ಗಂಡಂದಿರ ಹೆಗಲ ಮೇಲೆ ಹೊತ್ತು ಓಡಿದ ಪತ್ನಿಯರು..!

ಚಿತ್ರಕೃಪೆ-ಇಂಟರ್‌ನೆಟ್

ಮಹಿಳಾ ದಿನಾಚರಣೆಯಂದು ನೇಪಾಲದಲ್ಲಿ ನಡೆದ ಕಾರ್ಯಕ್ರಮವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂದು ನೇಪಾಳದ ದೇವ್ಘಾಟ್ ಗ್ರಾಮ ಸಭೆ ಆಯೋಜಿಸಿದ್ದ ಸ್ಫರ್ಧೆಯೊಂದರಲ್ಲಿ ಮಹಿಳೆಯರು ತಮ್ಮ ಪತಿಯಂದಿರನ್ನು ಹೆಗಲ ಮೇಲೆ ಹೊತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಆಗಿದೆ.ವಿವಿಧ ವಯೋಮಾನಕ್ಕೆ ಸೇರಿದ 16 ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಸ್ಪರ್ಧೆ ಏನಪ್ಪಾ ಅಂದರೆ ಪತ್ನಿಯರು ತಮ್ಮ ತಮ್ಮ ಗಂಡಂದಿರನ್ನು ಹೆಗಲ ಮೇಲೆ ಹೊತ್ತು 100 ಮೀಟರ್‌ ಓಡುವುದು. ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನದ ಬದಲಾಗಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ.
ಮಹಿಳೆಯರು ಪುರುಷರಿಗಿಂತ ಯಾವುದೇ ವಿಧದಲ್ಲೂ ಸಹ ಕಡಿಮೆ ಇಲ್ಲ ಎಂಬ ಸಂದೇಶ ರವಾನೆ ಮಾಡಲು ಈ ಓಟ ಆಯೋಜಿಸಿದ್ದೇವೆ” ಎಂದು ಗ್ರಾಮ ಸಭೆಯ ಮುಖ್ಯಸ್ಥ ದುರ್ಗಾ ಬಹದ್ದೂರ್‌ ಥಾಪಾ ತಿಳಿಸಿದ್ದಾರೆ.

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement