ದೇಶದಲ್ಲಿ ಒಂದೇ ದಿನ 22,854 ಕೊರೋನಾ ಸೋಂಕು…!

ನವ ದೆಹಲಿ : ಕೊರೊನಾ ವೈರಸ್ ಅಬ್ಬರ ಮತ್ತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ ೨೪ ತಾಸಿನಲ್ಲಿ ಒಂದೇ ದಿನದಲ್ಲಿ 22,854 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಬುಲೆಟಿನ್ ಗುರುವಾರ ತಿಳಿಸಿದೆ.
ಈ ಸೋಂಕಿನಿಂದ 126 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,58,189ಕ್ಕೆ ಏರಿಕೆಯಾಗಿದೆ. .ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆ 10,938,146ಕ್ಕೆ ತಲುಪಿದೆ.ಪ್ರಸ್ತುತ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ1,89,226 ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಈ ವರ್ಷದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 20,000ದ ಗಡಿ ದಾಟಿರುವುದು ಇದು ಮೂರನೇ ಬಾರಿ. ಹಿಂದೆ ಜನವರಿ ಮೊದಲ ವಾರದಲ್ಲಿ ದಾಖಲಾಗಿದ್ದು, ಕೋವಿಡ್ ಪ್ರಕರಣಗಳ ಮೊದಲ ಅಲೆಯು ಮರುಕಳಿಸುತ್ತಿದೆ. ಅತಿ ಹೆಚ್ಚು ಪ್ರಕರಣ ಮಹಾರಾಷ್ಟ್ರದಲ್ಲಿ ದಾಖಲಾಗಿದ್ದು, ಬುಧವಾರ 13,659 ಕೋವಿಡ್-19 ಪ್ರಕರಣಗಳು ದಾಖಲಾಗಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement