ಇಂದಿನಿಂದ ಎರಡು ದಿನಗಳ ಬ್ಯಾಂಕ್‌ ಮುಷ್ಕರ, ೧೦ ಲಕ್ಷ ಸಿಬ್ಬಂದಿ ಪಾಲ್ಗೊಳ್ಳುವ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರದ ಬ್ಯಾಂಕ್‌ಗಳ ಖಾಸಗೀಕರಣ ಹಾಗೂ ವಿಲೀನಗೊಳಿಸುವುದನ್ನು ವಿರೋಧಿಸಿ ಮಾ.೧೫ ಹಾಗೂ ೧೬ರಂದು ಎರಡು ದಿನಗಳ ಕಾಲ ಬ್ಯಾಂಕ್‌ ಮುಷ್ಕರ ನಡೆಯಲಿದೆ.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಸೋಮವಾರ ಮತ್ತು ಮಂಗಳವಾರ ಬ್ಯಾಂಕಿಂಗ್ ಸೇವೆಗಳ ಮೇಲೆ ವ್ಯತ್ಯಾಸವಾಗಬಹುದಾಗಿದೆ. ಮಾ.೧೩ ಹಾಗೂ ೧೪ರಂದು ಏರಡನೇ ಶನಿವಾರ ಹಾಗೂ ಭಾನುವಾದ ಕಾರಣ ರಜೆಗಳಿದ್ದವು. ಈಗ ಸೋಮವಾರ ಹಾಗೂ ಮಂಗಳವಾರವೂ ಮುಷ್ಕರ ಇರುವುದರಿಂದ ಬ್ಯಾಂಕಿಂಗ್‌ ಸೇವೆಗಳಲ್ಲಿ ವ್ಯತ್ಯಾಸವಾದರೆ ಗ್ರಾಹಕರಿಗೆ ತೊಂದರೆಯಾಗಲಿದೆ, ವಿಶೇಷವಾಗಿ ವ್ಯವಹಾರಗಳಿಗೆ ತೊಂದರೆಯಾಗಲಿದೆ.
ಎರಡು ದಿನಗಳ ಬ್ಯಾಂಕ್‌ ಮುಷ್ಕರಕ್ಕೆ 10 ಕ್ಕೂ ಹೆಚ್ಚು ಬ್ಯಾಂಕ್‌ ಯುನಿಯನ್‌ಗಳು ಕರೆಕೊಟ್ಟಿದ್ದರಿಂದ ಸುಮಾರು 10 ಲಕ್ಷ ಬ್ಯಾಂಕ್ ನೌಕರರು ಮತ್ತು ಬ್ಯಾಂಕುಗಳ ಅಧಿಕಾರಿಗಳು ಪಾಲ್ಗೊಳ್ಳುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರದ ಬ್ಯಾಂಕ್‌ ಖಾಸಗೀಕರಣ ಹಾಗೂ ವಿಲೀನ ಪ್ರಕ್ರಿಯೆ ವಿರೋಧಿಸಿ ಪ್ರತಿಭಟನೆ ನಡೆಯಲಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ ಹೆಚ್ ವೆಂಕಟಾಚಲಂ ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ 14 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸಿದೆ. ಬ್ಯಾಂಕ್‌ಗಳನ್ನು ವಿಲೀನ ಗೊಳಿಸುವ ಪ್ರಕ್ರಿಯೆ ಬ್ಯಾಂಕ್‌ ಸಿಬ್ಬಂದಿಗೆ ಈಗ ತಲೆನೋವಾಗಿ ಪರಿಣಮಿಸಿದೆ.ಎಟಿಎಂ ಸೇವೆಗಳು ಸೇರಿದಂತೆ ಬ್ಯಾಂಕ್ ಸೇವೆಗಳಿಗೆ, ವಿಶೇಷವಾಗಿ ಸರ್ಕಾರಿ ಬ್ಯಾಂಕುಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಆದರೆ ಆನ್‌ಲೈನ್‌ನಲ್ಲಿ ಬ್ಯಾಂಕ್ ಸಂಬಂಧಿತ ಕೆಲವು ಕೆಲಸವನ್ನು ಮಾಡಬಹುದು ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

5 / 5. 1

ಶೇರ್ ಮಾಡಿ :

  1. geek

    ಎಲ್ಲವನ್ನೂ ಖಾಸಗೀಕರಣ ಮಾಡುವ ತೀವ್ರ ಬಂಡವಾಳಶಾಹಿ ವ್ಯವಸ್ಥೆಯನ್ನು ಅನುಸರಿಸುತ್ತಿದ್ದ ಮೋದಿ ಸರಕಾರ ಈ ಮುಷ್ಕರಗಳಿಂದಾದರೂ ಎಚ್ಚೆತ್ತುಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ರೈತರ ಮುಷ್ಕರವನ್ನು ಮೋದಿ ಸರಕಾರ ನಡೆಸಿಕೊಂಡ ರೀತಿ ನೋಡಿದರೆ ದೇಶವನ್ನು ಖಾಸಗೀಕರಣದ ಮೂಲಕ ವಿದೇಶಿ ಬಂಡವಾಳಶಾಹಿಗಳಿಗೆ ಒಪ್ಪಿಸುವ ಕುರಿತು ಮೋದಿ ಸರಕಾರ ಹಟತೊಟ್ಟು ನಿಂತಂತಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement