ಬಾಳಾಸಾಹೇಬ್ ಠಾಕ್ರೆ, ನನ್ನ ಇಬ್ಬರು ಹೆಣ್ಣುಮಕ್ಕಳ ಮೇಲೆ ಪ್ರಮಾಣ ಮಾಡ್ತೇನೆ, ವಾಝೆ ಪತ್ರದಲ್ಲಿನ ಆರೋಪ ಸುಳ್ಳು : ಅನಿಲ್ ಪರಬ್

ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಾಝೆ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯಕ್ಕೆ ಬುಧವಾರ ಸಲ್ಲಿಸಲು ಯತ್ನಿಸಿದ ಪತ್ರವೊಂದರಲ್ಲಿ ಅವರು ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್, ರಾಜ್ಯ ಸಾರಿಗೆ ಸಚಿವ ಅನಿಲ್ ಪರಬ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ. ಶಿವಸೇನೆ ಮುಖಂಡ ಪರಬ್, ವಾಝೆ ಅವರ … Continued

ಮನ್ಸುಖ್ ಹಿರೆನ್ ಹತ್ಯೆ ಸಂಚು ಯೋಜಿಸಿದ ಸಭೆಯಲ್ಲಿ ಸಚಿನ್ ವಾಝೆ ಹಾಜರಿದ್ದರು: ಎನ್ಐಎ

ಮುಂಬೈ: ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರೆನ್ ಅವರ ಹತ್ಯೆಗೆ ಯೋಜಿಸಲಾದ ಸಭೆಯಲ್ಲಿ ಅಮಾನತುಗೊಂಡ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಮತ್ತು ಮಾಜಿ ಪೊಲೀಸ್ ವಿನಾಯಕ ಶಿಂಧೆ ಹಾಜರಿದ್ದರು ಮತ್ತು ವಾಝೆ ಅವರು ಮೊಬೈಲ್ ಫೋನ್ ಬಳಸಿ ಸಂಚುಕೋರನನ್ನು ಸಂಪರ್ಕಿಸಿದ್ದಾರೆ ಎಂದು ಎನ್ಐಎ ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದೆ ಪಿತೂರಿ ಮತ್ತು ಅಪರಾಧದ ಹಿಂದಿನ ಉದ್ದೇಶವನ್ನು … Continued

ಅಂಬಾನಿ ಮನೆ ಬಳಿ ಬಾಂಬ್ ಬೆದರಿಕೆ ಪ್ರಕರಣ: ವಾಝೆ ಬೆದರಿಕೆ ಪತ್ರ ಇಡಲು ಎಸ್ಯುವಿ ಬಳಿ ಬಂದಿದ್ದು ಸಿಸಿಟಿವಿಯಲ್ಲಿ ಸೆರೆ ?

ಮುಂಬೈ: ಫೆಬ್ರವರಿ 25 ರಂದು ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯವರ ನಿವಾಸವಾದ ಆಂಟಿಲಿಯಾ ಬಳಿ ಜೆಲೆಟಿನ್ ಸ್ಟಿಕ್ಸ್ ತುಂಬಿದ ಎಸ್‌ಯುವಿ ಪತ್ತೆಯಾದ ಕೆಲವು ದಿನಗಳ ನಂತರ, ಈ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳು ಈ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿ ಸಚಿನ್‌ ವಾಝೆ ಪಾಲ್ಗೊಂಡಿರುವುದನ್ನು ಮತ್ತಷ್ಟು ದೃಢಪಡಿಸಿದೆ ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಈ ಕುರಿತು ವರದಿ ಮಾಡಿರುವ ಫ್ರೀ ಪ್ರೆಸ್‌ … Continued

