ಹಿರೆನ್ ಸಾವಿನ ಪ್ರಕರಣ: ಪೊಲೀಸ್‌ ಅಧಿಕಾರಿ ವಾಝೆ ವರ್ಗ

ಮುಂಬೈ; ಮನ್ಸುಖ್ ಹಿರೆನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಾಝೆ ಅವರನ್ನು ನಗರ ಪೊಲೀಸರ ನಾಗರಿಕ ಸೌಲಭ್ಯ ಕೇಂದ್ರ (ಸಿಎಫ್‌ಸಿ) ಘಟಕಕ್ಕೆ ವರ್ಗಾಯಿಸಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಈ ಕುರಿತು ವರದಿ ಮಾಡಿರುವ ಫ್ರಿ ಪ್ರೆಸ್‌ ಜರ್ನಲ್‌, ಪತಿಯ ಅನುಮಾನಾಸ್ಪದ ಸಾವಿನ ಬಗ್ಗೆ ಹಿರೆನ್ ‌ ಪತ್ನಿ ವಾಝೆ ವಿರುದ್ಧ ಆರೋಪಿಸಿರುವ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ಮುಂಬೈ ಅಪರಾಧ ಶಾಖೆಯಿಂದ ವರ್ಗಾವಣೆ ಮಾಡಲಾಯಿತು ಎಂದು ಹೇಳಿದೆ.
ಪಾಸ್‌ಪೋರ್ಟ್‌ಗಳು, ವಿವಿಧ ಪರವಾನಗಿಗಳು ಮತ್ತು ಇತರ ಸಾರ್ವಜನಿಕ ಸಂಬಂಧಿತ ಸೇವೆಗಳಿಗೆ ಪೊಲೀಸ್ ಅನುಮತಿ ನೀಡುವ ಘಟಕ ಸಿಎಫ್‌ಸಿ ಆಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ ಎಂದು ವರದಿ ಮಾಡಿದೆ.

ಫೆಬ್ರವರಿ 25 ರಂದು ದಕ್ಷಿಣ ಮುಂಬೈನ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಬಳಿ ಸ್ಫೋಟಕಗಳು ಮತ್ತು ಬೆದರಿಕೆ ಪತ್ರವಿದ್ದ ಸ್ಕಾರ್ಪಿಯೋ ಪತ್ತೆಯಾಗಿತ್ತು. ಈ ಎಸ್‌ಯುವಿ ಒಂದು ವಾರದ ಹಿಂದೆಯೇ ಕಳ್ಳತನವಾಗಿದೆ ಎಂದು ಹಿರೆನ್‌ ಪೊಲೀಸ್‌ ದೂರು ದಾಖಲಿಸಿದ್ದರು. ಆದರೆ ಮಾರ್ಚ್ 5 ರಂದು ಥಾಣೆಯ ಕೊಲ್ಲಿಯಲ್ಲಿ ಶವವಾಗಿ ಪತ್ತೆಯಾದಾಗ ಪ್ರಕರಣವು ತಿರುವು ಪಡೆಯಿತು.

ಇಂದಿನ ಪ್ರಮುಖ ಸುದ್ದಿ :-   ಗರ್ಭಧರಿಸಿದ ದೇಶದ ಮೊದಲ ತೃತೀಯಲಿಂಗಿ : ಮಾರ್ಚ್‌ನಲ್ಲಿ ತಮ್ಮ ಮಗು ಸ್ವಾಗತಿಸಲು ಸಜ್ಜಾದ ಕೇರಳದ ತೃತೀಯಲಿಂಗಿ ದಂಪತಿ...!

ನವೆಂಬರ್‌ನಲ್ಲಿ ಪತಿ ಎಸ್‌ಯುವಿಯನ್ನು ವಾಝೆಗೆ ನೀಡಿದ್ದಾಗಿ ಹಿರೆನ್ ಅವರ ಪತ್ನಿ ಹೇಳಿಕೊಂಡಿದ್ದು, ಫೆಬ್ರವರಿ ಮೊದಲ ವಾರದಲ್ಲಿ ಅಧಿಕಾರಿ ಹಿಂದಿರುಗಿಸಿದ್ದರು ಎಂದು ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಈ ವಾರದ ಆರಂಭದಲ್ಲಿ ವಾಝೆ ಅವರ ಹೇಳಿಕೆಯನ್ನು ದಾಖಲಿಸಿದೆ, ಇದರಲ್ಲಿ ಹಿರೆನ್ ವಶದಲ್ಲಿದ್ದ ಎಸ್‌ಯುವಿ ಬಳಸಿದ್ದನ್ನು ಅವರು ನಿರಾಕರಿಸಿದ್ದಾರೆ.

ಆಟೋಮೊಬೈಲ್ ಪಾರ್ಟ್ಸ್ ವ್ಯಾಪಾರಿ ಹಿರೆನ್ ಅವರ ನಿಗೂಢ ಸಾವಿನ ವಿಚಾರಣೆ ಮುಗಿಯುವ ವರೆಗೂ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ರಾಜ್ಯ ಗುಪ್ತಚರ ಘಟಕದಿಂದ (ಸಿಐಯು) ವಾಜ್ ಅವರನ್ನು ವರ್ಗಾವಣೆ ಮಾಡುವುದಾಗಿ ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಪ್ರಕಟಿಸಿದ್ದರು. ಸುಮಾರು 63 ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗಿದ್ದ ವಾಝೆ ಅವರನ್ನು 2004 ರಲ್ಲಿ ಖ್ವಾಜಾ ಯೂನುಸ್‌ನ ಕಸ್ಟಡಿ ಸಾವಿನ ಆರೋಪದ ಮೇಲೆ ಅಮಾನತುಗೊಳಿಸಲಾಗಿತ್ತು. ಅವರನ್ನು ಜೂನ್ 2020 ರಲ್ಲಿ ಮತ್ತೆ ಸೇವೆಗೆ ಸೇರಿಸಲಾಯಿತು ಮತ್ತು ಮುಂಬೈ ಅಪರಾಧ ಶಾಖೆಯ ಸಿಐಯು ಮುಖ್ಯಸ್ಥರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

ಇಂದಿನ ಪ್ರಮುಖ ಸುದ್ದಿ :-   ಗುರುಗ್ರಹದ ಸುತ್ತ ಹೊಸದಾಗಿ 12 ಉಪಗ್ರಹಗಳು ಪತ್ತೆ : ಶನಿ ಹಿಂದಿಕ್ಕಿ ಸೌರವ್ಯೂಹದಲ್ಲಿ ಅತಿ ಹೆಚ್ಚು ಉಪಗ್ರಹ ಹೊಂದಿದ ಹೆಗ್ಗಳಿಕೆ ಪಡೆದ ಗುರುಗ್ರಹ

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement