ಮಹಾರಾಷ್ಟ್ರ: 16 ಸಾವಿರದ ಸಮೀಪಕ್ಕೆ ಬಂದ ಪ್ರತಿದಿನದ ಕೊರೊನಾ ಪ್ರಕರಣ…!

ಮುಂಬೈ: ಮಹಾರಾಷ್ಟ್ರದಲ್ಲಿ ಶುಕ್ರವಾರ (ಮಾರ್ಚ್ 12) 15,817 ಹೊಸ ಕೊವಿಡ್‌-19 ಪ್ರಕರಣಗಳು ವರದಿಯಾಗಿವೆ.
ಈ ವರ್ಷ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನದಲ್ಲಿ 15 ಸಾವಿರ ಕೊವಿಡ್‌-19 ಪ್ರಕರಣಗಳು ದಾಖಲಾಗಿವೆ. ಈ ವರ್ಷದ ಹಿಂದಿನ ಏಕದಿನದ ಗರಿಷ್ಠ ಏರಿಕೆ ಮಾರ್ಚ್ 11 ರ ಗುರುವಾರ 14,317 ಆಗಿತ್ತು.
ದಿನದಲ್ಲಿ 56 ಕೊವಿಡ್‌-19 ಸಾವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 52,723 ಕ್ಕೆ ತಲುಪಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ 2.31%.
ದಿನದಲ್ಲಿ 11,344 ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು, ಚೇತರಿಕೆ ಪ್ರಮಾಣ 92.79% ರಷ್ಟಿದೆ. ಮಹಾರಾಷ್ಟ್ರದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,10,485 ಪ್ರಕರಣಗಳಿವೆ.
ಮುಂಬೈ ವಲಯದಲ್ಲಿ 3137 ಹೊಸ ಪ್ರಕರಣಗಳನ್ನು ಶುಕ್ರವಾರ ದಾಖಲಾಗಿದೆ.ನಾಸಿಕ್ ವಲಯದಲ್ಲಿ 2907 ಪ್ರಕರಣಗಳು, ಪುಣೆ ವಲಯದಲ್ಲಿ 3,580 ಹೊಸ ಪ್ರಕರಣಗಳು ದಾಖಲಾಗಿವೆ.
ಏತನ್ಮಧ್ಯೆ, ಪರಭಾನಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗಿದೆ. ಶುಕ್ರವಾರ (ಮಾರ್ಚ್ 12) ಮಧ್ಯರಾತ್ರಿಯಿಂದ ಮಾರ್ಚ್ 15 ರಂದು ಬೆಳಿಗ್ಗೆ 6 ಗಂಟೆ ವರೆಗೆ ಲಾಕ್‌ಡೌನ್ ಜಾರಿಗೊಳಿಸಲಾಗುವುದು ಎಂದು ಸಚಿವ ನವಾಬ್ ಮಲಿಕ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement