ಅಂಬಾನಿ ಮನೆ ಬಳಿ ಬಾಂಬ್ ಬೆದರಿಕೆ ಪ್ರಕರಣ: ವಾಝೆ ಬೆದರಿಕೆ ಪತ್ರ ಇಡಲು ಎಸ್ಯುವಿ ಬಳಿ ಬಂದಿದ್ದು ಸಿಸಿಟಿವಿಯಲ್ಲಿ ಸೆರೆ ?

ಮುಂಬೈ: ಫೆಬ್ರವರಿ 25 ರಂದು ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯವರ ನಿವಾಸವಾದ ಆಂಟಿಲಿಯಾ ಬಳಿ ಜೆಲೆಟಿನ್ ಸ್ಟಿಕ್ಸ್ ತುಂಬಿದ ಎಸ್‌ಯುವಿ ಪತ್ತೆಯಾದ ಕೆಲವು ದಿನಗಳ ನಂತರ, ಈ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳು ಈ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿ ಸಚಿನ್‌ ವಾಝೆ ಪಾಲ್ಗೊಂಡಿರುವುದನ್ನು ಮತ್ತಷ್ಟು ದೃಢಪಡಿಸಿದೆ ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಈ ಕುರಿತು ವರದಿ ಮಾಡಿರುವ ಫ್ರೀ ಪ್ರೆಸ್‌ … Continued

ಎಸ್‌ಯುವಿ ಜಿಲೆಟಿನ್‌ ಪ್ರಕರಣವೂ… ವಾಝೆ ಬಂಧನವೂ…ಮುಂಬೈ ಪೊಲೀಸ್‌ ಆಯುಕ್ತರ ವರ್ಗಾವಣೆಯೂ….

ಮುಂಬೈ : ಮುಂಬೈ ಪೊಲೀಸ್‌ ಆಯುಕ್ತ ಪರಮ್ ಬಿರ್ ಸಿಂಗ್ ಅವರನ್ನು ಮಹಾರಾಷ್ಟ್ರದ ಗೃಹರಕ್ಷಕ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ಬುಧವಾರ ಪ್ರಕಟಿಸಿದ್ದಾರೆ. ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹೇಮಂತ್ ನಾಗರಲೆ ಅವರು ಮುಂಬೈನ ಹೊಸ ಪೊಲೀಸ್ ಆಯುಕ್ತರಾಗಿದ್ದಾರೆ ಎಂದು ದೇಶಮುಖ್ ಹೇಳಿದ್ದಾರೆ. ವಿವಾದಿತ ಮುಂಬೈ ಪೊಲೀಸ್‌ ಆಯುಕ್ತ ಪರಮ್ … Continued

ಆಂಟಿಲಿಯಾ ಬಳಿ ಎಸ್‌ಯುವಿಯಲ್ಲಿ ಸ್ಫೋಟಕ ಪತ್ತೆ ಪ್ರಕರಣ: ಪೊಲೀಸ್‌ ಅಧಿಕಾರಿ ಸಚಿನ್ ವಾಝೆ ಮಾ.25ರ ವರೆಗೆ ಎನ್‌ಐಎ ಕಸ್ಟಡಿಗೆ

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ನ್ಯಾಯಾಲಯ ಮಾರ್ಚ್ 25ರವರೆಗೂ ರಾಷ್ಟ್ರೀಯ ತನಿಖಾ ದಳದ (ಎನ್ವ‌ಐಎ)ಶಕ್ಕೆ ನೀಡಿದೆ. ಶನಿವಾರ ಮಧ್ಯರಾತ್ರಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. … Continued

ಮುಂಬೈ ಸ್ಫೋಟದ ಆರೋಪಿ ಬಳಿ ಸಿಕ್ಕ ಅಂಬಾನಿಗೆ ಬೆದರಿಕೆ ಹೊಣೆ ಸಂದೇಶದ ಮೊಬೈಲ್..!‌

ಇಂಡಿಯನ್‌ ಮುಜಾಹಿದ್ದೀನ್ (ಭಾರತೀಯ ಮುಜಾಹಿದ್ದೀನ್‌) ಮುಖ್ಯಸ್ಥ ಮತ್ತು 2011ರ ಮುಂಬೈ ಸ್ಫೋಟ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ತೆಹ್ಸೀನ್ ಅಖ್ತರ್ ಸೇರಿದಂತೆ ನಾಲ್ವರು ಭಯೋತ್ಪಾದಕರು ತಿಹಾರ್ ಜೈಲಿನ ಒಳಗಿನಿಂದ ಸೆಲ್‌ಫೋನ್ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲ ಆಂಗ್ಲ ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ. ಕಳೆದ ತಿಂಗಳು ಮುಂಬೈನ ಮುಖೇಶ್ ಅಂಬಾನಿಯ ನಿವಾಸದ ಹೊರಗೆ ಜೆಲೆಟಿನ್ ತುಂಡುಗಳೊಂದಿಗೆ … Continued

ಆಂಟಿಲಿಯಾ ಬಾಂಬ್ ಬೆದರಿಕೆ ಪ್ರಕರಣ: ಜೈಶ್-ಉಲ್-ಹಿಂದ್ ಟೆಲಿಗ್ರಾಮ್ ಚಾನೆಲ್ ರಚಿಸಿದ್ದು ತಿಹಾರ್ ಜೈಲ್‌ ಪ್ರದೇಶದಲ್ಲಿ…!

ಮುಂಬೈ: ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕಗಳಿಂದ ತುಂಬಿದ ಎಸ್ಯುವಿಯನ್ನು ಇರಿಸಿದ್ದು ತಾನು ಎಂದು ಹೇಳಿದ್ದ ಜೈಶ್-ಉಲ್-ಹಿಂದ್ ಸಂಘಟನೆ ಟೆಲಿಗ್ರಾಮ್ ಚಾನೆಲ್ ಅನ್ನು ದೆಹಲಿಯ ತಿಹಾರ್ ಜೈಲ್‌ ಪ್ರದೇಶದಲ್ಲಿ ರಚಿಸಲಾಗಿದೆ ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. . ಈ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಅವರು … Continued