೨೫ ಸಾವಿರದ ಸಮೀಪ ತಲುಪಿದ ದೇಶದ ದಿನವೊಂದರ ಕೊರೋನಾ ಪ್ರಕರಣಗಳ ಸಂಖ್ಯೆ ..!

ನವದೆಹಲಿ: ಕಳೆದ 24 ತಾಸಿನಲ್ಲಿ ದೇಶದಲ್ಲಿ 24,882 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇದು ಈ ವರ್ಷದಲ್ಲಿ ದಿನವೊಂದಕ್ಕೆ ದಾಖಲಾಗಿರುವ ಅತೀ ಹೆಚ್ಚು ಸಂಖ್ಯೆಯ ಪ್ರಕರಣಗಳಾಗಿವೆ. ಇದರಲ್ಲಿ ಮಾಹಾರಷ್ಟ್ರದ ಪ್ರಕರಣಗಳೇ ಅಧಿಕ. ಕಳೆದ ಒಂದು ದಿನದಲ್ಲಿ 140 ಸೋಂಕಿತರುಮೃತಪಟ್ಟಿದ್ದಾರೆ. ಈವರೆಗೆ ವರದಿಯಾದ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 1,13,33,728 ಆಗಿದೆ.
ಈವರೆಗೆ 1,58,189 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟು 2,02,022 ಸಕ್ರಿಯ ಪ್ರಕರಣಗಳಿದ್ದು, ಇಲ್ಲಿವರೆಗೆ 1,09,73,260 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 19,957 ಜನರ ಬಿಡುಗಡೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

 

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಭಾರತದ ಜೊತೆ ಪಾಕಿಸ್ತಾನದ ಕದನ ವಿರಾಮದ ಬಗ್ಗೆ ಚೀನಾ ಅಸಮಾಧಾನ? ಇದಕ್ಕೆ ಕಾರಣ ಏನು ಗೊತ್ತೆ...?

ನಿಮ್ಮ ಕಾಮೆಂಟ್ ಬರೆಯಿರಿ

advertisement