ದೇಶಾದ್ಯಂತ ವಿದ್ಯುತ್‌‌ ಬಳಕೆ ಹೆಚ್ಚಳ: ಆರ್ಥಿಕ ಪುನಶ್ಚೇತನದ ಸೂಚನೆ?

ನವದೆಹಲಿ: ಕಳೆದ ವರ್ಷ ಮಾರ್ಚ್‌ನ ಮೊದಲ ೧೨ ದಿನಗಳಿಗೆ ಹೋಲಿಕೆ ಮಾಡಿದರೆ, ವಿದ್ಯುತ್‌ ಬಳಕೆ ಪ್ರಮಾಣದಲ್ಲಿ ಶೇ.೧೬.೫ರಷ್ಟು ಹೆಚ್ಚಳವಾಗಿದ್ದು, ದೇಶದ ಆರ್ಥಿಕತೆ ಪುನಶ್ಚೇತನದತ್ತ ಸಾಗುತ್ತಿರುವುದನ್ನು ಇದು ಬಿಂಬಿಸುತ್ತದೆ ಎಂದು ಇಂಧನ ಸಚಿವಾಲಯ ಹೇಳಿದೆ.
ಕಳೆದ ವರ್ಷ ಮಾರ್ಚ್‌ ೧ರಿಂದ ೧೨ರವರೆಗೆ ೪೦.೯೨ ಶತಕೋಟಿ ಯುನಿಟ್‌ ಬಳಕೆಯಾಗಿದ್ದರೆ, ಇದೇ ಅವಧಿಯಲ್ಲಿ ಈ ವರ್ಷ ೪೭.೬೭ ಶತಕೋಟಿ ಯುನಿಟ್‌ ವಿದ್ಯುತ್‌ ಬಳಕೆಯಾಗಿದೆ. ಕಳೆದ ವರ್ಷ ಮಾರ್ಚ್‌ ೩ರಂದು ೧೭೦.೧೬ ಗಿಗಾವ್ಯಾಟ್‌ ದಿನದ ಗರಿಷ್ಠ ಬಳಕೆಯಾಗಿದ್ದರೆ, ಈ ವರ್ಷ ಮಾರ್ಚ್‌ ೧೧ರಂದು ೧೮೬.೦೩ ಗಿಗಾವ್ಯಾಟ್‌ ಬಳಕೆಯಾಗಿದೆ ಕಳೆದ ವರ್ಷ ಮಾರ್ಚ್‌ನಲ್ಲಿ ೯೮.೯೫ ಶತಕೋಟಿ ಯುನಿಟ್‌ ಬಳಕೆಯಾಗಿತ್ತು. ಈವರ್ಷ ಮಾಸಾಂತ್ಯಕ್ಕೆ ವಿದ್ಯುತ್‌ ಬಳಕೆ ಪ್ರಮಾಣ ಇದಕ್ಕಿಂತ ಹೆಚ್ಚಾಗಿರಲಿದೆ ಎಂದು ಸಚಿವಾಲಯದ ಅಧಿಕಾರಿಗಳು ಅಂದಾಜಿಸಿದ್ದಾರೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

ನಿಮ್ಮ ಕಾಮೆಂಟ್ ಬರೆಯಿರಿ

advertisement