ಟಿಬೆಟ್ ಸಂಸ್ಕೃತಿ ನಾಶ ಮಾಡುತ್ತಿರುವ ಚೀನಾ: ಅಮೆರಿಕ

ವಾಷಿಂಗ್ಟನ್: ಟಿಬೆಟ್‍ ಸಂಸ್ಕೃತಿ-ಇತಿಹಾಸವನ್ನು ನಾಶಪಡಿಸುವಲ್ಲಿ ಚೀನಾನಿರತವಾಗಿದೆ ಎಂದು ಅಮೆರಿಕ ಹೇಳಿದೆ
ತಮ್ಮ ಹಕ್ಕು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಟಿಬೆಟಿಯನ್ನರ ಪರ ಅಮೆರಿಕ ನಿಲ್ಲಬೇಕು ಎಂದು ಹೌಸ್ ಆಫ್ ರೆಪ್ರೆಸೆಂಟೀವ್‍ನ ಸ್ಪೀಕರ್ ನ್ಯಾನ್ಸಿ ಫೆಲೋಸಿ ಒತ್ತಾಯಿಸಿದ್ದಾರೆ.
ಟಿಬೆಟ್‍ನ ಹಿಮಾಲಯ ಭೂಭಾಗ ಅತಿಕ್ರಮಿಸಿರುವ ಚೀನಾ ಧೋರಣೆ ಖಂಡಿಸಿ ಆಯೋಜಿಸಲಾಗಿದ್ದ 62ನೆ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, 62 ವರ್ಷಗಳ ಹಿಂದೆ ಚೀನಾ ಧೋರಣೆ ಖಂಡಿಸಿ ಹೋರಾಟ ನಡೆಸಿಕೊಂಡು ಬರುತ್ತಿರುವ ಟಿಬೆಟಿಯನ್ನರು ಇಂದಿಗೂ ತಮ್ಮ ಭೂಮಿಗಾಗಿ ತ್ಯಾಗ ಮನೋಭಾವ ಪ್ರದರ್ಶಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಅವರು ಬಣ್ಣಿಸಿದ್ದಾರೆ.
ಟಿಬೆಟ್‍ನವರು ತಮ್ಮ ಹಕ್ಕುಗಳಿಗಾಗಿ ಶಾಂತ ರೀತಿಯಿಂದ ಹೋರಾಟ ನಡೆಸುತ್ತಿರುವುದು ಅವರ ಮನಃ ಸಾಕ್ಷಿಗೆ ಹಿಡಿದ ಕೈಗನ್ನಡಿ ಎಂದು ಹೇಳಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವೀಡಿಯೊ : ಸೇನಾ ಹೆಲಿಕಾಪ್ಟರ್‌ ಗಳ ಡಿಕ್ಕಿ ; 10 ಮಂದಿ ಸಾವು

ನಿಮ್ಮ ಕಾಮೆಂಟ್ ಬರೆಯಿರಿ

advertisement