ಬೆಳಗಾವಿಯಲ್ಲಿ ಮರಾಠಿ ನಾಮಫಲಕಕ್ಕೆ ಮಸಿ ಬಳಿದ ಕರವೇ

ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ನಾಮಫಲಕಗಳಿಗೆ ಕಪ್ಪು ಮಸಿ ಹಚ್ಚಿರುವುದಕ್ಕೆ ಪ್ರತಿಯಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿ ಶಿವಸೇನೆ ವಾಹನದ ಮೇಲಿನ ಶಿವಸೇನೆ ಫಲಕ್ಕಕ್ಕೆ ಕಪ್ಪು ಮಸಿ ಬಳಿದು ಫಲಕವ ಧ್ವಂಸ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ರಾಮಲಿಂಗ ಖಿಂಡ ಗಲ್ಲಿಯ ಎಂಇಎಸ್ ಕಚೇರಿಗೆ ನುಗ್ಗಲು ಕರವೇ ಕಾರ್ಯಕರ್ತರು ಯತ್ನಿಸಿದಾಗ ಪೋಲೀಸರು ತಡೆದಿದ್ದಾರೆ. ಆಗ ಶಿವಸೇನೆ ಮಾಜಿ ಜಿಲ್ಲಾಧ್ಯಕ್ಷ ಪ್ರಕಾಶ ಶಿರೋಳಕರ ಕಾರು ಅಲ್ಲಿಗೆ ಆಗಮಿಸಿದೆ. ಇದನ್ನು ನೋಡಿದ ಕರವೇ ಕಾರ್ಯಕರ್ತರು ಕಾರು ನಿಲ್ಲಿಸಿ ಕಾರಿನ ಮೇಲೆ ಹಾಕಲಾಗಿದ್ದ ಶಿವಸೇನೆ ಫಲಕಕ್ಕೆ ಕಪ್ಪು ಮಸಿ ಬಳಿದು,ಫಲಕವನ್ನೇ ಕಿತ್ತೆಸೆದಿದ್ದಾರೆ.
ಕನ್ನಡ ನಾಡಿನಲ್ಲಿ ಮರಾಠಿ ಭಾಷೆ ನಾಮಫಲಕ ಹಾಕದಂತೆ ಶಿವಸೇನೆಗೆ ಎಚ್ಚರಿಕೆ ನೀಡಲಾಗಿದೆ.
ಬೆಳಗಾವಿಯಲ್ಲಿ ಶಿವಸೇ‌ನೆ – ಕರವೇ ಮುಖಂಡರ ಮಧ್ಯೆ ವಾಗ್ವಾದ ನಡೆದಿದೆ.
ಶಿವಸೇನೆ ಮುಖಂಡನ ಕಾರಿನ ಮೇಲಿದ್ದ ಮರಾಠಿ ಬೋರ್ಡ್ ಕಿತ್ತು ಹಾಕಿದ ಕರವೇ ಕಾರ್ಯಕರ್ತರು ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿದ್ದ ಮರಾಠಿ ನಾಮಫಲಕಗಳಿಗೆ ಕಪ್ಪು ಮಸಿ ಬಳಿದಿದ್ದಾರೆ.  ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ್, ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ತೆರಳಿದ್ದ ಕರವೇ ಕಾರ್ಯಕರ್ತರು ಮರಾಠಿ ಫಲಕಕ್ಕೆ ಕಪ್ಪು ಮಸಿ ಬಳಿದಿದ್ದಾರೆ. ಆಗ ಶಿವಸೇನೆ ಹಾಗೂ ಕರವೇ ಕಾರ್ಯಕರ್ತರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ಇವರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ.ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ವಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement