ಲಂಡನ್: ಬ್ರಿಟನ್ನಲ್ಲಿ ಕೊರೊನಾ ವೈರಸ್ಗಿಂತ ಮಾರಣಾಂತಿಕವಾದ ಮತ್ತೊಂದು ವೈರಸ್ ಕಾಣಿಸಿಕೊಂಡಿದೆ.
ಮಧ್ಯ ವಯಸ್ಕರ ಮೇಲೂ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಬಿ.1.1.7 ರೂಪಾಂತರ ವೈರಸ್ ಹಿಂದಿನ ಕೊರೊನಾ ಸೋಂಕಿಗಿಂತಲೂ ಮಾರಣಾಂತಿಕ ಎಂದು ಬ್ರಿಟನ್ ತಜ್ಞರು ಹೇಳಿದ್ದಾರೆ.
ರೂಪಾಂತರಿ ವೈರಸ್ ಕಾಣಿಸಿಕೊಂಡಿರುವ 54,906 ಸೋಂಕಿತರ ತಪಾಸಣೆ ನಡೆಸಲಾಗಿದ್ದು, ಅವರಲ್ಲಿ 227 ಮಂದಿ ಮೃತಪಟ್ಟಿದ್ದಾರೆ ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ವರದಿ ಮಾಡಿದೆ. ಕೋವಿಡ್-19 ಸೋಂಕಿಗೆ ಸಾಯುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಈಗ ರೂಪಾಂತರ ವೈರಾಣುವಿಗೆ ಬ್ರಿಟನ್ ಹೆದರಿಕೊಂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