ಕರ್ನಾಟಕ ಸೇರಿ 17 ರಾಜ್ಯಗಳಲ್ಲಿ ‘ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್’ ವ್ಯವಸ್ಥೆ ಕಾರ್ಯಗತ

ಚಿತ್ರಕೃಪೆ-ಇಂಟರ್ನೆಟ್‌
ಚಿತ್ರಕೃಪೆ-ಇಂಟರ್ನೆಟ್‌

ನವ ದೆಹಲಿ: ‘ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆಯನ್ನು’ ಹದಿನೇಳು ರಾಜ್ಯಗಳಲ್ಲಿ ಕಾರ್ಯರೂಪಕ್ಕೆ ಬಂದಿದೆ.
ಈ ಸುಧಾರಣೆಯನ್ನು ಉತ್ತರಾಖಂಡ ಪೂರ್ಣಗೊಳಿಸಿದೆ. ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆ ಸುಧಾರಣೆ ಪೂರ್ಣಗೊಳಿಸುವ ರಾಜ್ಯಗಳು ಗ್ರಾಸ್ ಸ್ಟೇಟ್ ಡಿಸ್ಟ್ರಿಕ್ಟ್ ಪ್ರಾಡಕ್ಟ್ (ಜಿಎಸ್ ಡಿಪಿ) ಶೇ.0.25ರಷ್ಟು ಹೆಚ್ಚುವರಿ ಸಾಲ ಪಡೆಯಲು ಅರ್ಹತೆ ಪಡೆಯುತ್ತವೆ. ಇದರ ಪ್ರಕಾರ, ಈ ರಾಜ್ಯಗಳಿಗೆ 37,600 ಕೋಟಿ ಹೆಚ್ಚುವರಿ ಸಾಲ ಪಡೆಯುವ ಅನುಮತಿ ನೀಡಲಾಗುತ್ತದೆ.
ಕರ್ನಾಟಕ, ತಮಿಳುನಾಡು,ಕೇರಳ, ಆಂಧ್ರಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ,ಮಣಿಪುರ, ಒಡಿಶಾ.ಪಂಜಾಬ್, ರಾಜಸ್ಥಾನ, ತೆಲಂಗಾಣ, ತ್ರಿಪುರಾ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶ
ರಾಜ್ಯಗಳು ಈ ಯೋಜನೆಯನ್ನು ಕಾರ್ಯಗತಗೊಳಿಸಿವೆ.
ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ದೇಶಾದ್ಯಂತ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ (FPS) ಪಡಿತರ ದೊರೆಯುವಂತೆ ಇದು ಖಾತರಿಪಡಿಸುತ್ತದೆ.
ಈ ಯೋಜನೆಯುವ ವಿಶೇಷವಾಗಿ ವಲಸೆ ಹೋಗುವವರು, ದಿನಗೂಲಿ ಕಾರ್ಮಿಕರು, ಚಿಂದಿ ಆಯುವವರು, ಬೀದಿ ಬದಿ ವ್ಯಾಪಾರಿಗಳು, ಸಂಘಟಿತ ಮತ್ತು ಅಸಂಘಟಿತ ವಲಯದ ತಾತ್ಕಾಲಿಕ ಕಾರ್ಮಿಕರು, ಗೃಹ ಕಾರ್ಮಿಕರು ಇತ್ಯಾದಿ ವಲಸೆ ಕಾರ್ಮಿಕರಿಗೆ ಅನುಕೂಲ ಮಾಡುವ ಉದ್ದೇಶ ಹೊಂದಿದೆ. ಈ ತಂತ್ರಜ್ಞಾನ ಆಧಾರಿತ ಸುಧಾರಣೆಯಿಂದ ಫಲಾನುಭವಿಗಳು ತಮ್ಮ ಆಯ್ಕೆಯ ಯಾವುದೇ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ಇ-ಪಿಒಎಸ್) ಮೂಲಕ ತಮ್ಮ ಆಯ್ಕೆಯ ನ್ಯಾಯಬೆಲೆ ಅಂಗಡಿಗಳಿಂದ ತಮ್ಮ ಆಹಾರ ಧಾನ್ಯಪಡೆಯಲು ಸಾಧ್ಯವಾಗಲಿದೆ.
ಪಡಿತರ ಚೀಟಿಯ ಅಂತಾರಾಜ್ಯ ಪೋರ್ಟೆಬಿಲಿಟಿ, ಎಲ್ಲಾ ಪಡಿತರ ಚೀಟಿಗಳ ಆಧಾರ್ ದೃಢೀಕರಣ ಮತ್ತು ಎಲ್ಲ ನ್ಯಾಯಬೆಲೆ ಅಂಗಡಿಗಳ (ಎಫ್ ಪಿಎಸ್) ಸ್ವಯಂಚಾಲಿತಗೊಳಿಸುವ ಮೂಲಕ ಫಲಾನುಭವಿಗಳ ಬಯೋಮೆಟ್ರಿಕ್ ದೃಢೀಕರಣ ವನ್ನು ವಿದ್ಯುನ್ಮಾನ ಪಾಯಿಂಟ್ ಆಫ್ ಸೇಲ್ (ಇ-ಪಿಒಎಸ್) ಸಾಧನಗಳ ಅಳವಡಿಕೆಯೊಂದಿಗೆ ಮಾಡುವುದು ಅತ್ಯಗತ್ಯವಾಗಿದೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement