೆಯಬೇಕಾಗುತ್ತದೆ.
ವಿಚಾರಣೆಯ ಸ್ಥಿತಿಯ ಬಗ್ಗೆ ಪೊಲೀಸರು ದಾರಿ ತಪ್ಪಿಸಿದ್ದಾರೆ ಎಂಬ ಚಂದ್ರಪಾಲ್ ಅವರ ಆರೋಪದ ಬಗ್ಗೆ ಕೇಳಿದಾಗ, ಪೊಲಿಸರು ಚಂದ್ರಪಾಲ್ ಎಫ್ಐಆರ್ ದಾಖಲಿಸಲಿಲ್ಲ. ಕ್ರಮ ಕೈಗೊಳ್ಳಲು ಔಪಚಾರಿಕವಾಗಿ ದೂರು ದಾಖಲಿಸುವಂತೆ ಪೊಲೀಸರು ಹಲವು ಬಾರಿ ಕೇಳಿಕೊಂಡರೂ ದಾಖಲಿಸಲಿಲ್ಲ. ಆದರೆ ಎಮ್ಮೆಯ ಮೇಲೆ ಡಿಎನ್‌ಎ ಪರೀಕ್ಷೆ ಮಾಡಬೇಕೆಂದು ಚಂದ್ರಪಾಲ್ ಬಯಸುತ್ತಾರೆ. ಎಮ್ಮೆಯ ಡಿಎನ್‌ಎ ಪರೀಕ್ಷೆಯನ್ನು ಸರಿಯಾಗಿ ಪಡೆಯಲು ರೈತ ಈಗ ಎಮ್ಮೆಯ ತಾಯಿ ಮತ್ತು ತಂದೆಯನ್ನು ಪತ್ತೆಹಚ್ಚಬೇಕಾಗಿದೆ. ವಿಧಿವಿಜ್ಞಾನ ಪರೀಕ್ಷೆಯ ಅಗತ್ಯವಿದೆ. ಅವರು ಮಾದರಿಗಳನ್ನು ಹೈದರಾಬಾದ್‌ನ ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರಕ್ಕೆ ಕಳುಹಿಸಬೇಕಾಗುತ್ತದೆ.ಅಂತೂ ಎಮ್ಮೆಯ ಪ್ರಕರಣ ಡಿಎನ್‌ಎ ಪರೀಕ್ಷೆ ವರೆಗೆ ಪ್ರಕರಣ ಬಂದು ನಿಂತಿದೆ.
ನಿಮ್ಮ ಕಾಮೆಂಟ್ ಬರೆಯಿರಿ