ಸಚಿನ ವಾಝೆ ಎನ್‌ಐಎ ಕಸ್ಟಡಿ ಏಪ್ರಿಲ್ 3ರ ವರೆಗೆ ವಿಸ್ತರಣೆ

ಮುಂಬೈ: ದೇಶದ ಅಗ್ರಮಾನ್ಯ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮನೆಯ ಬಳಿ ಸ್ಫೋಟಕಗಳಿಂದ ತುಂಬಿದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಸಚಿನ್ ವಾಝೆ ಅವರ ಎನ್‌ಐಎ ಕಸ್ಟಡಿಯನ್ನು ವಿಶೇಷ ನ್ಯಾಯಾಲಯವು ಏಪ್ರಿಲ್ 3ರ ವರೆಗೆ ವಿಸ್ತರಿಸಿದೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನನ್ನು ಬಲಿಪಶುವಾಗಿ ಮಾಡಲಾಗಿದೆ ಎಂದು ಸಚಿನ್ ವಾಜೆ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ … Continued

ಎಸ್‌ಯುವಿ ಜಿಲೆಟಿನ್‌ ಪ್ರಕರಣವೂ… ವಾಝೆ ಬಂಧನವೂ…ಮುಂಬೈ ಪೊಲೀಸ್‌ ಆಯುಕ್ತರ ವರ್ಗಾವಣೆಯೂ….

ಮುಂಬೈ : ಮುಂಬೈ ಪೊಲೀಸ್‌ ಆಯುಕ್ತ ಪರಮ್ ಬಿರ್ ಸಿಂಗ್ ಅವರನ್ನು ಮಹಾರಾಷ್ಟ್ರದ ಗೃಹರಕ್ಷಕ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ಬುಧವಾರ ಪ್ರಕಟಿಸಿದ್ದಾರೆ. ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹೇಮಂತ್ ನಾಗರಲೆ ಅವರು ಮುಂಬೈನ ಹೊಸ ಪೊಲೀಸ್ ಆಯುಕ್ತರಾಗಿದ್ದಾರೆ ಎಂದು ದೇಶಮುಖ್ ಹೇಳಿದ್ದಾರೆ. ವಿವಾದಿತ ಮುಂಬೈ ಪೊಲೀಸ್‌ ಆಯುಕ್ತ ಪರಮ್ … Continued

ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ: ವಾಜೆ ಕಚೇರಿ ಮೇಲೆ ರಾತ್ರೋರಾತ್ರಿ ಎನ್‌ಐಎ ದಾಳಿ, ಮರ್ಸಿಡಿಸ್ ಕಾರು, ನಗದು ವಶ

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕಗಳಿದ್ದ ಎಸ್‌ಯುವಿ ವಾಹನ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಕಚೇರಿ ಮೇಲೆ ಎನ್‌ಐಎ ಮಂಗಳವಾರ ರಾತ್ರೋರಾತ್ರಿ ದಾಳಿ ನಡೆಸಿದ್ದು, ಮರ್ಸಿಡಿಸ್ ಕಾರು, ನಗದು ಹಾಗೂ ಮತ್ತಿತರ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ತಂಡ, ವಾಜೆ ಕಚೇರಿಯಿಂದ … Continued

ಹಿರೆನ್ ಸಾವಿನ ಪ್ರಕರಣ: ಪೊಲೀಸ್‌ ಅಧಿಕಾರಿ ವಾಝೆ ವರ್ಗ

ಮುಂಬೈ; ಮನ್ಸುಖ್ ಹಿರೆನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಾಝೆ ಅವರನ್ನು ನಗರ ಪೊಲೀಸರ ನಾಗರಿಕ ಸೌಲಭ್ಯ ಕೇಂದ್ರ (ಸಿಎಫ್‌ಸಿ) ಘಟಕಕ್ಕೆ ವರ್ಗಾಯಿಸಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಈ ಕುರಿತು ವರದಿ ಮಾಡಿರುವ ಫ್ರಿ ಪ್ರೆಸ್‌ ಜರ್ನಲ್‌, ಪತಿಯ ಅನುಮಾನಾಸ್ಪದ ಸಾವಿನ ಬಗ್ಗೆ ಹಿರೆನ್ … Continued